

ಸೂರತ್: ಕರೊನಾ ವಿರುದ್ಧ ಹೋರಾಟದಲ್ಲಿ ಮಾಸ್ಕ್ ತುಂಬ ಮುಖ್ಯ ಎಂಬುದನ್ನು ಆರೋಗ್ಯ ತಜ್ಞರು ಹೇಳಿದ್ದಾರೆ. ಇದೀಗ ಮಾಸ್ಕ್ ಅಗತ್ಯ ವಸ್ತುಗಳಲ್ಲಿ ಒಂದಾಗಿ ಬದಲಾಗಿದೆ.
ಇಂಥ ಮಾಸ್ಕ್ನಿಂದಲೇ ಒಂದಷ್ಟು ಜನ ಹಣ ಮಾಡಿಕೊಳ್ಳುತ್ತಿದ್ದಾರೆ. ಬಟ್ಟೆಗಳ ಮಾಸ್ಕ್ ಹೊಲಿದು ಮಾರಾಟ ಮಾಡುವವರು ಒಂದೆಡೆಯಾದರೆ, ಚಿನ್ನ, ಬೆಳ್ಳಿ ಮಾಸ್ಕ್ಗಳನ್ನು ತಯಾರಿಸಿ ಹಣ ಮಾಡುತ್ತಿರುವವರು ಮತ್ತೊಂದೆಡೆ.
ಕರೊನಾ ಸಾಂಕ್ರಾಮಿಕ ರೋಗ ಇದ್ದರೂ ಮದುವೆಗಳು ನಿಲ್ಲುತ್ತಿಲ್ಲ. ಚಿನ್ನ, ಬೆಳ್ಳಿ, ವಜ್ರದ ಆಭರಣಗಳೂ ಭರ್ಜರಿ ಮಾರಾಟ ಆಗುತ್ತಿವೆ. ಇದೀಗ ಜ್ಯುವೆಲರಿ ಶಾಪ್ಗಳು ಕೂಡ ಬೆಲೆಬಾಳುವ ಮಾಸ್ಕ್ಗಳನ್ನೂ ಮಾರಾಟಕ್ಕೆ ಇಡುತ್ತಿವೆ. ಚಿನ್ನ, ಬೆಳ್ಳಿಯ ಮಾಸ್ಕ್ಗಳು ಈಗ ಮಾರ್ಕೆಟ್ಗೆ ಲಗ್ಗೆ ಇಟ್ಟಿವೆ.
ಇದೀಗ ಸೂರತ್ನಲ್ಲಿರುವ ಒಂದು ವಜ್ರಾಭರಣಗಳ ಮಳಿಗೆ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ವಜ್ರದ ಮಾಸ್ಕ್ಗಳನ್ನು ಮಾರಾಟ ಮಾಡುತ್ತಿದೆ.ಡೈಮಂಡ್ ಹರಳುಗಳನ್ನು ಒತ್ತಾಗಿ ಸೇರಿಸಿ ಮಾಡಲಾದ ಹಾರಗಳಿಂದ ರೂಪಿಸಲಾದ ಈ ಮಾಸ್ಕ್ಗಳ ಬೆಲೆ 1 ಲಕ್ಷ ರೂ.ದಿಂದ 4 ಲಕ್ಷ ರೂಪಾಯಿವರೆಗೆ ಇದೆ. ಇದನ್ನೂ ಓದಿ:ಕನ್ಯೆಯರ ರಕ್ತವೇ ಬೇಕಾಗಿತ್ತು ಈಕೆಯ ಸ್ನಾನಕ್ಕೆ…; 600 ಹುಡುಗಿಯರನ್ನು ಕೊಂದವಳು ಕಂಡಿದ್ದು ದುರಂತ ಅಂತ್ಯ
ಸ್ವಲ್ಪ ದಿನಗಳ ಹಿಂದೆ ಪುಣೆಯ ಪಿಂಪ್ರಿ ಚಿಂಚೇವಾಡ್ನ ನಿವಾಸಿ ಶಂಕರ್ ಕುರಾಡೆ ಅವರು 2.89 ಲಕ್ಷ ರೂ.ಬೆಲೆಯ ಚಿನ್ನದ ಮಾಸ್ಕ್ನ್ನು ಖರೀದಿಸಿ, ಧರಿಸಿದ್ದರು. ಫೋಟೋ ಕೂಡ ಎಲ್ಲೆಡೆ ವೈರಲ್ ಆಗಿತ್ತು. ಮಾಸ್ಕ್ನಲ್ಲಿ ಸಣ್ಣ ರಂಧ್ರಗಳು ಇದ್ದು, ಉಸಿರಾಟಕ್ಕೂ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದಿದ್ದರು.
ಇದೀಗ ವಜ್ರದ ಮಾಸ್ಕ್ಗಳೂ ಕೂಡ ಲಗ್ಗೆಯಿಟ್ಟಿದ್ದು, ಜನ ಎಷ್ಟರ ಮಟ್ಟಿಗೆ ಆಕರ್ಷಿತರಾಗುತ್ತಾರೆ ಎಂಬುದು ಕುತೂಹಲ.(ಏಜೆನ್ಸಿಸ್)