ಇರುವೆ ಅಥವಾ ಯಾವುದಾದರೂ ಕೀಟ ಕಿವಿಯೊಳಗೆ ಹೋದರೆ ತಕ್ಷಣ ಈ ರೀತಿ ಮಾಡಿ ಹೊರಗೆ ಬರುತ್ತೆ! Insects

Insects
Published on

Insects : ಕೆಲವೊಮ್ಮೆ ಯಾವುದಾದರೂ ಕೀಟವಾಗಲಿ ಅಥವಾ ಇರುವೆಯಾಗಲಿ ಕಿವಿ ಒಳಗೆ ನುಗ್ಗಿ ತುಂಬಾ ಕಿರಿಕಿರಿಯನ್ನು ಉಂಟು ಮಾಡುತ್ತವೆ. ಮೊದಲೇ ಕಿವಿಯು ಸೂಕ್ಷ್ಮ ಅಂಗವಾಗಿರುವುದರಿಂದ ಒಳಗೆ ಏನಾದರೂ ಸೇರಿಕೊಂಡಾಗ ಏನಾಗುತ್ತೋ ಎಂಬ ಭಯ ಕೂಡ ಕಾಡುತ್ತಿರುತ್ತದೆ. ಕಿವಿಯೊಳಗೆ ಒಂದು ಸಣ್ಣ ವಸ್ತು ಸೇರಿಕೊಂಡರು ನಮಗೆ ದೊಡ್ಡ ವಸ್ತುವಂತೆ ಭಾಸವಾಗುತ್ತದೆ. ಇದರಿಂದ ತೀವ್ರ ತೊಂದರೆಯು ಉಂಟಾಗುತ್ತದೆ.

ರಾತ್ರಿ ವೇಳೆ ಅಥವಾ ಮಲಗಿರುವ ಯಾವುದೇ ಸಮಯದಲ್ಲಿ ಕೀಟ ಅಥವಾ ಇರುವೆ ನಮ್ಮ ಕಿವಿ ಒಳಗೆ ನುಗ್ಗಿದರೆ, ತಕ್ಷಣ ಏನು ಮಾಡಬೇಕೆಂದು ನಾವೀಗ ತಿಳಿದುಕೊಳ್ಳೋಣ.

ಒಂದು ಕೀಟ ಅಥವಾ ಇರುವೆ ನಿಮ್ಮ ಕಿವಿ ಒಳಗೆ ಹೋದರೆ, ತಕ್ಷಣ ಕತ್ತಲೆಯ ಕೋಣೆಗೆ ಹೋಗಿ, ಮೊಬೈಲ್ ಫೋನ್ ಲೈಟ್ ಅಥವಾ ಟಾರ್ಚ್ ಬಳಸಿ ಅದರ ಮೇಲೆ ಬೆಳಕು ಚೆಲ್ಲಿ. ಈ ರೀತಿ ಮಾಡಿದರೆ, ಕೀಟವು ಬೆಳಕನ್ನು ನೋಡಿದಾಗ ತಾನಾಗೇ ಹೊರಬರುತ್ತದೆ.

ಆಲಿವ್ ಎಣ್ಣೆ ಅಥವಾ ಬೇಬಿ ಎಣ್ಣೆಯನ್ನು ತೆಗೆದುಕೊಂಡು ಎರಡು ಅಥವಾ ಮೂರು ಹನಿಗಳನ್ನು ಕಿವಿಯೊಳಗೆ ಹಾಕಿ. ಇದು ಕೀಟಗಳು ಕಿವಿಯಲ್ಲಿ ಹೆಚ್ಚು ಕಾಲ ಉಳಿಯುವುದನ್ನು ತಡೆಯುತ್ತದೆ ಮತ್ತು ಅವು ಹೊರಬರಲು ಸಹಾಯ ಮಾಡುತ್ತದೆ.

ಉಗುರುಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ, ಮೂರು ಹನಿಯನ್ನು ಕಿವಿಯಲ್ಲಿ ಹಾಕಿದರೆ ಕೀಟ ತಕ್ಷಣ ಹೊರಬರುತ್ತದೆ.

ಯಾವುದಾದರೂ ಕೀಟವು ಕಿವಿಯೊಳಗೆ ಪ್ರವೇಶಿಸಿದ ನಂತರ, ಅದನ್ನು ಚೂಪಾದ ವಸ್ತುಗಳು ಅಥವಾ ಇಯರ್‌ಬಡ್‌ಗಳನ್ನು ಬಳಸಿ ತೆಗೆದುಹಾಕಲು ಪ್ರಯತ್ನಿಸಬೇಡಿ. ಇದು ಕೀಟವನ್ನು ಮತ್ತಷ್ಟು ಒಳಗೆ ತಳ್ಳುತ್ತದೆ ಮತ್ತು ಕಿವಿತಮಟೆಗೆ ಹಾನಿ ಮಾಡುತ್ತದೆ. ನೀವು ಅದನ್ನು ನಿಮ್ಮ ಬೆರಳಿನಿಂದ ತೆಗೆದುಹಾಕಲು ಪ್ರಯತ್ನಿಸಬೇಡಿ. ಇದು ಹೆಚ್ಚಿನ ನೋವನ್ನು ಉಂಟುಮಾಡುತ್ತದೆ ಮತ್ತು ಕಿವಿಗೆ ಹಾನಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ನೀರು ಅಥವಾ ಎಣ್ಣೆ ಸುರಿದರೂ ಕೀಟ ಹೊರಬರದಿದ್ದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net