ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಹೊಸ ವ್ಯವಹಾರದಿಂದ ಲಾಭ

Nitya Bhavisya Vijayavani
Published on

ಮೇಷ: ಹೊಸ ವ್ಯವಹಾರದಿಂದ ಲಾಭ. ವಿಧೇಯತೆ ಯಶಸ್ಸಿನ ಮೆಟ್ಟಿಲು. ಅನವಶ್ಯಕ ದುಂದು ವೆಚ್ಚ. ಸಗಟು ವ್ಯಾಪಾರಿಗಳಿಗೆ ತಿರುಗಾಟ. ಶುಭಸಂಖ್ಯೆ: 1

ವೃಷಭ: ಆಮದು - ರಫ್ತು ಉದ್ಯಮಿಗಳಿಗೆ ಅಧಿಕ ಲಾಭ. ಅಪರಿಚಿತರ ವಿಷಯದಲ್ಲಿ ಜಾಗೃತೆ. ಕುತಂತ್ರದಿಂದ ಹಣ ಹೂಡಿಕೆಯಲ್ಲಿ ಮೋಸ. ಶುಭಸಂಖ್ಯೆ: 3

ಮಿಥುನ: ಅತಿ ಆತ್ಮವಿಶ್ವಾಸದಿಂದ ಗೊಂದಲಕ್ಕೆ ಸಿಲುಕಿ ಹಾಕಿಕೊಳ್ಳವಿರಿ, ಮಿತ್ರರ ಬೆಂಬಲ. ಶತ್ರು ನಾಶ. ವಾದ ವಿವಾದಗಳಿಂದ ದೂರವಿರಿ. ಶುಭಸಂಖ್ಯೆ:8

ಕಟಕ: ಮಾನಸಿಕ ಒತ್ತಡ. ದಂಡ ಕಟ್ಟುವಿರಿ. ನಿಮ್ಮ ಮಾತುಗಳಿಂದ ಉದ್ಯೋಗಸ್ಥಳದಲ್ಲಿ ಕಲಹ ಸಾಧ್ಯತೆ. ವಿದ್ಯಾರ್ಥಿಗಳಲ್ಲಿ ಪ್ರಗತಿ. ಶುಭಸಂಖ್ಯೆ: 7

ಸಿಂಹ: ಅಂದುಕೊಂಡ ಗುರಿ ಸಾಧಿಸುವಿರಿ. ಪರರಿಗೆ ಸಹಾನುಭೂತಿ ತೋರುವಿರಿ. ಸುಖ ಭೋಜನ. ಮೋಜು ಮಸ್ತಿಗೆ ವಿಪರೀತ ಖರ್ಚು. ಶುಭಸಂಖ್ಯೆ:2

ಕನ್ಯಾ: ರಾಜಕೀಯ ಕ್ಷೇತ್ರದವರಿಗೆ ಶುಭ. ದೈವಿಕ ಚಿಂತನೆ. ಮೂಗಿನ ಮೇಲೆ ಕೋಪ. ಸ್ನೇಹಿತರಿಂದ ಹಿತ ನುಡಿ. ಶರೀರದಲ್ಲಿ ಆಯಾಸ. ಶುಭಸಂಖ್ಯೆ: 1

ತುಲಾ: ಸಾಲ ತೀರಿಸಲು ಸದವಕಾಶ ಒದಗಿ ಬರಲಿದೆ. ಸುಳ್ಳು ಮಾತನಾಡುವುದು ಸಲ್ಲದು. ಕೃಷಿಕರಿಗೆ ಅಲ್ಪ ಲಾಭ. ಸುಖ ಭೋಜನ. ಶುಭಸಂಖ್ಯೆ:3

ವೃಶ್ಚಿಕ: ಆದಾಯಕ್ಕಿಂತ ಖರ್ಚು ಜಾಸ್ತಿ. ಸಂಗಾತಿಗೆ ಆರೋಗ್ಯದ ಸಮಸ್ಯೆ. ಉದ್ಯೋಗದಲ್ಲಿ ಕಿರಿಕಿರಿ. ಸ್ತಿರಾಸ್ತಿ ಮಾರಾಟ ಮಾಡುವ ಸ್ಥಿತಿ. ಶುಭಸಂಖ್ಯೆ:4

ಧನಸ್ಸು: ವಿವಿಧ ಮೂಲಗಳಿಂದ ಧನ ಲಾಭ. ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ. ಪರಸ್ಥಳ ವಾಸ. ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ. ಶುಭಸಂಖ್ಯೆ:2

ಮಕರ: ರಫ್ತು ಮಾರಾಟದಿಂದ ಲಾಭ ಬರುವುದು. ಅಪರಿಚಿತರ ಮಾತಿಗೆ ಮರುಳಾಗದಿರಿ. ಉದ್ಯೋಗದಲ್ಲಿ ಬಡ್ತಿ ದೊರೆತು ಸಂತಸ. ಶುಭಸಂಖ್ಯೆ:5

ಕುಂಭ: ಶಿಕ್ಷಕರಿಗೆ ಒತ್ತಡ. ಹಿತಶತ್ರು ಬಾಧೆ. ಮನೆಯವರ ಭಾವನೆಗೆ ಸ್ಪಂದಿಸುವಿರಿ. ತೀರ್ಥ ಯಾತ್ರೆ. ಕೃಷಿಕರಿಗೆ ಶುಭ ಕಾರ್ಯದ ಸಂಭ್ರಮ. ಶುಭಸಂಖ್ಯೆ: 9

ಮೀನ: ನೀಚರಿಂದ ದೂರವಿರಿ. ಮಕ್ಕಳ ಭವಿಷ್ಯದ ಚಿಂತೆ ಕಾಡಲಿದೆ. ವೈದ್ಯಕೀಯ ವೃತ್ತಿಯಲ್ಲಿ ಸಾಧಾರಣ. ಆಧ್ಯಾತ್ಮವಿದ್ಯೆಯಲ್ಲಿ ಪ್ರಗತಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net