ನಿತ್ಯಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ

Nitya Bhavisya Vijayavani
Published on

ಮೇಷ: ಬಂಧು ಬಾಂಧವರ ಜೊತೆಗೆ ಪ್ರವಾಸಕ್ಕೆ ತೆರಳುವಿರಿ. ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಸಜ್ಜನ ವಿರೋಧ. ಅತಿಯಾದ ನಿದ್ರೆ. ಶುಭಸಂಖ್ಯೆ: 5 

ವೃಷಭ: ಕೋರ್ಟ್ ಕೇಸುಗಳಲ್ಲಿ ಕಾರ್ಯಾನುಕೂಲ. ಸ್ಥಿರಾಸ್ತಿ ಖರೀದಿಗೆ ನಿರ್ಧಾರ ಮಾಡುವಿರಿ. ಕೃಷಿಯಲ್ಲಿ ಉತ್ತಮ ಲಾಭ ಬರಲಿದೆ. ಶುಭಸಂಖ್ಯೆ:7

ಮಿಥುನ: ಮನಸ್ಸಿನಲ್ಲಿ ಭೀತಿಯ ಭಾವ. ಯುವತಿಯರಿಗೆ ವಿವಾಹ ಯೋಗ. ಸಂದರ್ಶನದಲ್ಲಿ ಮಾತಿನಿಂದ ಅನರ್ಥವಾದೀತು, ಎಚ್ಚರ. ಶುಭಸಂಖ್ಯೆ:1

ಕಟಕ: ಆಹಾರ ವ್ಯತ್ಯಾಸದಿಂದ ಶರೀರದಲ್ಲಿ ತಳಮಳದ ಅನುಭವ. ಐಷಾರಾಮಿ ವಸ್ತುಗಳ ಖರೀದಿಗೆ ವಿಪರೀತ ಖರ್ಚು ಮಾಡುವಿರಿ. ಶುಭಸಂಖ್ಯೆ: 9

ಸಿಂಹ: ಕಾರ್ಯವೈಖರಿಯಲ್ಲಿ ಬದಲಾವಣೆ. ಷೇರು ವ್ಯವಹಾರದಲ್ಲಿ ಲಾಭ. ದಾಂಪತ್ಯದಲ್ಲಿ ಅನ್ಯೋನ್ಯತೆ. ಮಾತಿನ ಮೇಲೆ ಹಿಡಿತವಿರಲಿ. ಶುಭಸಂಖ್ಯೆ:3

ಕನ್ಯಾ: ಸಾಲ ಪಡೆಯಲು ಯೋಚನೆ. ದೃಷ್ಟಿದೋಷ. ಮಹಿಳೆಯರಿಗೆ ಸಲ್ಲದ ಅಪವಾದ. ನಿಯಮ ಉಲ್ಲಂಘನೆಗೆ ದಂಡ ಕಟ್ಟುವಿರಿ. ಶುಭಸಂಖ್ಯೆ: 3

ತುಲಾ: ಆದಾಯಕ್ಕಿಂತ ಖರ್ಚು ಜಾಸ್ತಿ. ನಾಟ್ಯ ಶಿಕ್ಷಕರಿಗೆ ಅಪಕೀರ್ತಿ. ಸರ್ಕಾರಿ ಕೆಲಸಗಳು ವಿಳಂಬ. ದೂರ ಪ್ರಯಾಣಕ್ಕೆ ನಿರ್ಧಾರ. ಶುಭಸಂಖ್ಯೆ:4

ವೃಶ್ಚಿಕ: ಕುಟುಂಬದಲ್ಲಿ ಅಹಿತಕರ ವಾತಾವರಣ ಸಾಧ್ಯತೆ. ಬುದ್ಧಿ ಶಕ್ತಿಯಿಂದ ಕಾರ್ಯಸಾಧಿಸಿಕೊಳ್ಳುವಿರಿ. ಕೈ ಹಾಕಿದ ಕೆಲಸದಲ್ಲಿ ಪ್ರಗತಿ. ಶುಭಸಂಖ್ಯೆ:6

ಧನಸ್ಸು: ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಅವಿವಾಹಿತರಿಗೆ ವಿವಾಹ ಯೋಗ. ಸ್ಥಗಿತಗೊಂಡಿದ್ದ ಕಾರ್ಯಕ್ಕೆ ಮರುಚಾಲನೆ. ಶುಭಸಂಖ್ಯೆ:5

ಮಕರ: ದುರ್ವ್ಯಸನದಿಂದ ಕುಟುಂಬದಲ್ಲಿ ಸಮಸ್ಯೆ. ಅನಾರೋಗ್ಯ. ಹಿತ ಶತ್ರುಗಳಿಂದ ತೊಂದರೆ. ಮೇಲಧಿಕಾರಿಗಳಿಂದ ತಕರಾರು. ಶುಭಸಂಖ್ಯೆ:2

ಕುಂಭ: ಯತ್ನ ಕಾರ್ಯಗಳಲ್ಲಿ ಜಯ. ಆಕಸ್ಮಿಕ ಖರ್ಚು. ಕಲಾವಿದರ ಜೀವನದಲ್ಲಿ ಉತ್ತಮ ಪ್ರಗತಿಯಾಗಲಿದೆ. ಗುಪ್ತ ವಿದ್ಯೆಗಳಲ್ಲಿ ಆಸಕ್ತಿ. ಶುಭಸಂಖ್ಯೆ: 7

ಮೀನ: ಹಣದ ಅಡಚಣೆ. ಆಹಾರ ಸಾಮಗ್ರಿಗಳ ವ್ಯಾಪಾರದಲ್ಲಿ ಸಾಧಾರಣ ಲಾಭ. ಸಾಲಗಾರರಿಂದ ಅವಮಾನ. ಉದ್ಯೋಗದಲ್ಲಿ ಬಡ್ತಿ. ಶುಭಸಂಖ್ಯೆ:6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net