ಕೊಲೆಗೈಯಲು ಗೂಗಲ್​ ಸರ್ಚ್​! ಕಾಮದಾಟಕ್ಕೆ ಅಡ್ಡಿಯಾದ ಪತಿಗೆ ಗುಂಡಿ ತೋಡಿದ ಪಾಪಿ ಪತ್ನಿ | Husband Murder

ವಿಜಯವಾಣಿ (28)
Published on

Husband Murder: ವಿದ್ಯುತ್ ಶಾಕ್​ನಿಂದ ಪತಿ ಮೃತಪಟ್ಟಿದ್ದಾನೆ ಎಂದು ಎಲ್ಲರ ಕಣ್ಣಿಗೆ ಮಣ್ಣೆರಚ್ಚಿದ್ದ ಮಹಿಳೆಯ ಕಣ್ಣೀರಿನ ನಾಟಕ ಕಡೆಗೂ ಬಟಾಬಯಲಾಗಿದೆ. ತನ್ನ ಕಾಮತೃಷೆಗೆ ಗಂಡನನ್ನೇ ಬಲಿಕೊಟ್ಟ ಈಕೆಯ ಕೃತ್ಯ ಸದ್ಯ ದೇಶದ ಜನತೆಯನ್ನು ಬೆಚ್ಚಿಬೀಳಿಸಿದೆ. ಕಳೆದ ಕೆಲವು ತಿಂಗಳಲ್ಲಿ ಇಂಥಾ ಪ್ರಕರಣಗಳು ತೀವ್ರ ಹೆಚ್ಚಾಗಿದ್ದು, ಮದುವೆಯ ಕನಸು ಹೊತ್ತಿರುವ ಆದೆಷ್ಟೋ ಯುವಕರಲ್ಲಿ ಆತಂಕ ಸೃಷ್ಟಿಯಾಗಿದೆ.

ಹೆಂಡತಿಯ ಕಾಮದಾಟಕ್ಕೆ ಬಲಿಯಾದ ವ್ಯಕ್ತಿಯನ್ನು ಕರಣ್ ದೇವ್​ ಎಂದು ಗುರುತಿಸಲಾಗಿದೆ. ಸುಶ್ಮಿತಾ ಮತ್ತು ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ರಾಹುಲ್ ಜೊತೆಗೂಡಿ ಅಮಾಯಕನ ಪ್ರಾಣ ತೆಗೆದಿರುವುದು ಪೊಲೀಸರ ವಿಚಾರಣೆಯಲ್ಲಿ ಸ್ಪಷ್ಟವಾಗಿದೆ. ಕರಣ್​ನ ಸೋದರ ಸಂಬಂಧಿ ಜತೆಗೆ ದೈಹಿಕ ಸಂಬಂಧ ಇಟ್ಟುಕೊಂಡಿದ್ದ ಸುಶ್ಮಿತಾ, ಪತಿಯ ಇರುವಿಕೆಯೇ ತನ್ನ ಕಾಮದಾಟಕ್ಕೆ ಅಡ್ಡಿಯಾಗಿದೆ ಎಂದು ಭಾವಿಸಿ, ಊಟದಲ್ಲಿ 15 ನಿದ್ದೆ ಮಾತ್ರಗಳನ್ನು ಬೆರೆಸಿ ಕೊಟ್ಟು, ಕೊಲೆಗೈದಿರುವುದು ಖಾಕಿ ತನಿಖೆಯಲ್ಲಿ ಬಯಲಾಗಿದೆ.

ಕೊಲೆಗೆ ಗೂಗಲ್​ನಲ್ಲಿ ರಿಸರ್ಚ್​!

ಕರಣ್​ ಹತ್ಯೆಗೆ ಸಂಚು ಹೂಡಲು ರಾಹುಲ್​ ಜೊತೆ ಕೈಜೋಡಿಸಿದ ಪಾಪಿ ಪತ್ನಿ ಸುಶ್ಮಿತಾ, ಹಲವು ದಿನಗಳಿಂದ ಇದಕ್ಕಾಗಿ ಸುದೀರ್ಘ ಮಾತುಕತೆಯನ್ನು ನಡೆಸಿದ್ದಾರೆ. ಹೆಚ್ಚಾಗಿ ಆನ್​ಲೈನ್​ ಚಾಟಿಂಗ್​ನಲ್ಲಿ ಬಹುತೇಕ ವಿಷಯಗಳನ್ನು ಚರ್ಚಿಸಿದ್ದಾರೆ. ಯಾವ ರೀತಿ ಕೊಲೆ ಮಾಡಿದರೆ, ನಮ್ಮ ಕೈವಾಡ ತಿಳಿಯುವುದಿಲ್ಲ ಎಂಬುದನ್ನು ಚಿಂತಿಸಿದ್ದಾರೆ. ಇದೆಲ್ಲಕ್ಕಿಂತ ಮಿಗಿಲಾಗಿ, ನಿದ್ದೆ ಮಾತ್ರೆಗಳನ್ನು ಕೊಟ್ಟ ಎಷ್ಟು ಗಂಟೆಗಳ ಬಳಿಕ ವ್ಯಕ್ತಿ ಸಾವಿಗೀಡಾಗುತ್ತಾನೆ ಎಂಬ ಮಾಹಿತಿಯನ್ನು ಗೂಗಲ್​ನಲ್ಲಿ ಹುಡುಕಿರುವುದು ಅವರಿಬ್ಬರ ಚಾಟಿಂಗ್​ನಲ್ಲಿ ತಿಳಿದುಬಂದಿದೆ.

ಏನಿದು ಘಟನೆ?

ಜುಲೈ 13ರಂದು ದೆಹಲಿಯ ಕರಣ್ ದೇವ್​ನನ್ನು ಆಸ್ಪತ್ರೆಗೆ ದಾಖಲಿಸಿದ ಕಿರಾತಕಿ ಪತ್ನಿ ಸುಶ್ಮಿತಾ, ನನ್ನ ಪತಿ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶದಿಂದ ಕುಸಿದುಬಿದ್ದರು ಎಂದು ವೈದ್ಯರ ಬಳಿ ಹೇಳಿದ್ದಳು. ಈ ವೇಳೆ ಆತನನ್ನು ಪರಿಶೀಲಿಸಿದ ವೈದ್ಯ ಸಿಬ್ಬಂದಿ, ಕರಣ್​ ಈಗಾಗಲೇ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದರು. ಸೊಸೆಯ ಮಾತನ್ನು ಬಲವಾಗಿ ನಂಬಿದ್ದ ಕರಣ್ ಹೆತ್ತವರು, ಇದೊಂದು ಅಪಘಾತವಿರಬಹುದು. ನಮಗೆ ಮರಣೋತ್ತರ ಪರೀಕ್ಷೆ ಬೇಡ ಎಂದು ಕೈಬಿಟ್ಟಿದ್ದರು. ಆದ್ರೆ, ಅದನ್ನೇ ಗಟ್ಟಿಯಾಗಿ ಹಿಡಿದ ಖಾಕಿ ಪಡೆ, ತಮ್ಮ ಶಂಕೆ ದಿಟ ಎಂಬುದನ್ನು ಕಡೆಗೂ ಸಾಬೀತುಪಡಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಇಡೀ ಪ್ರಕರಣದ ಅಸಲಿಯತ್ತನ್ನು ಬಯಲಿಗೆಳೆದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net