ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವಾಹನ ಖರೀದಿಯಲ್ಲಿ ಲಾಭವಿದೆ

Nitya Bhavisya Vijayavani
Published on

ಮೇಷ: ಖಾಸಗಿ ಕಾರ್ಯಗಳಲ್ಲಿ ವಿಳಂಬ. ಉಪನ್ಯಾಸಕರಿಗೆ ಗೌರವ ಪ್ರಾಪ್ತಿ. ಮನಸ್ಸಿಗೆ ಶಾಂತಿ. ವ್ಯಾಪಾರದಲ್ಲಿ ಅಲ್ಪ ಪ್ರಮಾಣದ ಲಾಭ. ಶುಭಸಂಖ್ಯೆ: 7

ವೃಷಭ: ದಾಯಾದಿಗಳ ಕಲಹ. ಮಿತ್ರರಿಂದ ತೊಂದರೆ ಆಗುವ ಸಾಧ್ಯತೆ. ವಾಹನ ಖರೀದಿಯಲ್ಲಿ ಲಾಭವಿದೆ. ವೃಥಾ ತಿರುಗಾಟ ಮಾಡುವಿರಿ. ಶುಭಸಂಖ್ಯೆ: 2

ಮಿಥುನ: ಮನೆ ಖರೀದಿಗೆ ನಿರ್ಧಾರ. ವಿದೇಶ ಪ್ರಯಾಣ. ಉದ್ಯೋಗದಲ್ಲಿ ಪ್ರಗತಿ. ಯತ್ನ ಕಾರ್ಯದಲ್ಲಿ ಅನುಕೂಲ. ಅಧಿಕ ಹಣ ಖರ್ಚು. ಶುಭಸಂಖ್ಯೆ: 2

ಕಟಕ: ನವದಂಪತಿಗಳಿಗೆ ಶುಭಸುದ್ದಿ. ಕುಟುಂಬದಲ್ಲಿ ಅಪವಾದ. ಶ್ರಮಕ್ಕೆ ತಕ್ಕ ಫಲ. ಆರೋಗ್ಯ ಸಮಸ್ಯೆ. ಶುಭ ಕಾರ್ಯಕ್ಕೆ ಅಡೆತಡೆ. ಶುಭಸಂಖ್ಯೆ:7

ಸಿಂಹ: ಕುಟುಂಬ ಸಮೇತ ಮೂಲ ಊರಿಗೆ ಪ್ರಯಾಣ. ನೆಮ್ಮದಿ. ಆದಾಯಕ್ಕಿಂತ ಖರ್ಚು ಹೆಚ್ಚು. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಶುಭಸಂಖ್ಯೆ:8

ಕನ್ಯಾ: ಹಿತಶತ್ರುಗಳಿಂದ ತೊಂದರೆ. ವ್ಯವಹಾರದಲ್ಲಿ ಪ್ರಗತಿ. ಹೆಣ್ಣು ಮಕ್ಕಳಿಗೆ ಮಾನಸಿಕ ವ್ಯಥೆ. ಮಿತ್ರರಿಂದ ಸಾಲ ತೀರಿಸಲು ಸಹಾಯ. ಶುಭಸಂಖ್ಯೆ:6

ತುಲಾ: ಗೃಹ ನಿರ್ವಣಕ್ಕೆ ಚಾಲನೆ. ಕೃಷಿಯಲ್ಲಿ ಪ್ರಗತಿ. ಕೋರ್ಟ್ ಕೇಸ್​ಗಳಲ್ಲಿ ಅಡಚಣೆ. ದುಷ್ಟರಿಂದ ಕಿರುಕುಳ ಉಂಟಾಗುವ ಸಾಧ್ಯತೆ. ಶುಭಸಂಖ್ಯೆ: 9

ವೃಶ್ಚಿಕ: ತೀರ್ಥಕ್ಷೇತ್ರಗಳ ದರ್ಶನ ಮಾಡುವಿರಿ. ಅಧಿಕವಾದ ಖರ್ಚು. ಅಲ್ಪ ಧನ ಲಾಭ. ನಿಮ್ಮ ವಸ್ತು ಕಳು ವಾಗಲಿದೆ. ಚಂಚಲ ಮನಸ್ಸು. ಶುಭಸಂಖ್ಯೆ:3

ಧನಸ್ಸು: ಮಂಗಳ ಕಾರ್ಯದಲ್ಲಿ ಭಾಗಿ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆಯಾಗಲಿದೆ. ವಿನಾಕಾರಣ ಧನವ್ಯಯ. ಮನಸ್ಸಿಗೆ ನಾನಾ ಚಿಂತೆ ಕಾಡಲಿದೆ. ಶುಭಸಂಖ್ಯೆ: 2

ಮಕರ: ವ್ಯವಹಾರಗಳಲ್ಲಿ ಸಾಧಾರಣ ಲಾಭ. ಚೋರ ಭೀತಿ. ಪತ್ರಕರ್ತರು, ಸಾಹಿತಿಗಳಿಗೆ ಸನ್ಮಾನ. ಕಾರ್ಯಗಳಲ್ಲಿ ಅನವಶ್ಯಕ ವಿಳಂಬವಾಗುವುದು. ಶುಭಸಂಖ್ಯೆ:8

ಕುಂಭ: ಅವಿವಾಹಿತರಿಗೆ ವಿವಾಹ ಯೋಗ. ಆಟೋಟಗಳಲ್ಲಿ ಜಯ. ಶತ್ರು ಭಯ. ಹೊಸಕೆಲಸಗಳಲ್ಲಿ ಅಪಜಯ. ಋಣ ವಿಮೋಚನೆಯಾಗಿ ಸಂತಸ. ಶುಭಸಂಖ್ಯೆ:2

ಮೀನ: ಪಾಪ ಕಾರ್ಯದಲ್ಲಿ ಆಸಕ್ತಿ, ದುಷ್ಟ ಬುದ್ಧಿ ಬೇಡ. ರಿಯಲ್ ಎಸ್ಟೇಟ್​ನವರಿಗೆ ನಷ್ಟ. ಅಕಾಲ ಭೋಜನ. ಅನ್ಯರಲ್ಲಿ ವೈಮನಸ್ಸು ಬೇಡ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net