

ಮೇಷ: ನವ ವಿವಾಹಿತರಿಗೆ ಸಂತಾನ ಲಾಭ. ಉದ್ಯೋಗಸ್ಥರು ತೊಂದರೆ ಅನುಭವಿಸುವರು. ಫ್ಯಾನ್ಸಿ ಸ್ಟೋರ್ಸ್ ಮಾಲೀಕರಿಗೆ ಲಾಭ. ಶುಭಸಂಖ್ಯೆ: 5
ವೃಷಭ: ಮೇಲಧಿಕಾರಿಗಳಿಂದ ಸಹಾಯ ದೊರೆಯಲಿದೆ. ಹಣ ಹೂಡಿಕೆಯಲ್ಲಿ ಶುಭ. ಮೂಳೆಯ ಸಮಸ್ಯೆ ಕಾಣಿಸಿಕೊಳ್ಳುವುದು.ಶುಭಸಂಖ್ಯೆ:9
ಮಿಥುನ: ಆರೋಗ್ಯದ ನಿಮಿತ್ತ ಹಣವ್ಯಯ. ವಿವಾಹ ವಿಚಾರದಲ್ಲಿ ಅಡೆತಡೆ ಬರಬಹುದು. ಅನಾರೋಗ್ಯ ಭೀತಿ. ವೈದ್ಯರ ಸಲಹೆ ಅಗತ್ಯ. ಶುಭಸಂಖ್ಯೆ: 5
ಕಟಕ: ಕುಟುಂಬದಲ್ಲಿ ಶುಭ ಕಾರ್ಯ ನಡೆಯಲಿದೆ. ಸ್ಥಿರಾಸ್ತಿಯು ಲಭ್ಯವಾಗಿ ಮಾನಸಿಕ ನೆಮ್ಮದಿ. ವಾಹನ ಕೊಳ್ಳುವ ಚಿಂತನೆ ಮಾಡುವಿರಿ. ಶುಭಸಂಖ್ಯೆ: 2
ಸಿಂಹ: ತರಬೇತಿ ಸಂಸ್ಥೆಯವರಿಗೆ ಜನಪ್ರಿಯತೆ ಸಿಗಲಿದೆ. ಕ್ಯಾಂಟೀನ್ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಬಂಧುಗಳೊಂದಿಗೆ ವಾಗ್ವಾದ. ಶುಭಸಂಖ್ಯೆ: 8
ಕನ್ಯಾ: ಲೇಖಕರಿಗೆ ಶುಭದಾಯಕ ದಿನ. ಬರಹಗಾರರಿಗೆ ಅತ್ಯುತ್ತಮ ಸಮಯ ಇದಾಗಿದೆ. ಪಾಲುದಾರಿಕೆಯ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:4
ತುಲಾ: ಅಧ್ಯಯನದಲ್ಲಿ ಆಸಕ್ತಿ ತಾಳುವಿರಿ. ದಂತ ವೈದ್ಯರಿಗೆ ಶುಭದಾಯಕ ದಿನ. ಆಲಸ್ಯದಿಂದ ಕೆಲಸದಲ್ಲಿ ಅಡೆತಡೆ ಉಂಟಾಗುವುದು. ಶುಭಸಂಖ್ಯೆ:3
ವೃಶ್ಚಿಕ: ಸ್ಥಿರಾಸ್ತಿ ಖರೀದಿಯತ್ತ ಆಸಕ್ತಿ ತಾಳುವಿರಿ. ಮನೆಯ ನವೀಕರಣಕ್ಕೆ ಖರ್ಚಾಗುವುದು. ಪುಸ್ತಕ ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ. ಶುಭಸಂಖ್ಯೆ: 6
ಧನಸ್ಸು: ಮಾತಿನಲ್ಲಿ ನಿಷ್ಠುರವಾಗಿದ್ದರೂ ಮಾನವೀಯತೆ ಮರೆಯಬೇಡಿ. ಗೊಂದಲದ ವಾತಾವರಣ. ಪ್ಲಾಸ್ಟಿಕ್ ಉದ್ದಿಮೆಯಲ್ಲಿ ನಷ್ಟ. ಶುಭಸಂಖ್ಯೆ: 6
ಮಕರ: ಹತ್ತಿ ಬೆಳೆಗಾರರಿಗೆ ಬೇಡಿಕೆ ಬರಲಿದೆ. ಕೋರ್ಟ್ ಕೆಲಸಗಳಲ್ಲಿ ಯಶಸ್ಸು ನಿಮ್ಮ ಕಡೆಗಿದೆ. ದ್ವಿತೀಯ ವಿವಾಹದ ಯೋಚನೆ ಬೇಡ. ಶುಭಸಂಖ್ಯೆ: 8
ಕುಂಭ: ರಾಜಕಾರಣಿಗಳಿಗೆ ಶುಭಸಮಯ. ಅನಾರೋಗ್ಯ ದಿಂದ ಬಳಲಿಕೆ ಕಾಣಿಸಿಕೊಳ್ಳುವುದು. ಔಷಧ ವ್ಯಾಪಾರಸ್ಥರಿಗೆ ಶುಭವಾಗುವುದು. ಶುಭಸಂಖ್ಯೆ: 9
ಮೀನ: ಕಬ್ಬಿಣ ವ್ಯಾಪಾರಸ್ಥರಿಗೆ ಲಾಭವಾಗಲಿದೆ. ಔಷಧ ತಯಾರಿ ಉದ್ಯಮದಲ್ಲಿ ಆದಾಯ. ಆಡುವ ಮಾತಿನಲ್ಲಿ ನಿಯಂತ್ರಣವಿರಲಿ. ಶುಭಸಂಖ್ಯೆ: 6