ಅದರಲ್ಲಿ ಪೊಲೀಸರ ತಪ್ಪಿಲ್ಲ, ಇದರಲ್ಲಿ ತಪ್ಪಿತ್ತು..: ಸಂಚಾರ ಪೊಲೀಸರ ವಿರುದ್ಧದ ಟೀಕೆಗಳಿಗೆ ರವಿಕಾಂತೇಗೌಡ ಲಿಖಿತ ಉತ್ತರ

Ravikanthe Gowda
Published on

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಟೋಯಿಂಗ್ ಹಾಗೂ ಪಾರ್ಕಿಂಗ್​ ಸಂಬಂಧಿತವಾಗಿ ವೈರಲ್​ ಆಗಿರುವ ವಿಡಿಯೋಗಳು ಮತ್ತು ಸಂಚಾರ ಪೊಲೀಸರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಅಸಮಾಧಾನ ಹಾಗೂ ಟೀಕೆಗಳಿಗೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್​. ರವಿಕಾಂತೇಗೌಡ ಸುದೀರ್ಘ ಉತ್ತರ ನೀಡಿದ್ದಾರೆ.

ಪ್ರಮುಖವಾಗಿ ಎರಡು ಪ್ರಕರಣಗಳಿಗೆ ಸಂಬಂಧಿಸಿ ವೈರಲ್​ ಆದ ವಿಡಿಯೋಗಳನ್ನು ಉಲ್ಲೇಖಿಸಿ ಅವರು ಸವಿವರವಾಗಿ ಪತ್ರಮುಖೇನ ತಿಳಿಸಿ ಸ್ಪಷ್ಟನೆಯನ್ನು ನೀಡಿದ್ದಾರೆ. ಮಾತ್ರವಲ್ಲ ಒಂದು ಪ್ರಕರಣದಲ್ಲಿ ಪೊಲೀಸರ ವಿರುದ್ಧ ತಪ್ಪು ಅಭಿಪ್ರಾಯ ಮೂಡುವಂತೆ ವಿಡಿಯೋ ಮಾಡಿ ಹರಿಯಬಿಡಲಾಗಿದೆ ಎಂದಿರುವ ಅವರು ಇನ್ನೊಂದು ಪ್ರಕರಣದಲ್ಲಿ ಮೊದಲಿಗೆ ಮಹಿಳೆಯೊಬ್ಬರ ತಪ್ಪು ಅನಿಸಿದರೂ ಬಳಿಕ ಪೊಲೀಸರದ್ದೂ ತಪ್ಪಿದೆ ಎಂದು ತಿಳಿಯುತ್ತಿದ್ದಂತೆ ಪೊಲೀಸ್​ ವಿರುದ್ಧವೂ ಕ್ರಮಕೈಗೊಳ್ಳಲಾಗಿದೆ ಎಂಬುದನ್ನು ತಿಳಿಸಿದ್ದಾರೆ.

ಎರಡು ಪ್ರಕರಣಗಳ ಕುರಿತು ಅವರು ನೀಡಿರುವ ಸ್ಪಷ್ಟನೆ ಹೀಗಿದೆ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net