

ಮೇಷ: ಕೃಷಿ ಯೋಜನೆಗಳನ್ನು ಕೈಗೊಳ್ಳುವಿರಿ. ಕೌಟುಂಬಿಕ ವಿವಾದಗಳು ರಾಜಿಯಾಗುತ್ತವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಶುಭಸಂಖ್ಯೆ: 2
ವೃಷಭ: ನಿಂದನೆಗೊಳಗಾಗುವ ಸಾಧ್ಯತೆಯಿದೆ. ಪಾರಂಪರಿಕ ವೃತ್ತಿಯಲ್ಲಿ ನಿರೀಕ್ಷಿತ ಆದಾಯ. ರಾಜಕಾರಣಿಗಳಿಗೆ ಹೆಚ್ಚಿನ ಒತ್ತಡ. ಶುಭಸಂಖ್ಯೆ: 9
ಮಿಥುನ: ಕುಟುಂಬದಲ್ಲಿ ಸಂತೋಷದ ವಾತಾವರಣ. ಲೇವಾದೇವಿ ವ್ಯವಹಾರದಲ್ಲಿ ಎಚ್ಚರಿಕೆಯಿಂದಿದ್ದರೆ ಲಾಭ. ಉಲ್ಲಾಸದಾಯಕ ದಿನ. ಶುಭಸಂಖ್ಯೆ: 7
ಕಟಕ:ದೂರ ಪ್ರಯಾಣ ಸಾಧ್ಯತೆ. ಅನಿರೀಕ್ಷಿತ ಘಟನೆಯಿಂದಾಗಿ ನ್ಯಾಯಾಲಯದಲ್ಲಿರುವ ನಿಮ್ಮ ಕಾರ್ಯಗಳು ಕೈಗೂಡುತ್ತವೆ. ಶುಭಸಂಖ್ಯೆ: 8
ಸಿಂಹ: ಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ನೆರೆಹೊರೆಯವ ರೊಂದಿಗೆ ಸ್ನೇಹದಿಂದಿರಿ. ದಾಂಪತ್ಯ ಜೀವನದ ತಪ್ಪುಗಳನ್ನು ಸರಿಪಡಿಸಿಕೊಳ್ಳಿ. ಶುಭಸಂಖ್ಯೆ: 4
ಕನ್ಯಾ: ಆರೋಗ್ಯ ಸಮಸ್ಯೆ ಎದುರಾದೀತು. ಕೌಟುಂಬಿಕ ಸಮಸ್ಯೆಗಳ ನಿವಾರಣೆ. ಗೃಹ ನಿರ್ಮಾಣ ಕಾರ್ಯಕ್ಕೆ ಯೋಜನೆ ರೂಪಿಸುವಿರಿ. ಶುಭಸಂಖ್ಯೆ: 2
ತುಲಾ: ದಾಂಪತ್ಯದ ಭಿನ್ನಾಭಿಪ್ರಾಯ ಬಗೆಹರಿಯುವುದು. ಆಹಾರದಲ್ಲಿ ವ್ಯತ್ಯಾಸ. ಎಚ್ಚರ. ವಿದ್ಯುತ್ ಕೆಲಸಗಾರರು ಎಚ್ಚರ ವಹಿಸಿ. ಶುಭಸಂಖ್ಯೆ: 1
ವೃಶ್ಚಿಕ: ದೀರ್ಘಕಾಲಿನ ವ್ಯಾಧಿ ನಿವಾರಣೆ. ವಿವಾಹ ಕಾರ್ಯಗಳಿಗೆ ಚಾಲನೆ. ಆಧ್ಯಾತ್ಮಿಕ ಚಿಂತನೆ. ಎಲೆಕ್ಟ್ರಾನಿಕ್ಸ್ ವಸ್ತುಗಳಿಂದ ಲಾಭ. ಶುಭಸಂಖ್ಯೆ: 7
ಧನಸ್ಸು: ಆರ್ಥಿಕ ವಿಷಯದಲ್ಲಿ ಎಚ್ಚರಿಕೆ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಕ್ರೀಡಾಪಟು ಗಳಿಗೆ ಶುಭದಾಯಕ ದಿನ. ಶುಭಸಂಖ್ಯೆ: 9
ಮಕರ: ಆಂತರಿಕ ಶತ್ರುಗಳಿರುತ್ತಾರೆ, ವಿಶೇಷ ಗಮನವಿರಲಿ. ಸಂಗಾತಿಯಲ್ಲಿ ಅಸಮಾಧಾನ. ಆಸ್ತಿ ಖರೀದಿಸುವ ಯೋಚನೆ ಮಾಡುವಿರಿ.ಶುಭಸಂಖ್ಯೆ: 3
ಕುಂಭ: ಪೋಷಕರೊಂದಿಗೆ ಉತ್ತಮ ಬಾಂಧವ್ಯ. ಕೃಷಿ ಕಾರ್ಯಗಳು ನೆರವೇರುತ್ತವೆ. ವಾಹನ ಬಿಡಿಭಾಗಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:5
ಮೀನ: ಶ್ವಾಸಕೋಶದ ಸಮಸ್ಯೆ ಉಂಟಾಗಬಹುದು. ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಲಿದೆ. ವಿವಾದಾಸ್ಪದ ವಿಷಯಗಳಲ್ಲಿ ಎಚ್ಚರಿಕೆ. ಶುಭಸಂಖ್ಯೆ: 6