ನಿತ್ಯಭವಿಷ್ಯ: ಈ ರಾಶಿಯವರಿಗಿಂದು ದುಡುಕುತನ ಒಳ್ಳೆಯದಲ್ಲ

Nitya Bhavisya Vijayavani
Published on

ಮೇಷ: ಸರ್ಕಾರಿ ಕಾರ್ಯದಲ್ಲಿ ಯಶಸ್ಸು ದೊರೆಯಲಿದೆ. ಎದುರಾಳಿಗಳ ಕುತಂತ್ರಗಳು ಬಯಲಾಗಲಿವೆ. ತೈಲ ವ್ಯಾಪಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 6

ವೃಷಭ: ಆತ್ಮೀಯರ ಆಗಮನದಿಂದ ನೆಮ್ಮದಿ. ತಾಯಿಯ ಆರೋಗ್ಯ ಸುಧಾರಣೆ. ಯೋಗಾಭ್ಯಾಸ ಶುರು. ಪಶುಪಕ್ಷಿಗಳಿಗೆ ಆಹಾರ ನೀಡಿ. ಶುಭಸಂಖ್ಯೆ: 9

ಮಿಥುನ: ಅತಿ ಆತ್ಮವಿಶ್ವಾಸದಿಂದ ಮೈಮರೆಯದಿರಿ. ಉದ್ಯೋಗ ರಂಗದಲ್ಲಿ ಬೆಳವಣಿಗೆ. ನಿಮ್ಮನ್ನು ಅತಿಯಾಗಿ ಪ್ರೀತಿಸುವವರಿಂದ ಸಾಂತ್ವನ. ಶುಭಸಂಖ್ಯೆ: 9

ಕಟಕ: ಖಾಸಗಿ ನೌಕರರಿಗೆ ಮೇಲಧಿಕಾರಿಗಳಿಂದ ಕಿರಿಕಿರಿ. ಬೆನ್ನುನೋವು ಕಾಡೀತು. ನಿಗದಿತ ಕಾರ್ಯದಲ್ಲಿ ಯಶ. ಧನಾಗಮನ ಸಾಧ್ಯತೆ. ಶುಭಸಂಖ್ಯೆ: 2

ಸಿಂಹ: ಸಾಮಾಜಿಕ ಗೌರವಾದರ ಪಡೆಯುವಿರಿ. ಸತ್ಪುರುಷರ ದರ್ಶನ ಭಾಗ್ಯ. ಚಿನ್ನಾಭರಣ ಖರೀದಿ ಸಾಧ್ಯತೆ. ದಾಂಪತ್ಯದಲ್ಲಿ ವಿರಸ. ಶುಭಸಂಖ್ಯೆ: 3

ಕನ್ಯಾ: ವಸ್ತ್ರವಿನ್ಯಾಸಕಾರರಿಗೆ ಉತ್ತಮ ಆರ್ಥಿಕ ಲಾಭ ಬರಲಿದೆ. ಆತ್ಮೀಯರಲ್ಲಿ ಸಂತೋಷ ಹಂಚಿಕೊಳ್ಳಲಿದ್ದೀರಿ. ಇಷ್ಟ ದೇವರನ್ನು ಭಜಿಸಿ. ಶುಭಸಂಖ್ಯೆ: 7

ತುಲಾ: ಹೊಸ ವ್ಯವಹಾರದಲ್ಲಿ ಪ್ರಗತಿ. ಹಿರಿಯರಿಗೆ ತೀರ್ಥಕ್ಷೇತ್ರ ದರ್ಶನ ಸಾಧ್ಯತೆ. ಬಹುಕಾಲದ ಸಮಸ್ಯೆಗೆ ಪರಿಹಾರ ದೊರೆತು ಸಂತಸ. ಶುಭಸಂಖ್ಯೆ: 9

ವೃಶ್ಚಿಕ: ದೂರ ಪ್ರಯಾಣ. ಆರೋಗ್ಯದಲ್ಲಿ ಚೇತರಿಕೆ. ವಿವಾಹಾಪೇಕ್ಷಿಗಳಿಗೆ ಕಂಕಣ ಭಾಗ್ಯ. ಉದ್ಯೋಗ ಬದಲಾವಣೆಯಲ್ಲಿ ಆಸಕ್ತಿ. ಶುಭಸಂಖ್ಯೆ:4

ಧನಸ್ಸು: ಸಹೋದ್ಯೋಗಿಗಳಿಂದ ಮಾರ್ಗದರ್ಶನ. ಈ ದಿನ ನಿಮ್ಮ ದಿನ. ರಕ್ಷಣಾ ಕ್ಷೇತ್ರದವರಿಗೆ ಕಠಿಣ ಸವಾಲು ಎದುರಾಗುವ ಸಾಧ್ಯತೆ. ಶುಭಸಂಖ್ಯೆ: 5

ಮಕರ: ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ. ದುಡುಕುತನ ಒಳ್ಳೆಯದಲ್ಲ. ಯಾವುದೇ ವಿಚಾರಕ್ಕೂ ಯೋಚಿಸಿ ನಿರ್ಧಾರ ಕೈಗೊಳ್ಳಿ. ಶುಭಸಂಖ್ಯೆ: 8

ಕುಂಭ: ಅನಿರೀಕ್ಷಿತ ಬೆಳವಣಿಗೆಯಿಂದ ಆಘಾತ. ಆದರೆ ವಿರೋಧಿಗಳಿಂದಲೂ ಸೈ ಎನ್ನಿಸಿಕೊಳ್ಳುವ ಕಾರ್ಯಸಾಧನೆ ನಿಮ್ಮದಾಗಲಿದೆ. ಶುಭಸಂಖ್ಯೆ:2

ಮೀನ: ಸ್ತ್ರೀಯರಿಗೆ ಅನುಕೂಲಕರ ಸ್ಥಿತಿ. ಚಿನ್ನಾಭರಣ ಖರೀದಿ ಸಾಧ್ಯತೆ. ಮನೋ ವ್ಯಾಧಿ ದೂರವಾಗಲಿದೆ. ಅಪರಿಚಿತರಿಂದ ಸಹಾಯ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net