

ಮೇಷ: ಉದ್ಯೋಗದಲ್ಲಿ ದುಡುಕುತನ ಬೇಡ. ಕಟ್ಟಡ ನಿರ್ವಣದಲ್ಲಿ ವೇಗ. ಭೂ ವ್ಯವಹಾರಗಳು ನಿರ್ಣಾಯಕ ಹಂತಕ್ಕೆ ಬರಲಿವೆ. ಶುಭಸಂಖ್ಯೆ: 5
ವೃಷಭ: ನಿರೀಕ್ಷೆಗೆ ತಕ್ಕಂತೆ ಸಂತೃಪ್ತಿ ಸಿಗಲಿದೆ. ಹಣಕಾಸು ವ್ಯವಹಾರಗಳು ಸುಗಮವಾಗಿ ಸಾಗಲಿವೆ. ಉದ್ಯೋಗ ಕಳೆದುಕೊಳ್ಳುವ ಆತಂಕ. ಶುಭಸಂಖ್ಯೆ: 1
ಮಿಥುನ: ನಿತ್ಯದ ವ್ಯವಹಾರಗಳಲ್ಲಿ ನಿರೀಕ್ಷಿತ ಯಶಸ್ಸು. ಶಾರೀರಿಕ ತೊಂದರೆಗಳಿಂದ ಮುಕ್ತಿ. ಜವಾಬ್ದಾರಿಯನ್ನು ನಿರ್ವಹಿಸಿದ ಸಮಾಧಾನ. ಶುಭಸಂಖ್ಯೆ: 5
ಕಟಕ: ಉದ್ಯೋಗಸ್ಥ ಮಹಿಳೆಯರಿಗೆ ಹಣಪ್ರಾಪ್ತಿ. ಪಾಲುದಾರಿಕೆ ವ್ಯವಹಾರದಲ್ಲಿ ಮನಸ್ತಾಪ. ಮನೆಕಟ್ಟಿ ಮಾರುವ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 7
ಸಿಂಹ: ಸ್ವಯಂ ಉದ್ಯೋಗಸ್ಥರಿಗೆ ಲಕ್ಷ್ಮಿ ಕಟಾಕ್ಷ. ಉಡುಪು ಮಾರಾಟಗಾರರಿಗೆ ಅಧಿಕ ಲಾಭ. ಗೃಹಿಣಿಯರಿಗೆ ಉದ್ಯೋಗಿಗಳಾಗಲು ಆಸಕ್ತಿ. ಶುಭಸಂಖ್ಯೆ: 1
ಕನ್ಯಾ: ಹಿರಿಯ ಅಧಿಕಾರಿಗಳ ಸಹಕಾರ. ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ. ಗೊಂದಲ ನಿವಾರಣೆಗೆ ಸಹೋದ್ಯೋಗಿಗಳ ನೆರವು. ಶುಭಸಂಖ್ಯೆ: 9
ತುಲಾ: ನಿರೀಕ್ಷಿತ ಅತಿಥಿಯ ಆಗಮನವಾಗುವುದು. ನಿವೇಶನ ಮತ್ತು ಮನೆ ಖರೀದಿ. ಕೃಷಿ ಉತ್ಪನ್ನ ಮಾರಾಟಗಾರರಿಗೆ ತೃಪ್ತಿಕರವಾದ ದಿನ. ಶುಭಸಂಖ್ಯೆ: 7
ವೃಶ್ಚಿಕ: ಗಿರಣಿ ಮಾಲೀಕರಿಗೆ ನೌಕರರೊಂದಿಗೆ ಘರ್ಷಣೆ. ಕುಟುಂಬದಲ್ಲಿ ಬಾಂಧವ್ಯ ವೃದ್ಧಿ. ದಲ್ಲಾಳಿಗಳಿಗೆ ಅನುಕೂಲ. ಸಾಮಾನ್ಯ ಲಾಭ. ಶುಭಸಂಖ್ಯೆ: 5
ಧನಸ್ಸು: ಕಾರ್ಯನಿಷ್ಠೆಯಿಂದ ಪ್ರಗತಿ. ಕರ್ತವ್ಯ ಬುದ್ಧಿಯಿಂದ ಕಾರ್ಯಸಿದ್ಧಿ. ನಿಮ್ಮ ಕಾರ್ಯದಕ್ಷತೆಗೆ ಮೇಲಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 3
ಮಕರ: ಅವಿವೇಕಕ್ಕೆ ಒಳಗಾಗಿ ವರ್ತಿಸಬೇಡಿ. ಉದ್ಯೋಗ ಸ್ಥಳದಲ್ಲಿ ನೆಮ್ಮದಿ. ಬಟ್ಟೆ ಮತ್ತು ಹಣ್ಣು ವ್ಯಾಪಾರಿಗಳಿಗೆ ಅಧಿಕ ಲಾಭ. ಶುಭಸಂಖ್ಯೆ: 1
ಕುಂಭ: ಸಾಮಾಜಿಕ ಚಟುವಟಿಕೆಗಳಲ್ಲಿ ಒತ್ತಡ. ಕಲಾವಿದರಿಗೆ ಹೆಚ್ಚು ಯಶಸ್ಸು ಸಿಗಲಿದೆ. ಅವಿಶ್ರಾಂತ ಚಟುವಟಿಕೆಗಳಿಂದ ಆಯಾಸ. ಶುಭಸಂಖ್ಯೆ: 9
ಮೀನ: ಹೊಸ ಹೊಣೆಗಾರಿಕೆ ಯಶಸ್ವಿಯಾಗಿ ನಿರ್ವಹಿಸಿದ ಸಮಾಧಾನ. ಕಲಾವಿದರ ಪ್ರಯತ್ನಕ್ಕೆ ತಕ್ಕ ಪ್ರತಿಫಲ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 1