

ಮೇಷ: ವಿದ್ಯಾರ್ಥಿಗಳಿಗೆ ಮನಸ್ಸಿನಲ್ಲಿ ಆತಂಕ. ಉದ್ಯೋಗಕ್ಕಾಗಿ ದೂರ ಪ್ರಯಾಣ ಮಾಡಬೇಕಾಗುವುದು. ವ್ಯಾಪಾರದಲ್ಲಿ ಲಾಭವಿಲ್ಲ. ಶುಭಸಂಖ್ಯೆ: 5
ವೃಷಭ: ಕುಟುಂಬದಲ್ಲಿ ಮಾನಸಿಕ ಅಶಾಂತಿ. ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಶತ್ರುಗಳ ಕಿರಿಕಿರಿ ಜಾಸ್ತಿಯಾಗಲಿದೆ. ಶುಭಸಂಖ್ಯೆ:1
ಮಿಥುನ: ಶಿಕ್ಷಕ ವೃತ್ತಿಯವರಿಗೆ ಶುಭದಾಯಕ ದಿನವಲ್ಲ. ವಿವಾದಗಳಲ್ಲಿ ಸಿಲುಕಿಕೊಳ್ಳುತ್ತೀರಿ. ದುಬಾರಿ ವಸ್ತುಗಳ ಕಳ್ಳತನವಾಗುವ ಸಾಧ್ಯತೆ. ಶುಭಸಂಖ್ಯೆ: 8
ಕಟಕ: ಆದಾಯದಲ್ಲಿ ಕೊರತೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಅಗತ್ಯ. ಆಸ್ತಿ ಖರೀದಿಸಲು ಇದು ಸಕಾಲವಲ್ಲ. ದಿನಸಿ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 4
ಸಿಂಹ: ನೀರಿನಿಂದ ಸಮಸ್ಯೆ ಉಂಟಾಗುತ್ತದೆ. ಶುಭಕಾರ್ಯಕ್ಕೆ ಖರ್ಚು ವೆಚ್ಚಗಳು ಹೆಚ್ಚು. ಮಾತಿನಲ್ಲಿ ಅಸಹನೆ ತೋರಿಸದಿರಿ. ಶುಭಸಂಖ್ಯೆ: 9
ಕನ್ಯಾ: ತಲೆನೋವಿನ ಸಮಸ್ಯೆ ತುಸು ಹೆಚ್ಚೇ ಕಾಡುವುದು. ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ದೊರೆಯುವುದು. ಸದಾ ಸಂತಸದಿಂದ ಇರಲು ಪ್ರಯತ್ನಿಸಿ. ಶುಭಸಂಖ್ಯೆ: 7
ತುಲಾ: ವ್ಯಾಪಾರದಲ್ಲಿ ಮುನ್ನಡೆ. ಹೈನುಗಾರಿಕೆಯಲ್ಲಿ ಮಾಲೀಕರಿಗೆ ಹೆಚ್ಚಿನ ಆದಾಯ ಬರಲಿದೆ. ಮಂಗಳ ಕಾರ್ಯಕ್ಕೆ ಸಿದ್ಧತೆ ನಡೆಸುವಿರಿ. ಶುಭಸಂಖ್ಯೆ: 3
ವೃಶ್ಚಿಕ: ಕಾನೂನು ವ್ಯಾಜ್ಯಗಳಲ್ಲಿ ಜಯ. ಆಮದು ರಫ್ತು ವ್ಯವಹಾರದಲ್ಲಿ ಅನುಕೂಲ. ಹೋಟೆಲ್ ವ್ಯವಹಾರದಲ್ಲಿ ಆರ್ಥಿಕವಾಗಿ ಸಂಕಷ್ಟ. ಶುಭಸಂಖ್ಯೆ:5
ಧನಸ್ಸು: ಸ್ತ್ರೀಯರಿಗೆ ಅಮೂಲ್ಯ ವಸ್ತುಗಳ ಖರೀದಿಯಲ್ಲಿ ಮೋಸ. ತಂದೆಯ ಆರೋಗ್ಯದಲ್ಲಿ ಸಮಸ್ಯೆ. ಆಸ್ತಿ ಖರೀದಿಯಿಂದ ಶುಭ. ಶುಭಸಂಖ್ಯೆ:7
ಮಕರ: ಪಾರಂಪರಿಕ ವೃತ್ತಿಯಲ್ಲಿ ಶುಭ. ಆದಾಯ ತೆರಿಗೆ ಅಧಿಕಾರಿಗಳಿಗೆ ಕಾರ್ಯದೊತ್ತಡ. ಸಾರಿಗೆ ವಾಹನ ನಡೆಸುತ್ತಿರುವವರಿಗೆ ಲಾಭ. ಶುಭಸಂಖ್ಯೆ: 2
ಕುಂಭ: ಮಗಳ ವಿವಾಹಕ್ಕೆ ತಯಾರಿ. ಸಂತಾನಾಕಾಂಕ್ಷಿಗಳಿಗೆ ಅಶುಭ. ವ್ಯಾಪಾರದಲ್ಲಿ ಆದಾಯ. ಜಿಮ್ ತರಬೇತುದಾರರಿಗೆ ಲಾಭ. ಶುಭಸಂಖ್ಯೆ:6
ಮೀನ: ಕೃಷಿ ಭೂಮಿ ಕೊಳ್ಳುವ ಯೋಚನೆ ಮಾಡುವಿರಿ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ. ಉನ್ನತ ವಿದ್ಯಾಭ್ಯಾಸಕ್ಕಾಗಿ ಹಣ ವ್ಯಯ. ಶುಭಸಂಖ್ಯೆ: 4