ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವ್ಯವಹಾರದಲ್ಲಿ ಉನ್ನತಿ

Nitya Bhavisya Vijayavani
Published on

ಮೇಷ: ರಾಜಕಾರಣಿಗಳಿಗೆ ಹಿನ್ನಡೆ. ಆಭರಣ ವ್ಯಾಪಾರಸ್ಥರಿಗೆ ಶುಭಸುದ್ದಿ. ವಿಶ್ರಾಂತಿಯ ಅಭಾವದಿಂದ ಅನಾರೋಗ್ಯ ಸಾಧ್ಯತೆ. ಶುಭಸಂಖ್ಯೆ: 9

ವೃಷಭ: ವಿದೇಶಿ ವ್ಯಾಪಾರಸ್ಥರಿಗೆ ಲಾಭವಾಗಲಿದೆ. ಬಡಗಿಗಳಿಗೆ ಅಧಿಕ ವರಮಾನ ಬರುವುದು. ಮನೆಯಲ್ಲಿ ಶುಭ ಕಾರ್ಯದ ಸಂಭ್ರಮ. ಶುಭಸಂಖ್ಯೆ:1

ಮಿಥುನ: ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಅವಕಾಶಗಳು ಲಭ್ಯ. ಬರಹಗಾರರಿಗೆ ಶುಭ. ಮರಳು ಸಿಮೆಂಟ್ ವ್ಯಾಪಾರಿಗಳಿಗೆ ಧನ ಲಾಭ. ಶುಭಸಂಖ್ಯೆ:3

ಕಟಕ: ತೈಲ ಮಾರಾಟಗಾರರಿಗೆ ಉತ್ತಮ ಆದಾಯ. ಹಿರಿಯರ ಮಾರ್ಗದರ್ಶನದಿಂದ ಸಮಾಧಾನ. ಆಸ್ತಿ ವಿಚಾರದಲ್ಲಿ ವಾದ ವಿವಾದೆ. ಶುಭಸಂಖ್ಯೆ:4

ಸಿಂಹ: ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಒಳ್ಳೆಯ ದಿನ. ಮಹಿಳೆಯರಿಗೆ ಆರೋಗ್ಯ ಸಮಸ್ಯೆಯಾದೀತು. ಕೆಲಸಗಳಲ್ಲಿ ವಿರೋಧ. ಶುಭಸಂಖ್ಯೆ:5

ಕನ್ಯಾ: ಸ್ಥಿರಾಸ್ತಿ ಖರೀದಿಯ ಚಿಂತನೆ ಮಾಡುವಿರಿ. ವ್ಯವಹಾರದಲ್ಲಿ ಉನ್ನತಿ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಶುಭಸಂಖ್ಯೆ:3

ತುಲಾ: ಯಂತ್ರ ತಯಾರಿಕೆಗೆ ಪೋ›ತ್ಸಾಹ ಸಿಗಲಿದೆ. ಕಾರ್ಖಾನೆ ನೌಕರರಿಗೆ ಶುಭ. ಸಾಲಗಾರರ ತೊಂದರೆ. ಹೊಸ ವಾಹನ ಖರೀದಿ. ಶುಭಸಂಖ್ಯೆ: 8

ವೃಶ್ಚಿಕ: ರಾಜಕಾರಣಿಗಳಿಗೆ ಇಂದು ಪರ್ವ ಕಾಲ. ತೋಟಗಾರಿಕೆಯಲ್ಲಿ ಆದಾಯ ಹೆಚ್ಚಳ. ಮಕ್ಕಳ ಆರೋಗ್ಯದತ್ತ ವಿಶೇಷ ಕಾಳಜಿವಹಿಸಿ. ಶುಭಸಂಖ್ಯೆ: 4

ಧನಸ್ಸು: ಪಿತ್ರಾರ್ಜಿತ ಆಸ್ತಿಯಿಂದ ಲಾಭವಾಗುವುದು. ವ್ಯವಹಾರದಲ್ಲಿ ಆದಾಯ ಹೆಚ್ಚಳವಾಗಲಿದೆ. ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ. ಶುಭಸಂಖ್ಯೆ:8

ಮಕರ: ಸರ್ಕಾರಿ ನೌಕರರಿಗೆ ನಿರೀಕ್ಷಿತ ಬೆಂಬಲ ಸಿಗುವುದು. ತಾಯಿಯಿಂದ ಸಹಕಾರ ಸಿಗಲಿದೆ. ಕೌಟುಂಬಿಕ ಅಗತ್ಯಗಳಿಗಾಗಿ ಖರ್ಚು. ಶುಭಸಂಖ್ಯೆ: 9

ಕುಂಭ: ಹಣಕಾಸಿನ ತೊಂದರೆ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಚಂಚಲ ಬುದ್ಧಿಯಿಂದ ಅಡ್ಡಿ. ಈ ದಿನ ನೂತನ ವಸ್ತು ಖರೀದಿ ಬೇಡ. ಶುಭಸಂಖ್ಯೆ: 3

ಮೀನ: ಮಹಿಳೆಯರಿಗೆ ನೌಕರಿಯಲ್ಲಿ ಬಡ್ತಿ. ಗೃಹ ನಿರ್ಮಾಣ ಕೆಲಸ ಕಾರ್ಯದಲ್ಲಿ ಮಂದಗತಿ. ದೂರದ ಊರಿನಿಂದ ನೆಂಟರ ಆಗಮನ. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net