

ಮೇಷ: ವಕೀಲ ವೃತ್ತಿಯಲ್ಲಿ ಕೀರ್ತಿ. ಕೇಂದ್ರ ಸರ್ಕಾರಿ ಉದ್ಯೋಗ ಪ್ರಾಪ್ತಿ ಸಾಧ್ಯತೆ. ಕೈಗೊಂಡ ಕೆಲಸಗಳು ಮಂದಗತಿಯಲ್ಲಿ ಸಾಗಲಿವೆ. ಶುಭಸಂಖ್ಯೆ: 8
ವೃಷಭ: ಆರ್ಥಿಕ ಸಹಾಯದಿಂದ ಗೃಹ ನಿರ್ವಣಪೂರ್ಣ. ಸಾಲಗಾರರಿಂದ ಅವಮಾನ. ಬೆಲೆಬಾಳುವ ವಸ್ತು ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 8
ಮಿಥುನ: ದಾಖಲೆಪತ್ರಗಳ ಸಮಸ್ಯೆಯಿಂದ ಆಸ್ತಿ ಖರೀದಿ ವಿಳಂಬ. ಕಲಾವಿದರಿಗೆ ವೇದಿಕೆ ಲಭ್ಯ. ಹೊಸ ವ್ಯಾಪಾರ ಪ್ರಾರಂಭಕ್ಕೆ ಚಿಂತನೆ. ಶುಭಸಂಖ್ಯೆ: 8
ಕಟಕ: ಬಂದು ಮಿತ್ರರಿಂದ ಆರ್ಥಿಕ ಸಹಾಯ ದೊರೆಯಲಿದೆ. ಮನರಂಜನೆಗೆ ದುಂದು ವೆಚ್ಚ ಬೇಡ. ಮನೆ ನವೀಕರಣದ ಯೋಜನೆ. ಶುಭಸಂಖ್ಯೆ: 3
ಸಿಂಹ: ಸ್ನೇಹಿತರ ಮನೆಯ ಶುಭ ಕಾರ್ಯದಲ್ಲಿ ಭಾಗಿ. ಉದ್ಯೋಗಸ್ಥ ಮಹಿಳೆಯರ ಆರ್ಥಿಕ ಸುಧಾರಣೆ. ಐಷಾರಾಮಿ ಜೀವನದ ಸೆಳೆತ. ಶುಭಸಂಖ್ಯೆ: 2
ಕನ್ಯಾ: ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಸಗಟು ವ್ಯಾಪಾರದಲ್ಲಿ ಲಾಭ ಬರಲಿದೆ. ತೆಂಗು ಕೃಷಿಕರಿಗೆ ನಷ್ಟದ ಭೀತಿ. ವೀಸಾ ಸಮಸ್ಯೆ ನಿವಾರಣೆ. ಶುಭಸಂಖ್ಯೆ:9
ತುಲಾ: ಐಟಿ ಉದ್ಯೋಗಿಗಳಿಗೆ ಕೆಲಸ ಕಳೆದುಕೊಳ್ಳುವ ಭೀತಿ. ಸಹೋದ್ಯೋಗಿಗಳೊಂದಿಗೆ ಅನವಶ್ಯಕ ವಿವಾದ. ಸಂಕಲ್ಪದ ತೀರ್ಥಯಾತ್ರೆ. ಶುಭಸಂಖ್ಯೆ: 1
ವೃಶ್ಚಿಕ: ಚಿಕ್ಕ ಪುಟ್ಟ ಬೆಂಕಿ ಅಪಘಾತದ ಸಾಧ್ಯತೆ. ಹಾಲಿನ ಉತ್ಪನ್ನ ಮಾರಾಟಗಾರರಿಗೆ ಲಾಭ. ಮಗನ ವಿವಾಹಕ್ಕೆ ಅಡೆತಡೆ ಬಂದೀತು. ಶುಭಸಂಖ್ಯೆ:4
ಧನಸ್ಸು: ಸರ್ಕಾರಿ ಟೆಂಡರ್ ಸಿಗಲಿದೆ. ಉನ್ನತ ಶಿಕ್ಷಣದ ಕನಸಿನ ಸಾಕಾರ. ಅವಿವಾಹಿತರಿಗೆ ಶುಭಸುದ್ದಿ. ಹೊಸ ಪಾಲುಗಾರರು ಸಿಗುವರು. ಶುಭಸಂಖ್ಯೆ: 6
ಮಕರ: ಕೊಟ್ಟ ಸಾಲ ತಿರುಗಿ ಬರಲಿದೆ. ಪಿತ್ರಾರ್ಜಿತ ಆಸ್ತಿಗಾಗಿ ಕಲಹ ಹೆಚ್ಚಾಗಲಿದೆ. ಸಂಗಾತಿಯ ಆರೋಗ್ಯದಲ್ಲಿ ಏರಿಳಿತ ಉಂಟಾಗಬಹುದು.ಶುಭಸಂಖ್ಯೆ:9
ಕುಂಭ: ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ. ರಕ್ತದೊತ್ತಡ ಸಮಸ್ಯೆ ಕಾಡಬಹುದು. ಮನೆ ಖರೀದಿ ವಕ್ಷಿುುಂದೂಡುವುದು ಲೇಸು.ಶುಭಸಂಖ್ಯೆ:5
ಮೀನ: ಪ್ರಕೃತಿ ಅನಾಹುತದಿಂದ ಬೆಳೆ ನಷ್ಟ ಸಾಧ್ಯತೆ. ಹಳೆಯ ಘಟನೆಯಿಂದ ಮಾನಸಿಕ ಒತ್ತಡ. ಜವಳಿ ಅಂಗಡಿ ಮಾಲೀಕರಿಗೆ ಲಾಭ. ಶುಭಸಂಖ್ಯೆ: 9