ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ಮದುವೆ ನಡೆಯಿತಾ? ಇಲ್ಲಿದೆ ನೋಡಿ ಅಸಲಿ ಸಂಗತಿ… Rashtrapati Bhavan

Rashtrapati Bhavan

Rashtrapati Bhavan : ರಾಷ್ಟ್ರಪತಿ ಭವನದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಇದು ದೇಶದ ಅತ್ಯುನ್ನತ ಕಾರ್ಯಕ್ರಮಗಳು ನಡೆಯುವ ವಿಶೇಷ ಸ್ಥಳ. ಪ್ರಧಾನ ಮಂತ್ರಿಗಳ ಪ್ರಮಾಣವಚನ ಸ್ವೀಕಾರ, ವಿದೇಶಿ ರಾಷ್ಟ್ರಗಳ ಮುಖ್ಯಸ್ಥರ ಸಭೆಗಳು ಮತ್ತು ಗೌರವ ಔತಣಕೂಟಗಳಂತಹ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ.

ರಾಷ್ಟ್ರಪತಿ ಭವನದ ಭದ್ರತಾ ವಿಭಾಗದಲ್ಲಿ ವೈಯಕ್ತಿಕ ಭದ್ರತಾ ಅಧಿಕಾರಿ ( Personal Security Officer ) ಆಗಿ ಕಾರ್ಯನಿರ್ವಹಿಸುತ್ತಿರುವ ಪೂನಂ ಗುಪ್ತಾ ಅವರ ವಿವಾಹವು ಬುಧವಾರ (ಫೆ.12) ರಾಷ್ಟ್ರಪತಿ ಭವನದಲ್ಲಿ ಅದ್ದೂರಿಯಾಗಿ ನಡೆಯಿತು ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಅವಕಾಶವನ್ನು ವಿಶೇಷವಾಗಿ ಒದಗಿಸಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಮೊದಲ ಮದುವೆ ಇದು ಎಂಬ ವರದಿಗಳು ಹರಿದಾಡುತ್ತಿವೆ. ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿ ಭವನ ಮದುವೆ ಮಂಟಪವಾಯಿತು ಎಂದು ಸುದ್ದಿ ಹರಿದಾಡುತ್ತಿದೆ. ಆದರೆ, ಇದು ಅಕ್ಷರಶಃ ನಿಜವಲ್ಲ.

ರಾಷ್ಟ್ರಪತಿ ಭವನವು ಇತಿಹಾಸದಲ್ಲಿ ಮೊದಲ ಬಾರಿಗೆ ವಿವಾಹವನ್ನು ಆಯೋಜಿಸುತ್ತಿದೆ ಎಂಬ ವರದಿಗಳನ್ನು ಪಿಐಬಿ (ಪತ್ರಿಕಾ ಮಾಹಿತಿ ಬ್ಯೂರೋ) ನಿರಾಕರಿಸಿದೆ. ಪಿಐಬಿ ಸರ್ಕಾರದ ನೋಡಲ್ ಸಂಸ್ಥೆಯಾಗಿದೆ. ರಾಷ್ಟ್ರಪತಿ ಭವನ ಪ್ರಾರಂಭವಾದಾಗಿನಿಂದ ಅನೇಕ ವಿವಾಹಗಳು ನಡೆದಿವೆ ಎಂದು ಪಿಐಬಿ ಹೇಳಿದೆ. ಆದರೆ, ರಾಷ್ಟ್ರಪತಿ ಭವನದಲ್ಲಿ ಯಾವಾಗ ಮತ್ತು ಯಾರ ವಿವಾಹಗಳು ನಡೆದವು ಎಂಬುದರ ಕುರಿತು ಅದು ಮಾಹಿತಿಯನ್ನು ಒದಗಿಸಿಲ್ಲ.

ಇದನ್ನೂ ಓದಿ: ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಲಿದ್ದಾರೆ ರಿಲಯನ್ಸ್​ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ | Nita Ambani

ಅಂದಹಾಗೆ ರಾಷ್ಟ್ರಪತಿ ಭವನದಲ್ಲಿ ವಿವಾಹವಾದ ಪೂನಂ ಗುಪ್ತಾ, 74ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಮಹಿಳಾ ತುಕಡಿಯನ್ನು ಮುನ್ನಡೆಸಿದರು. ಅವರು ಮದುವೆ ಮಾಡಿಕೊಂಡ ಅವನೀಶ್ ಕುಮಾರ್ ಎಂಬುವರು ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಪೂನಂ ಗುಪ್ತಾ ಅವರ ಸಮರ್ಪಣೆಯನ್ನು ಗುರುತಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ರಾಷ್ಟ್ರಪತಿ ಭವನದಲ್ಲಿ ಅವರ ಮದುವೆಗೆ ಅನುಮತಿ ನೀಡಿದರು.

ಸಿಆರ್‌ಪಿಎಫ್ ಅಧಿಕಾರಿ ಪೂನಂ ಗುಪ್ತಾ ಮಧ್ಯಪ್ರದೇಶದ ನಿವಾಸಿ. ಅವರು ಗಣಿತದಲ್ಲಿ ಪದವಿ ಪಡೆದರು. ನಂತರ, ಇಂಗ್ಲಿಷ್ ಸಾಹಿತ್ಯದಲ್ಲಿ ಪಿಜಿ ಮಾಡಿದರು. ಇದಾದ ಬಳಿಕ ತಮ್ಮ ಬಿ.ಎಡ್ ಅನ್ನು ಸಹ ಪೂರ್ಣಗೊಳಿಸಿದರು. 2018ರಲ್ಲಿ ಯುಪಿಎಸ್‌ಸಿ ಸಿಆರ್‌ಪಿಎಫ್ ಪರೀಕ್ಷೆಯಲ್ಲಿ 81 ನೇ ರ್ಯಾಂಕ್ ಪಡೆದರು. ಪೂನಂ ಗುಪ್ತಾ ಬಿಹಾರದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶ್ಲಾಘನೀಯ ಸೇವೆಗಳನ್ನು ಸಲ್ಲಿಸಿದ್ದಾರೆ. (ಏಜೆನ್ಸೀಸ್​)

ಕೆಲ ನಿರ್ದೇಶಕರು ನನಗೆ… ಶಾಕಿಂಗ್​ ಹೇಳಿಕೆ ನೀಡಿದ ಸೂರ್ಯಕಾಂತಿ ಬೆಡಗಿ ರೆಜಿನಾ ಕ್ಯಾಸ್ಸಂದ್ರ! Regina Cassandra

ಈಗೇನಾದ್ರೂ ಲೋಕಸಭಾ ಚುನಾವಣೆ ನಡೆದ್ರೆ ಯಾರು ಗೆಲ್ತಾರೆ? ಇಲ್ಲಿದೆ ಮೂಡ್​ ಆಫ್​ ದಿ ನೇಷನ್​ ಸಮೀಕ್ಷೆ ರಿಸಲ್ಟ್! Mood of the Nation ​

Share This Article

1 ರೂ. ಖರ್ಚು ಮಾಡದೆ ನಿಮ್ಮ ಕೂದಲು ದಪ್ಪವಾಗಿ, ಸೊಂಪಾಗಿ ಬೆಳೆಯಲು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯೇ? Hair Tips

Hair Tips: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೂದಲು ಉದುರುವುದನ್ನು…

ಬೇಸಿಗೆಯಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ? ಈ ವಿಷಯ ನೆನಪಿರಲಿ… traveling at night

traveling at night : ರಾತ್ರಿಯಲ್ಲಿ  ಹೆಚ್ಚಿನ ರಸ್ತೆಗಳು ಖಾಲಿಯಾಗಿರುತ್ತವೆ, ಸಂಚಾರ ಕಡಿಮೆ ಇರುತ್ತದೆ ಮತ್ತು ಪ್ರಯಾಣವನ್ನು…

ಮಾರ್ಚ್​ 29ರಂದು ಷಷ್ಠ ಗ್ರಹ ಕೂಟ… ಅಪ್ಪಿತಪ್ಪಿಯೂ ಆ ದಿನ ಈ ತಪ್ಪುಗಳನ್ನು ಮಾಡಬೇಡಿ! Shasta Graha Koota

Shasta Graha Koota : ಮಾರ್ಚ್ 29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದೇ ದಿನ ಷಷ್ಠ ಗ್ರಹ…