ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಹೊಸ ವಾಹನ ಯೋಗ

Nitya Bhavisya Vijayavani
Published on

ಮೇಷ: ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಧನ ಲಾಭ. ಧಾರ್ವಿುಕ ವಿಚಾರಗಳಲ್ಲಿ ಆಸಕ್ತಿ ತಾಳುವಿರಿ. ದಾಂಪತ್ಯದಲ್ಲಿ ಸಾಮರಸ್ಯದ ವಾತಾವರಣ. ಶುಭಸಂಖ್ಯೆ: 9

ವೃಷಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ನಂಬಿಕೆ ದ್ರೋಹ ಅನುಭವಿಸಬೇಕಾದೀತು. ಸ್ತ್ರೀಯರಿಗೆ ಆತಂಕ. ಗೊಂದಲಮಯ ವಾತಾವರಣ. ಶುಭಸಂಖ್ಯೆ: 9

ಮಿಥುನ: ಮಾತಿನಿಂದ ಕಲಹ ಉಂಟಾಗಿ ಅನರ್ಥವಾದೀತು. ದಂಡ ಕಟ್ಟುವ ಸಂದರ್ಭ. ಕಾರ್ಯ ಬದಲಾವಣೆ. ಆಲಸ್ಯ ಮನೋಭಾವ. ಶುಭಸಂಖ್ಯೆ: 6

ಕಟಕ: ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ. ಶರೀರದಲ್ಲಿ ತಳಮಳ. ಶತ್ರು ಬಾಧೆ. ಮಹಿಳೆಯರಿಗೆ ವಸ್ತ್ರ ಲಾಭ. ಸಾಲದಿಂದ ಮುಕ್ತಿ. ಶುಭಸಂಖ್ಯೆ:2

ಸಿಂಹ: ವ್ಯರ್ಥ ಧನಹಾನಿಯಾಗಿ ಬೇಸರ. ಅಕಾಲ ಭೋಜನ ಮಾಡಬೇಕಾಗುವುದು. ಋಣ ಬಾಧೆ. ಯತ್ನ ಕಾರ್ಯಗಳಿಗೆ ಅಡೆತಡೆ. ಶುಭಸಂಖ್ಯೆ: 3

ಕನ್ಯಾ:  ಸ್ವಉದ್ಯೋಗದಲ್ಲಿ ಸಮಸ್ಯೆ. ವಾಹನದಿಂದ ತೊಂದರೆ. ವಿವಾಹ ಮಾತುಕತೆ ವಿಫಲ. ಲೋಹ ಸಂಬಂಧಿ ವ್ಯವಹಾರಗಳಲ್ಲಿ ಎಚ್ಚರ. ಶುಭಸಂಖ್ಯೆ:4

ತುಲಾ: ದೇವತಾ ಕಾರ್ಯದಿಂದ ಸಮಾಧಾನ. ಚೋರ ಭಯ. ಕೃಷಿಕರಿಗೆ ಅಧಿಕ ಆದಾಯ. ಹೃದಯ ಸಂಬಂಧಿ ಅನಾರೋಗ್ಯ ಕಾಡಲಿದೆ. ಶುಭಸಂಖ್ಯೆ: 7

ವೃಶ್ಚಿಕ:  ಕುಟುಂಬ ಸದಸ್ಯರಿಂದ ಸಮಸ್ಯೆ. ಪ್ರಭಾವಿ ವ್ಯಕ್ತಿಗಳ ಪರಿಚಯ. ಸ್ಥಿರಾಸ್ತಿ ಮಾರಾಟ ಮಾಡುವಿಕೆ. ವಾಸಗೃಹದಲ್ಲಿ ತೊಂದರೆ. ಶುಭಸಂಖ್ಯೆ:3

ಧನಸ್ಸು:  ಮಾತೃ ಮೂಲವಾದ ಆಸ್ತಿಗೆ ಕಚ್ಚಾಟ. ಯತ್ನ ಕಾರ್ಯ ಸಿದ್ಧಿಸಲಿದೆ. ಸುಖ ಭೋಜನ. ಮಹಿಳೆಯರಿಗೆ ಕೆಲ ವಿಷಯದಲ್ಲಿ ಬೇಸರ. ಶುಭಸಂಖ್ಯೆ: 8

ಮಕರ: ಸ್ತ್ರೀಯರು ವಿವಾದಗಳಿಂದ ದೂರವಿರಿ. ಉದ್ಯೋಗ ಅವಕಾಶ. ಹೊಸ ವಾಹನ ಯೋಗ. ಇತರರಿಗೆ ಸಹಾನುಭೂತಿ ತೋರುವಿರಿ. ಶುಭಸಂಖ್ಯೆ:5

ಕುಂಭ: ಔತಣಕೂಟಕ್ಕೆ ಖರ್ಚು. ದೃಷ್ಟಿದೋಷದಿಂದ ತೊಂದರೆ. ಆರಕ್ಷಕ ಅಧಿಕಾರಿಗಳಿಗೆ ಕೋಪದಿಂದ ಅಪಾಯ. ಗುರಿಗಾಗಿ ಪರಿಶ್ರಮ. ಶುಭಸಂಖ್ಯೆ:1

ಮೀನ: ಮಕ್ಕಳ ಅಗತ್ಯಕ್ಕೆ ಖರ್ಚು. ವಿರೋಧಿಗಳಿಂದ ದೂರವಿರಿ. ರೋಗಬಾಧೆ. ವಿದ್ಯಾರ್ಥಿಗಳಲ್ಲಿ ಪ್ರಗತಿಯಿದೆ. ಬಾಳೆ ಕೃಷಿಕರಿಗೆ ನಷ್ಟ. ಶುಭಸಂಖ್ಯೆ:9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net