ಟ್ಯಾಕ್ಸ್​ 'ಬಿಟ್'​ ಕೊಡಲ್ಲ; ಡಿಜಿಟಲ್ ಆಸ್ತಿ ಮೇಲೆ ಶೇ. 30 ಆದಾಯ ತೆರಿಗೆ

bitcoins
Published on

ನವದೆಹಲಿ: ಬಿಟ್​ ಕಾಯಿನ್ ವಿಚಾರ ಭಾರಿ ಸದ್ದು ಮಾಡುತ್ತಿರುವ ಈ ಸಂದರ್ಭದಲ್ಲಿ ಹಾಗೂ ಜಗತ್ತೇ ಡಿಜಿಟಲ್​ನತ್ತ ಹೆಚ್ಚು ಆಸಕ್ತಿ ತೋರುತ್ತಿರುವ ಈ ಸಮಯದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಡಿಜಿಟಲ್​ ಆಸ್ತಿ ಮೇಲಿನ ತೆರಿಗೆಯನ್ನು 'ಬಿಟ್.​ ಕೊಡಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಬಿಟ್​ ಕಾಯಿನ್ ಮುಂತಾದ ಎಲ್ಲ ಕ್ರಿಪ್ಟೊಕರೆನ್ಸಿ ಹಾಗೂ ವರ್ಚುವಲ್​ ಆಸ್ತಿಗಳ ಮೇಲೆ ಕಣ್ಣಿಟ್ಟಿರುವ ಸರ್ಕಾರ ಅವುಗಳ ಮೇಲೆ ಶೇ. 30 ಆದಾಯ ತೆರಿಗೆ ವಿಧಿಸಿದೆ.

ಯಾವುದೇ ರೀತಿಯ ವರ್ಚುವಲ್ ಅಥವಾ ಡಿಜಿಟಲ್​ ಆಸ್ತಿಯ ಆದಾಯಕ್ಕೆ ಶೇ. 30 ತೆರಿಗೆ ಭರಿಸಲೇಬೇಕು. ಜತೆಗೆ ಇವುಗಳ ಟ್ರಾನ್ಸ್​​ಫರ್​ಗೂ ಶೇ. 1 ತೆರಿಗೆ ನೀಡಬೇಕು. ಈ ವಿಚಾರದಲ್ಲಿ ಯಾವುದೇ ಕಡಿತ ಅಥವಾ ವಿನಾಯಿತಿ ಇಲ್ಲ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net