ಐಪಿಎಲ್​ 18ನೇ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ! ಈ 4 ಕಾರಣಗಳೇ CSK ಹೀನಾಯ ಸೋಲಿಗೆ ಕಾರಣ​

ವಿಜಯವಾಣಿ (43)
Published on

CSK: ಐಪಿಎಲ್​ 18ನೇ ಆವೃತ್ತಿ ಶುರುವಾದಗಿನಿಂದಲೂ ಕೇವಲ ಎರಡು ಪಂದ್ಯ ಗೆದ್ದಿದ್ದು ಬಿಟ್ಟರೆ ಇನ್ನುಳಿದ ಪಂದ್ಯಗಳನ್ನೆಲ್ಲ ಐದು ಬಾರಿ ಚಾಂಪಿಯನ್ಸ್ ತಂಡ ಹೀನಾಯವಾಗಿ ಸೋತಿದೆ. ಕಳೆದ ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಐಪಿಎಲ್​ ಅಂಕಪಟ್ಟಿಯಲ್ಲಿ ಟಾಪ್​ ಐದು ಅಥವಾ ಆರನೇ ಸ್ಥಾನದಲ್ಲಿ ಸೆಣಸಾಡುತ್ತಿದ್ದ ಸಿಎಸ್​ಕೆ, ಇದೇ ಮೊದಲ ಬಾರಿ ಅತ್ಯಂತ ಕಳಪೆ ಪ್ರದರ್ಶನ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕಾಗಿ ಬಡಿದಾಡುತ್ತಿದೆ. ಸದ್ಯ ಇದು ಫ್ರಾಂಚೈಸಿ ಅಭಿಮಾನಿಗಳಲ್ಲಿ ತೀರ ಬೇಸರ ಮೂಡಿಸಿದೆ.

ಇಲ್ಲಿಯವರೆಗೆ ಆಡಿರುವ 8 ಪಂದ್ಯಗಳಲ್ಲಿ ಆರು ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿರುವ ಸಿಎಸ್​ಕೆ, ಕಳೆದ ಎರಡು ಮ್ಯಾಚ್​ನಿಂದ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಮುಂದೆ ಸಾಗುತ್ತಿದೆ. ರುತುರಾಜ್ ಗಾಯಕ್ವಾಡ್​ ಗಾಯದಿಂದ ಬಳಲುತ್ತಿದ್ದ ಹಿನ್ನೆಲೆ ಅವರನ್ನು ತಂಡದಿಂದ ಕೈಬಿಡಲಾಯಿತು. ತಕ್ಷಣವೇ ಮತ್ತೊಮ್ಮೆ ಸಿಎಸ್​ಕೆ ನಾಯಕ​ ಸ್ಥಾನಕ್ಕೇರಿದ ಕ್ಯಾಪ್ಟನ್ ಕೂಲ್​, ತಮ್ಮ ತಂಡವನ್ನು ಅದ್ಭುತ ಗೆಲುವಿನೆಡೆಗೆ ಕೊಂಡೊಯ್ಯುವಲ್ಲಿ ವಿಫಲರಾಗಿದ್ದಾರೆ.

ಸತತ ಸೋಲಿಗೆ 4 ಕಾರಣ

1. ಆಕ್ರಮಣಕಾರಿ ಬ್ಯಾಟಿಂಗ್​ ಇಲ್ಲ: ಈ ಬಾರಿಯ ಸಿಎಸ್​ಕೆ ತಂಡದಲ್ಲಿ ಉತ್ತಮ ಬ್ಯಾಟಿಂಗ್ ಲೈನ್​ ಇಲ್ಲ ಎಂಬ ಸಂಗತಿ ಕ್ರಿಕೆಟ್​ ಪ್ರಿಯರಿಗೆ ಸ್ಪಷ್ಟವಾಗಿದೆ. ಅದರಲ್ಲೂ ತಂಡದ ಪರ ಓಪನಿಂಗ್ ಆಡುವ ಬ್ಯಾಟರ್​ಗಳಿಂದ ಅಬ್ಬರದ ಇನ್ನಿಂಗ್ಸ್ ಬರುತ್ತಿಲ್ಲ. ಪವರ್​ಪ್ಲೇಯಲ್ಲಿ ಬರಬೇಕಾದ ರನ್​ಗಳ ಹೊಳೆ ಕಣ್ಮರೆಯಾಗಿದೆ. ರಚಿನ್ ರವೀಂದ್ರ ಮತ್ತು ರುತುರಾಜ್ ಗಾಯಕ್ವಾಡ್​ ಜೋಡಿ ಆರಂಭದಲ್ಲಿ ವಿಫಲರಾದರೆ, ನಂತರದಲ್ಲಿ ಡೇವನ್ ಕಾನ್ವೆ ಕೂಡ ಅವರ ಹಾದಿಯನ್ನೇ ಹಿಡಿದರು. ಈ ಕಾರಣದಿಂದ ಓಪನಿಂಗ್​ ಜೋಡಿಗಳು ಹಲವಾರು ಬಾರಿ ಬದಲಾಗಿದ್ದಾರೆ.

ಇದನ್ನೂ ಓದಿ: ಟಾಸ್​ ವೇಳೆ ಮದುವೆ ವಿಚಾರ ಪ್ರಸ್ತಾಪ! ಪ್ರಶ್ನೆ ಕೇಳಿದವರಿಗೆ ಗಿಲ್​ ಕೊಟ್ಟ ಶಾಕಿಂಗ್ ಉತ್ತರ ವೈರಲ್​ | Shubman Gill2. ದಿಗ್ಗಜರು: ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ ಮತ್ತು ಆರ್​. ಅಶ್ವಿನ್​ ತಮ್ಮ ಪಾತ್ರವನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. 43ನೇ ವಯಸ್ಸಿನಲ್ಲೂ ತಂಡಕ್ಕೆ ಕೊಡುಗೆ ನೀಡಲು ಶ್ರಮಿಸುತ್ತಿರುವ ಧೋನಿ, ತಮಗೆ ಸಿಕ್ಕ ಅವಕಾಶದಲ್ಲಿ ಅಲ್ಲಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ. ಆದರೆ, ಜಡೇಜಾ ಒಂದೆರೆಡು ಮ್ಯಾಚ್​ ಹೊರತುಪಡಿಸಿದರೆ ಉಳಿದೆಲ್ಲ ಪಂದ್ಯಗಳಲ್ಲಿಯೂ ಕಳಪೆ ಆಟ ಮುಂದುವರಿಸಿದ್ದಾರೆ. ಇನ್ನು ಅಶ್ವಿನ್​ ಔಟ್​ ಆಫ್​ ಫಾರ್ಮ್​ನಲ್ಲಿದ್ದಾರೆ.

3. ಕಳಪೆ ಮಟ್ಟದ ಫೀಲ್ಡಿಂಗ್​: ಬ್ಯಾಟಿಂಗ್​, ಬೌಲಿಂಗ್​ನಲ್ಲಿ ಮಾತ್ರ ಕಳಪೆ ಪ್ರದರ್ಶನ ತೋರದ ಸಿಎಸ್​ಕೆ ಆಟಗಾರರು, ಫೀಲ್ಡಿಂಗ್​ನಲ್ಲಿಯೂ ತಮ್ಮ ಕಳಪೆ ಆಟ ತೋರಿದ್ದಾರೆ. ಆಯಾ ಪಂದ್ಯಗಳಲ್ಲಿ ತಮ್ಮ ಕೈಗೆ ಸಿಕ್ಕ ಕ್ಯಾಚ್​ಗಳನ್ನು​ ಬಿಡುವ ಮೂಲಕ ಗೆಲುವನ್ನು ಸುಲಭವಾಗಿ ಕೈಚೆಲ್ಲಿದ್ದಾರೆ. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಹೊಟ್ಟೆ ಉರಿ ಹೆಚ್ಚಾಗುತ್ತಿದೆಯೇ? ಹಾಗಿದ್ರೆ ಈ ಮನೆಮದ್ದನ್ನು ಒಮ್ಮೆ ಪ್ರಯತ್ನಿಸಿ ರಿಸಲ್ಟ್​​ ನೀವೇ ನೋಡಿ..| Summer4. ಸ್ಪಿನ್​ಗಿಲ್ಲ ಗತ್ತು-ಗಮ್ಮತ್ತು: ಇನ್ನು ಸ್ಪಿನ್​ ದಾಳಿ ನಡೆಸುವಲ್ಲಿ ತೀರ ವಿಫಲರಾಗಿರುವ ಸಿಎಸ್​ಕೆ ಸ್ಪಿನ್ನರ್ಸ್​, ಎದುರಾಳಿ ವಿಕೆಟ್​ಗಳನ್ನು ಕಬಳಿಸಲು ಪರದಾಡುತ್ತಿದ್ದಾರೆ. ಈ ಸೀಸನ್​ನಲ್ಲಿ ಅತ್ಯಧಿಕ ವಿಕೆಟ್​ಗಳನ್ನು ಪಡೆದಿರುವ ನೂರ್​ ಅಹ್ಮದ್​ರನ್ನು​ ಹೊರತುಪಡಿಸಿದರೆ ಅಶ್ವಿನ್​, ಜಡೇಜಾ ತಮ್ಮ ಕೈಚಳಕ ತೋರುವಲ್ಲಿ ಸೋತಿದ್ದಾರೆ. ಈ ನಾಲ್ಕು ಅಂಶಗಳು ಸಿಎಸ್​ಕೆ ಸತತ ಸೋಲಿನಲ್ಲಿ ಬಹುದೊಡ್ಡ ಪಾತ್ರವನ್ನೇ ವಹಿಸಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net