ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವಾಹನ ಖರೀದಿ ಯೋಗ

Nitya Bhavisya Vijayavani
Published on

ಮೇಷ: ಧನ ನಷ್ಟವಾಗುವುದು. ಮನಕ್ಲೇಷ. ಅಮೂಲ್ಯ ವಸ್ತುಗಳ ಕಳವು ಸಾಧ್ಯತೆ. ಮಾತಿನ ಚಕಮಕಿಯಿಂದಾಗಿ ಬೇಸರ. ಶುಭಸಂಖ್ಯೆ: 6

ವೃಷಭ: ಲೇವಾದೇವಿ ವ್ಯವಹಾರದಲ್ಲಿ ಮೋಸ. ಕುಲದೇವರ ದೇವಾಲಯಕ್ಕೆ ಭೇಟಿ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ:6

ಮಿಥುನ: ದಿನಸಿ ವರ್ತಕರಿಗೆ ಧನಲಾಭವಾಗಲಿದೆ. ವಾಹನ ಖರೀದಿ ಯೋಗ. ಬಡವರಿಗೆ ಸಹಾಯ ಮಾಡಿ. ಹಿರಿಯರಿಂದ ಉಪದೇಶ. ಶುಭಸಂಖ್ಯೆ: 7

ಕಟಕ: ಗಣಕ ಯಂತ್ರದಿಂದ ಲಾಭವಾಗಲಿದೆ. ಅಲಂಕಾರಿಕ ವಸ್ತು ಖರೀದಿಯಿಂದ ಖರ್ಚು, ಆಟೋಮೊಬೈಲ್ ವರ್ತಕರಿಗೆ ಧನ ನಷ್ಟ. ಶುಭಸಂಖ್ಯೆ:1

ಸಿಂಹ: ಮೇಲಧಿಕಾರಿಗಳಿಂದ ತೊಂದರೆ ಸಾಧ್ಯತೆ. ಶರೀರದಲ್ಲಿ ಸಕ್ಕರೆ ಅಂಶ ಹೆಚ್ಚಿ ಆತಂಕ. ಸಾಲ ಮರುಪಾವತಿ ಮಾಡಿದ ಸಮಾಧಾನ. ಶುಭಸಂಖ್ಯೆ:3

ಕನ್ಯಾ: ಭೂಮಿಯನ್ನು ಖರೀದಿಸುವ ಯೋಗವಿದೆ. ಸಹೋದರರ ಜೊತೆಯಲ್ಲಿ ಕಲಹ, ವಿವೇಚನೆ ಅಗತ್ಯ. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ:1

ತುಲಾ: ಮಾನಸಿಕ ವೇದನೆಯಾದೀತು. ಕಾರ್ಖಾನೆಯ ಕೆಲಸಾಗರರಿಗೆ ಅಗ್ನಿಭಯ ಕಾಡುವುದು. ಮನೆಯಲ್ಲಿ ಅಶಾಂತಿಯ ವಾತಾವರಣ. ಶುಭಸಂಖ್ಯೆ:4

ವೃಶ್ಚಿಕ: ಅಣ್ಣನ ಆರೋಗ್ಯದಲ್ಲಿ ಏರುಪೇರು. ಸರ್ಕಾರಿ ಅಧಿಕಾರಿಗಳೊಂದಿಗೆ ಚಕಮಕಿ. ಧನನಷ್ಟ. ಆರಕ್ಷಕ ವೃತ್ತಿಯವರಿಗೆ ಅಡಚಣೆ. ಶುಭಸಂಖ್ಯೆ:7

ಧನಸ್ಸು: ಹೊಸ ಯೋಜನೆ ಪ್ರಾರಂಭವಾಗುವುದು. ಅಡಕೆ ವ್ಯವಸಾಯದಲ್ಲಿ ಲಾಭ ಬರಲಿದೆ. ಭೂ ವ್ಯವಹಾರದಲ್ಲಿ ನಿರೀಕ್ಷಿತ ವರಮಾನ. ಶುಭಸಂಖ್ಯೆ:9

ಮಕರ: ಮಹಿಳೆಯರಿಗೆ ಬಂಗಾರ ಪ್ರಾಪ್ತಿ. ಗುರುಹಿರಿಯರ ದರ್ಶನ. ಬಂಧುಗಳಿಂದ ಮಾನ್ಯತೆ. ಟ್ರಾವೆಲ್ಸ್ನವರಿಗೆ ಅಧಿಕ ಲಾಭ. ಶುಭಸಂಖ್ಯೆ:3

ಕುಂಭ: ಅನಗತ್ಯ ಅಲೆದಾಟ. ಅಕಾಲ ಭೋಜನದಿಂದ ಅನಾರೋಗ್ಯ. ಕಲಾವಿದರಿಗೆ ಧನ ನಷ್ಟವಾಗುವುದು. ಬ್ಯಾಂಕ್ ಸಾಲ ಸಿಗಲಿದೆ. ಶುಭಸಂಖ್ಯೆ: 2

ಮೀನ: ಶರೀರದಲ್ಲಿ ತಳಮಳ ಭಾವ. ವೈದ್ಯರ ಭೇಟಿ. ಉದರ ನೋವು. ಶತ್ರುವಿನಿಂದ ಪದವಿ ಪ್ರಾಪ್ತಿಯಲ್ಲಿ ತೊಂದರೆಯಾಗಬಹುದು. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net