ಕಾಂಗ್ರೆಸ್ ಮುಖಂಡನಿಂದ ಪತ್ನಿಯ ಕೊಲೆಗೆ ಸಂಚು?; ಪತಿಗೆ ಅನೈತಿಕ ಸಂಬಂಧ, ಡ್ರಗ್​ ಪೆಡ್ಲರ್​ ಸಂಪರ್ಕವಿದೆ ಎಂದ ಹೆಂಡ್ತಿ

girish 3
ಗಿರೀಶ್ ಅನೈತಿಕ ಸಂಬಂಧ ಹೊಂದಿದ್ದಾರೆ ಎನ್ನಲಾದ ಯುವತಿ
Published on

ಹುಬ್ಬಳ್ಳಿ: ಕೈ ಮೀರಿ ಹೋದ ಕಾಂಗ್ರೆಸ್​ ಮುಖಂಡನ ಅನೈತಿಕ ಸಂಬಂಧ, ಡ್ರಗ್ ಪೆಡ್ಲರ್ ಸಂಪರ್ಕ ಹಾಗೂ ಕೊಲೆ ಸಂಚಿನ ಕುರಿತು ಇದೀಗ ಪತ್ನಿಯೇ ಆರೋಪ ಮಾಡಿದ್ದು, ಸುದ್ದಿಗೋಷ್ಠಿ ನಡೆಸಿ ಸಂಬಂಧಿತ ಫೋಟೋಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್ ಅಕಾಂಕ್ಷಿಯಾಗಿರುವ ಗಿರೀಶ ಗದಿಗೆಪ್ಪಗೌಡರ ವಿರುದ್ಧ ಪತ್ನಿ ಜಯಲಕ್ಷ್ಮಿ ಆರೋಪ ಹೊರಿಸಿದ್ದಾರೆ. 20 ವರ್ಷಗಳಿಂದ ಸಂಸಾರ ಮಾಡುತ್ತಿದ್ದ ಪತಿ ಈಗ ಪರಸ್ತ್ರೀ ವ್ಯಾಮೋಹಕ್ಕೆ ಒಳಗಾಗಿದ್ದಲ್ಲದೆ, ಡ್ರಗ್​ ಪೆಡ್ಲರ್ ಜತೆ ಸಂಪರ್ಕವನ್ನೂ ಹೊಂದಿದ್ದಾರೆ ಎಂದು ಫೋಟೋ ಸಮೇತ ವಿವರ ನೀಡಿದ್ದಾರೆ. ಈ ಮೂಲಕ ಗಿರೀಶ ಗದಿಗೆಪ್ಪಗೌಡರ ಕುರಿತ ಕ್ಯಾಶಿನೋ ಗಲಾಟೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.

ಪತಿ ಗೋವಾದಲ್ಲಿ ಕ್ಯಾಸಿನೊ ವ್ಯವಹಾರ ಆರಂಭಿಸಿದ ಬಳಿಕ ಅವರಲ್ಲಾದ ಬದಲಾವಣೆಗಳನ್ನು ಗಮನಿಸಿ ವಿಚಾರಿಸಿದಾಗ ಅವರಿಗೆ ಗದಗದ ಯುವತಿ ಜತೆ ಅನೈತಿಕ ಸಂಬಂಧ ಇರುವುದು ತಿಳಿದುಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲ, ಈ ಕೃತ್ಯಕ್ಕೆ ಅವರ ಅಳಿಯಂದಿರಾದ ಹರ್ಷವರ್ಧನ ಮಲಕಣ್ಣವರ, ನೀಲಕಂಠ ಮಲಕಣ್ಣವರ ಹಾಗೂ ಮೈತ್ರಾಯಿಣಿ ಗದಿಗೆಪ್ಪಗೌಡರ ಕೂಡ ಪ್ರೋತ್ಸಾಹ ನೀಡಿದ್ದಾರೆ.

ಗಿರೀಶ್ ಅನೈತಿಕ ಸಂಬಂಧ ಹೊಂದಿದ್ದಾರೆ ಎನ್ನಲಾದ ಯುವತಿ
ಗಿರೀಶ್ ಅನೈತಿಕ ಸಂಬಂಧ ಹೊಂದಿದ್ದಾರೆ ಎನ್ನಲಾದ ಯುವತಿ

ಅಲ್ಲದೆ ಆಸ್ತಿಪತ್ರಗಳಿಗೆ ಸಹಿ ಮಾಡುವಂತೆ ಪದೇಪದೆ ನನ್ನ ಮೇಲೆ ದೈಹಿಕ ಹಾಗೂ ಮಾನಸಿಕವಾಗಿ ಹಲ್ಲೆ ಮಾಡಲಾಗುತ್ತಿದೆ. ವಿಚ್ಛೇದನ ನೀಡುವುದಾಗಿ ಬೆದರಿಕೆ ಒಡ್ಡಲಾಗುತ್ತಿದೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಅಗತ್ಯ ಕ್ರಮ ತೆಗೆದುಕೊಂಡಿಲ್ಲ. ಸಿದ್ಧರಾಮಯ್ಯ ಮತ್ತಿತರ ಕಾಂಗ್ರೆಸ್ ನಾಯಕರ ಬೆಂಬಲವಿದೆ, ನನ್ನನ್ನು ಯಾರೂ ಏನೂ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಬೆದರಿಕೆ ಒಡ್ಡುತ್ತಿದ್ದಾರೆ. ಗನ್ ಪಾಯಿಂಟ್ ಇಟ್ಟು ಹೆದರಿಸುತ್ತಿದ್ದಾರೆ. ನನಗೆ ಜೀವಭಯವಿದ್ದು, ನಾನು ಸದ್ಯ ತಾಯಿಯ ಮನೆಯಲ್ಲಿದ್ದೇನೆ ಎಂದು ಆರೋಪಿಸಿರುವ ಜಯಲಕ್ಷ್ಮಿ ಕಮಿಷನರ್​ಗೆ ಕೂಡ ದೂರು ಸಲ್ಲಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪತ್ನಿ ಜಯಲಕ್ಷ್ಮಿಯಿಂದ ದಾಖಲೆ ಬಿಡುಗಡೆ
ಸುದ್ದಿಗೋಷ್ಠಿಯಲ್ಲಿ ಪತ್ನಿ ಜಯಲಕ್ಷ್ಮಿಯಿಂದ ದಾಖಲೆ ಬಿಡುಗಡೆ

ಚಿತ್ರನಟಿ ರಾಗಿಣಿ ಡ್ರಗ್ಸ್ ಕೇಸ್​​ನಲ್ಲಿ ವಿಚಾರಣೆಗೊಳಗಾಗಿದ್ದ ಗಿರೀಶಗೆ ಡ್ರಗ್​ ಪೆಡ್ಲರ್​ಗಳ ಜತೆ ಸಂಪರ್ಕ ಇರುವುದನ್ನೂ ಪತ್ನಿ ತಿಳಿಸಿದ್ದಾರೆ. ತನಗೆ ಜೀವರಕ್ಷಣೆ ಒದಗಿಸುವ ಜತೆಗೆ ಪತಿಯೊಂದಿಗೆ ನನಗೆ ಹಿಂಸೆ ನೀಡುತ್ತಿರುವ ಅವರ ಸಂಬಂಧಿಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ಕಠಿಣ ಕ್ರಮಕೈಗೊಳ್ಳಬೇಕು ಎಂದು ಜಯಲಕ್ಷ್ಮಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net