Mood of the Nation : ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಈಗೇನಾದರೂ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 343 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. 2024ರ ಲೋಕಸಭಾ ಚುನಾವಣೆಯಲ್ಲಿ 232 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ 188 ಸ್ಥಾನಗಳಿಗೆ ಕುಸಿಯುತ್ತದೆ.
ಇಂಡಿಯಾ ಟುಡೇ ಮತ್ತು ಸಿವೋಟರ್, ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯನ್ನು 2025ರ ಜನವರಿ 2ರಿಂದ ಫೆಬ್ರವರಿ 9ರ ನಡುವೆ ಜಂಟಿಯಾಗಿ ನಡೆಸಿತು. ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ 1,25,123 ಜನರನ್ನು ಸಮೀಕ್ಷೆಗೆ ಒಳಪಡಿಸಲಾಯಿತು.
2024ರ ಸಾರ್ವತ್ರಿಕ ಚುನಾವಣೆಯಲ್ಲಿ 293 ಸ್ಥಾನಗಳನ್ನು ಗೆದ್ದಿದ್ದ ಎನ್ಡಿಎ ಮೈತ್ರಿಕೂಟವು ಮೂರನೇ ಅವಧಿಗೆ ಅಧಿಕಾರದ ಗದ್ದುಗೆ ಏರಿದೆ. ಮ್ಯಾಜಿಕ್ ಫಿಗರ್ (272) ಗಿಂತ ಕೆಲವೇ ಸ್ಥಾನಗಳನ್ನು ಹೆಚ್ಚು ಹೊಂದಿದೆ. ಇತ್ತೀಚಿನ ಸಮೀಕ್ಷೆ ಪ್ರಕಾರ, ಎನ್ಡಿಎ ಮೈತ್ರಿಕೂಟದ ಮತ ಹಂಚಿಕೆಯಲ್ಲಿ ಶೇ. 3ರಷ್ಟು ಹೆಚ್ಚಳವಾಗಲಿದ್ದು, 47 ಪ್ರತಿಶತಕ್ಕೆ ತಲುಪುವ ಮುನ್ಸೂಚನೆ ನೀಡಿದೆ. ಇಂಡಿಯಾ ಒಕ್ಕೂಟವು ತನ್ನ ಮತ ಹಂಚಿಕೆಯಲ್ಲಿ ಶೇ. 1 ರಷ್ಟನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ವಾತದಿಂದ ಶ್ವಾಸರೋಗ, ಕಫದಿಂದ ಕಾಸರೋಗ!
ಸಮೀಕ್ಷೆ ಪ್ರಕಾರ, ಬಿಜೆಪಿಗೆ ಮತ ಗಳಿಕೆಯಲ್ಲಿ ಗಮನಾರ್ಹ ಏರಿಕೆಯ ಭವಿಷ್ಯವನ್ನು ನುಡಿದಿದೆ. ಇಂದು ಚುನಾವಣೆ ನಡೆದರೆ, ಬಿಜೆಪಿ ಸ್ವಂತವಾಗಿ 281 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್ ಪಕ್ಷವು 99 ರಿಂದ 78 ಸ್ಥಾನಗಳಿಗೆ ಕುಸಿಯುವ ಸಾಧ್ಯತೆಯಿದೆ. ಬಿಜೆಪಿ ತನ್ನ ಮತ ಪಾಲನ್ನು ಶೇ. 3 ರಷ್ಟು ಹೆಚ್ಚಿಸಿಕೊಂಡು ಶೇ. 41 ಕ್ಕೆ ತಲುಪುವ ನಿರೀಕ್ಷೆಯಿದೆ.
2024ರ ಚುನಾವಣೆಯಲ್ಲಿ, ವಿಶೇಷವಾಗಿ ಎನ್ಡಿಎ ಮೈತ್ರಿಕೂಟವು 400 ಪಾರ್ ಎಂಬ ಘೋಷಣೆಯನ್ನು ನೀಡಿತು. ಅಂತಿಮವಾಗಿ, ಈ ಘೋಷಣೆಯನ್ನು ಪ್ರತಿಪಕ್ಷವಾದ ಇಂಡಿಯಾ ಒಕ್ಕೂಟ ದಾಳವಾಗಿ ಬಳಸಿಕೊಂಡಿತು. ಬಿಜೆಪಿ 400 ಸ್ಥಾನಗಳನ್ನು ಪಡೆದರೆ, ಅದು ಸಂವಿಧಾನವನ್ನು ಬದಲಾಯಿಸುತ್ತದೆ ಎಂದು ಪ್ರಚಾರ ಮಾಡಿತು. ಅಂತಿಮವಾಗಿ ಎನ್ಡಿಎ ಮೈತ್ರಿಕೂಟವು ಮಿತ್ರಪಕ್ಷಗಳಾದ ಟಿಡಿಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಸಹಾಯದಿಂದ 293 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ ಕೇವಲ 240 ಸ್ಥಾನಗಳನ್ನು ಗೆದ್ದಿತು. ಅದು ಸ್ವತಂತ್ರವಾಗಿ ಮ್ಯಾಜಿಕ್ ಫಿಗರ್ ಅನ್ನು ದಾಟಲು ಸಾಧ್ಯವಾಗಲಿಲ್ಲ. (ಏಜೆನ್ಸೀಸ್)
ಇನ್ನೇನು ಬೇಸಿಗೆ ಶುರು… ನೀರಿನ ಜತೆ ಇದನ್ನು ಬೆರೆಸಿ ಸಿಂಪಡಿಸಿ ಹಾವುಗಳು ಮನೆ ಬಳಿ ಸುಳಿಯುವುದಿಲ್ಲ! Snake
ಕೆಲ ನಿರ್ದೇಶಕರು ನನಗೆ… ಶಾಕಿಂಗ್ ಹೇಳಿಕೆ ನೀಡಿದ ಸೂರ್ಯಕಾಂತಿ ಬೆಡಗಿ ರೆಜಿನಾ ಕ್ಯಾಸ್ಸಂದ್ರ! Regina Cassandra