

ನವದೆಹಲಿ: ಈ ಹಿಂದೆ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಈ ಸಲ ವಿತ್ತ ಸಚಿವೆಯಾಗಿ ರಕ್ಷಣಾ ಸಚಿವಾಲಯಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಕಳೆದ ವರ್ಷಕ್ಕಿಂತಲೂ ಅಧಿಕ ಹಣ ಮಂಜೂರು ಮಾಡಿದ್ದಾರೆ.
ಈ ಬಜೆಟ್ನಲ್ಲಿ ರಕ್ಷಣಾ ಸಚಿವಾಲಯಕ್ಕೆ 5.25 ಲಕ್ಷ ಕೋಟಿ ರೂಪಾಯಿ ಘೋಷಿಸಲಾಗಿದೆ. ಅಂದರೆ ಇದು ಕಳೆದ ಸಲಕ್ಕಿಂತಲೂ 47 ಸಾವಿರ ಕೋಟಿ ಅಧಿಕವಾಗಿದ್ದು, ಕಳೆದ ಬಾರಿ 4.78 ಲಕ್ಷ ಕೋಟಿ ಮಂಜೂರು ಮಾಡಲಾಗಿತ್ತು. ಈ ಮೂಲಕ ಪ್ರಸ್ತುತ ಬಜೆಟ್ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಶೇ. 10 ಅಧಿಕ ಹಣ ನೀಡಿದಂತಾಗಿದೆ.
ಸೇನೆಗೆ ಆಧುನಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ 1.52 ಲಕ್ಷ ಕೋಟಿ ಬಂಡವಾಳ ಗಳಿಕೆ ಘೋಷಿಸಲಾಗಿದ್ದು, ಇದು ಕೂಡ ಕಳೆದ ವರ್ಷಕ್ಕಿಂತ ಶೇ. 13 ಅಧಿಕವಾಗಿದೆ.