More

    ಕನ್ಯೆಯರ ರಕ್ತವೇ ಬೇಕಾಗಿತ್ತು ಈಕೆಯ ಸ್ನಾನಕ್ಕೆ…; 600 ಹುಡುಗಿಯರನ್ನು ಕೊಂದವಳು ಕಂಡಿದ್ದು ದುರಂತ ಅಂತ್ಯ

    ಇತಿಹಾಸದ ಪುಟಗಳಲ್ಲಿ ಅದೆಷ್ಟೋ ಶೂರ, ವೀರ, ಪರಾಕ್ರಮಿ ರಾಜರು, ಸೌಂದರ್ಯದಿಂದಲೇ ಪ್ರಸಿದ್ಧರಾದ ರಾಣಿಯರ ಬಗ್ಗೆ ಉಲ್ಲೇಖವಿದೆ.

    ಆದರೆ ಇಲ್ಲೊಬ್ಬಳು ರಾಣಿಯ ಕತೆ ಸಂಪೂರ್ಣ ಭಿನ್ನ. ಬರೀ ಕ್ರೂರತನವನ್ನೇ ತುಂಬಿಕೊಂಡಿದ್ದ ಈ ರಾಣಿ ತನ್ನ ಸ್ವಾರ್ಥಕ್ಕೋಸ್ಕರ ಬರೋಬ್ಬರಿ 600 ಕನ್ಯೆಯರನ್ನು ಕೊಂದಿದ್ದಳು.

    ಈಕೆ ಯುರೋಪ್​ ಒಕ್ಕೂಟದ ಹಂಗಾರಿಯ ರಾಣಿಯಾಗಿದ್ದವಳು. ಹೆಸರು ಎಲಿಜಬೆತ್​ ಬಾಥರಿ. ಎಲೆಜಬೆತ್​ 1585 ರಿಂದ 1610ರ ಕಾಲದಲ್ಲಿ ಇದ್ದ ರಾಣಿ. ಇವಳ ಸ್ನಾನಕ್ಕೆ ಇನ್ನೂ ಮದುವೆಯಾಗದ, ಕನ್ಯೆಯರ ರಕ್ತ ಬೇಕಾಗಿತ್ತು. ಅದಕ್ಕಾಗಿ ಈಕೆ ತನ್ನ ಬದುಕಿನ ಅವಧಿಯಲ್ಲಿ 600ಕ್ಕೂ ಹೆಚ್ಚು ಹುಡುಗಿಯರನ್ನು ಕೊಂದಿದ್ದಳು.

    ಈ ರಾಣಿಗೆ ಸೌಂದರ್ಯದ ಹುಚ್ಚು. ತಾನು ಸದಾ ಸುಂದರಿಯಾಗಿರಬೇಕು ಎಂಬ ಮೋಹ. ಅದಕ್ಕಾಗಿ ಏನೇನೋ ಕಸರತ್ತು ನಡೆಸುತ್ತಿದ್ದ ಆಕೆಗೆ, ಯಾರೋ ನೀಡಿದ್ದ ಸಲಹೆ ಇದಾಗಿತ್ತು. ಕನ್ಯೆಯರ ರಕ್ತದಲ್ಲಿ ಸ್ನಾನ ಮಾಡಿದರೆ ವಯಸ್ಸಾದರೂ ಸೌಂದರ್ಯ ಮಾಸುವುದಿಲ್ಲ ಎಂದು ಹೇಳಿದ್ದರು. ಅದನ್ನೇ ನಂಬಿಕೊಂಡಿದ್ದ ರಾಣಿ, ಹುಡುಗಿಯರನ್ನೇ ಟಾರ್ಗೆಟ್​ ಮಾಡಿದ್ದಳು.
    ಕನ್ಯೆಯರನ್ನು ಕೊಂದು, ಅವರ ರಕ್ತವನ್ನು ಬಳಕೆ ಮಾಡುವ ಜತೆಗೆ, ಅವರ ದಂತದ ಮಾಂಸವನ್ನೂ ತೆಗೆಯುತ್ತಿದ್ದಳು. ರಾಣಿಯ ಈ ಕ್ರೂರ ಕೆಲಸದಲ್ಲಿ ಆಕೆಯ ಮೂವರು ದಾಸಿಯರೂ ಶಾಮೀಲಾಗಿದ್ದರು.

