More

    ಸಂಚಾರ ಪೊಲೀಸರು ಮಾಡಿದ ಈ ಕೆಲಸಕ್ಕೆ ಜನರು ಏನಂದ್ರು ನೋಡಿ…

    ಬೆಂಗಳೂರು: ಈಗ ಏನೇ ಆದರೂ ಸೋಷಿಯಲ್ ಮೀಡಿಯಾದಲ್ಲಿ ಜನರು ಬಹಿರಂಗವಾಗಿ ಪ್ರಶ್ನಿಸಿ ಬಿಡುತ್ತಾರೆ. ಅಂಥದ್ದೇ ಸನ್ನಿವೇಶ ಇದೀಗ ಬೆಂಗಳೂರು ಸಂಚಾರ ಪೊಲೀಸರ ವಿಷಯದಲ್ಲೂ ಆಗಿದೆ.

    ಬೆಂಗಳೂರು ಸಂಚಾರ ಪೊಲೀಸರು ಬೈಕ್ ಸವಾರರು ಧರಿಸಿದ್ದ ಗುಣಮಟ್ಟದ್ದಲ್ಲದ ಹೆಲ್ಮೆಟ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಅಂಥ ಹೆಲ್ಮೆಟ್​ಗಳನ್ನು ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ಪೊಲೀಸರು ರಸ್ತೆಯಲ್ಲಿ ಸಾಲಾಗಿ ಜೋಡಿಸಿಟ್ಟು, ಅದರ ಮೇಲೆ ಕಾಂಕ್ರೀಟ್ ಮಿಕ್ಸರ್ ಲಾರಿಯೊಂದು ಸಾಗುವಂತೆ ಮಾಡಿ ಶಗೊಳಿಸಿದ್ದಾರೆ.

    ಇದನ್ನೂ ಓದಿ: ಪ್ರೀತಿಸುವ ನಾಟಕ, ಐದೇ ತಿಂಗಳಲ್ಲಿ ಲಿವಿಂಗ್ ಟುಗೆದರ್​; ಅವಳಾಗುತ್ತಿದ್ದಂತೆ ಗರ್ಭಿಣಿ, ಇವನು ಪರಾರಿ…

    ಇದು ಗುಣಮಟ್ಟದ್ದಲ್ಲದ ಹೆಲ್ಮೆಟ್​ಗಳ ಕುರಿತು ಜಾಗೃತಿ ಅಭಿಯಾನ. ಎಲ್ಲ ಸವಾರರು ತಮ್ಮ ಸುರಕ್ಷತೆಗಾಗಿ ಗುಣಮಟ್ಟದ ಹೆಲ್ಮೆಟ್​ಗಳನ್ನೇ ಬಳಸಿ ಎಂದು ಈ ವಿಡಿಯೋ ಸಹಿತ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಟ್ವೀಟ್ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಕಾರೊಳಗೇ ಯುವತಿ ಮೇಲೆ ಅತ್ಯಾಚಾರವೆಸಗಿದ ಶೋಕಿವಾಲಾ..!?

    ಪೊಲೀಸರ ಈ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಷ್ಟಕ್ಕೂ ನಿಮಗೆ ಸವಾರರ ಕುರಿತು ಅಷ್ಟು ಕಾಳಜಿ ಇದ್ದರೆ ಮೊದಲು ಇಂಥ ಹೆಲ್ಮೆಟ್​ಗಳ ಉತ್ಪಾದನೆ ಹಾಗೂ ಮಾರಾಟ ಆಗದಂತೆ ನೋಡಿಕೊಳ್ಳಿ. ಗುಣಮಟ್ಟದ ರಸ್ತೆ ಒದಗಿಸಿ, ರಸ್ತೆ ಗುಂಡಿ ಮುಚ್ಚಿಸಿ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ವಂಚಕ ಪತಿಯ ಅರಸಿ ಬೆಂಗಳೂರಿಗೆ ಬಂದ್ಲು ಎರಡನೇ ಪತ್ನಿ; ಇವ ಶ್ರೀಮಂತರನ್ನೇ ನೋಡಿ ಮದ್ವೆ ಆಗಿ ಮೋಸ ಮಾಡ್ತಿದ್ದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts