

Shubman Gill: ಇಂದು (ಏ.21) ಈಡೆನ್ ಗಾರ್ಡೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ಕೋಲ್ಕತ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದ ಟಾಸ್ ವೇಳೆ ಜಿಟಿ ಕ್ಯಾಪ್ಟನ್ ಶುಭಮನ್ ಗಿಲ್ ಕೊಟ್ಟ ಉತ್ತರವೊಂದು ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ ಮತ್ತು ಗುಜರಾತ್ ಟೈಟಾನ್ಸ್ ಪರ ಗಿಲ್ ಟಾಸ್ಗಾಗಿ ಕಣಕ್ಕಿಳಿದರು. ಈ ವೇಳೆ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ರಹಾನೆ, "ನಾವೇ ಮೊದಲು ಬೌಲಿಂಗ್ ಮಾಡುತ್ತೇವೆ. ಕಾರಣ, ಇದೊಂದು ಚೇಸಿಂಗ್ ಗ್ರೌಂಡ್. ಹಿಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಾವು ಸಾಕಷ್ಟು ತಪ್ಪುಗಳನ್ನು ಮಾಡಿದ್ದೇವೆ. ಆ ತಪ್ಪು ಇಲ್ಲಿ ಮಾಡುವುದಿಲ್ಲ" ಎಂದರು.
ಈ ವೇಳೆ ಡ್ಯಾನಿ ಮಾರಿಸನ್ಗೆ ಉತ್ತರಿಸಿದ ಗಿಲ್, "ಈಡನ್ ಗಾರ್ಡನ್ಸ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಲು ನಮಗೇನು ಅಭ್ಯಂತರವಿಲ್ಲ. ನಮ್ಮ ಬೌಲಿಂಗ್ ಉತ್ತಮವಾಗಿದೆ" ಎಂದು ಹೇಳಿದರು. ಇತ್ತೀಚಿಗಿನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಶುಭಮನ್ ಮದುವೆ ವಿಚಾರ ಕೆದಕಿದ ಡ್ಯಾನಿ, "ಮದುವೆ ಕಥೆ ಏನು? ಏನಾದರೂ ಸುದ್ದಿ ಇದೆಯೇ ನಮಗೆ" ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಶುಭಮನ್, "ಆ ರೀತಿ ಏನ್ನಿಲ್ಲ. ಸದ್ಯಕ್ಕೆ ನಾನು ಮದುವೆಯಾಗುತ್ತಿಲ್ಲ" ಎಂದು ಖಡಕ್ ಆಗಿ ಹೇಳಿದರು. ಗಿಲ್ ಹೇಳಿಕೆ ಅವರ ಫ್ಯಾನ್ಸ್ಗಳಲ್ಲಿ ಬೇಸರ ಮೂಡಿಸಿದೆ,(ಏಜೆನ್ಸೀಸ್).
ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್ (ಕ್ಯಾಪ್ಟನ್), ಸಾಯಿ ಸುದರ್ಶನ್, ಜೋಸ್ ಬಟ್ಲರ್, ಶೆರ್ಫೇನ್ ರುದರ್‌ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ವಾಷಿಂಗ್ಟನ್ ಸುಂದರ್, ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್, ಪ್ರಸೀದ್ ಕೃಷ್ಣ
ಕೋಲ್ಕತ್ತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಜ್, ಸುನಿಲ್ ನರೈನ್, ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮೊಯಿನ್ ಅಲಿ, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.