    ಹಂಗೇರಿ ರಾಜಮನೆತನಕ್ಕೆ ಸೇರಿದ್ದ ಎಲೆಜಬೆತ್​ಳನ್ನು ಹೇಳುವವರು ಕೇಳುವವರು ಇರಲಿಲ್ಲ. ತನ್ನ ಅರಮನೆಯಲ್ಲಿ ಕೆಲಸ ಮಾಡಲು ಬನ್ನಿ, ನಾನು ನಿಮಗೆ ಹಣ ಕೊಡುತ್ತೇನೆ ಎಂದು ಹೇಳಿ, ಸುತ್ತಲಿನ ಹಳ್ಳಿಗಳಿಂದ ಬಡ ಹೆಣ್ಣುಮಕ್ಕಳನ್ನು ಕರೆಸುತ್ತಿದ್ದಳು. ಅವರನ್ನೇ ಕೊಂದು ರಕ್ತ ಸ್ನಾನ ಮಾಡುತ್ತಿದ್ದಳು.

    ರಾಣಿಯ ಈ ಕೃತ್ಯದಿಂದಾಗಿ ಬಡ ಹೆಣ್ಣುಮಕ್ಕಳ ಸಂಖ್ಯೆಯೇ ಕಡಿಮೆಯಾಗತೊಡಗಿತ್ತು. ಆಕೆಗೆ ಕನ್ಯೆಯರು ಸಿಗುತ್ತಿರಲಿಲ್ಲ. ಬಳಿಕ ರಾಣಿ ಶ್ರೀಮಂತರ ಮನೆಯ ಯುವತಿಯರ ಮೇಲೆ ಕಣ್ಣು ಹಾಕತೊಡಗಿದ್ದಳು.

    ಹಂಗೇರಿಯನ್​ ರಾಜನಿಗೆ ಈ ವಿಚಾರ ತಿಳಿಯಿತು. ರಾಜ್ಯದಲ್ಲಿ ಹುಡುಗಿಯರ ಸಂಖ್ಯೆ ಯಾಕೆ ಕಡಿಮೆಯಾಯಿತು ಎಂಬ ಪ್ರಶ್ನೆ ಏಳುತ್ತಿದ್ದಂತೆ, ರಾಜ ತನಿಖೆಗೆ ಆದೇಶ ನೀಡಿದ. ಕೊನೆಗೂ ಎಲೆಜಿಬೆತ್​ ಸಿಕ್ಕಿಬಿದ್ದಳು. ಅವಳ ಕೊಠಡಿಯ ತುಂಬೆಲ್ಲ ಅಸ್ಥಿಪಂಜರಗಳ ರಾಶಿ ಇತ್ತು. ಹುಡುಗಿಯರು ಧರಿಸಿ ಬಂದಿದ್ದ ಚಿನ್ನ, ಬೆಳ್ಳಿ ಆಭರಣಗಳು ಇದ್ದವು.

    1610ರಲ್ಲಿ ಎಲಿಜಬೆತ್​ಳನ್ನು ಬಂಧಿಸಲಾಯಿತು. ಆಕೆಯ ಅರಮನೆಯ ಜೈಲಿನಲ್ಲೇ ಕೂಡಿಹಾಕಲಾಯಿತು. ಬಂಧನವಾಗಿ ನಾಲ್ಕು ವರ್ಷ, ಅಂದರೆ 1614ರಲ್ಲಿ ಆಕೆ ಜೈಲಿನಲ್ಲಿಯೇ ಮೃತಪಟ್ಟಳು. (ಏಜೆನ್ಸೀಸ್​)

    ಕರೊನಾ ಇನ್ನೂ ತೀವ್ರ ಸ್ವರೂಪಕ್ಕೆ ತಿರುಗಿಲ್ಲ, ಅಂತರ ಕಾಯ್ದುಕೊಳ್ಳುವುದೇ ನಮಗಿರುವ ದಾರಿ: ಡಬ್ಲ್ಯುಎಚ್​ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts