More

    ಕರೊನಾ ಇನ್ನೂ ತೀವ್ರ ಸ್ವರೂಪಕ್ಕೆ ತಿರುಗಿಲ್ಲ, ಅಂತರ ಕಾಯ್ದುಕೊಳ್ಳುವುದೇ ನಮಗಿರುವ ದಾರಿ: ಡಬ್ಲ್ಯುಎಚ್​ಒ

    ಜಿನೀವಾ: ಮಹಾಮಾರಿ ಕರೊನಾ ವೈರಸ್​ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ​) ಮತ್ತೊಂದು ಮಹತ್ವದ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದು, ಈಗಲಾದರೂ ಜನರು ಎಚ್ಚೆತ್ತುಕೊಳ್ಳುವಂತೆ ಮನವಿ ಮಾಡಿದೆ. ಡಬ್ಲ್ಯುಎಚ್​ ಹೇಳುವ ಪ್ರಕಾರ ಕರೊನಾ ಇನ್ನೂ ತೀವ್ರ ಸ್ವರೂಪವನ್ನು ಪಡೆದುಕೊಂಡಿಲ್ಲ ಎಂದು ಎಚ್ಚರಿಸಿದೆ.

    ಡಬ್ಲ್ಯುಎಚ್ಒ ಮಹಾನಿರ್ದೇಶಕರಾದ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಾತನಾಡಿ, ವಿಶ್ವದ ಬಹುತೇಕ ಭಾಗಗಳಲ್ಲಿ ಕರೊನಾ ವೈರಸ್​ ಮೇಲೆ ಇನ್ನು ನಿಯಂತ್ರಣ ಸಾಧಿಸಲು ಸಾಧ್ಯವಾಗಿಲ್ಲ. ದಿನದಿಂದ ದಿನಕ್ಕೆ ವೈರಸ್​ ಕೆಟ್ಟ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದಿದ್ದಾರೆ.

    ಇದನ್ನೂ ಓದಿ: ಮಗನ ವಯಸ್ಸಿನ ಬಾಡಿಗೆದಾರನ ಜತೆ ಅಕ್ರಮ ಸಂಬಂಧ ಶಂಕೆ: ಪತ್ನಿ ಕೈಮುರಿದ ನಿವೃತ್ತ ಸರ್ಕಾರಿ ನೌಕರ

    ಕಳೆದ ಆರು ವಾರಗಳಲ್ಲಿ ಜಾಗತಿಕವಾಗಿ ಕರೊನಾ ವೈರಸ್​ ಪ್ರಕರಣಗಳು ದ್ವಿಗುಣವಾಗಿದೆ. ಇದೀಗ ವಿಶ್ವಾದ್ಯಂತ ಒಟ್ಟು 12 ಮಿಲಿಯನ್ ಖಚಿತ ಪ್ರಕರಣಗಳು ದಾಖಲಾಗಿವೆ.​ ಇಲ್ಲದೆ, ಕರೊನಾ ಮೃತ್ಯೂಕೂಪಕ್ಕೆ ಈಗಾಗಲೇ 550,000 ಮಂದಿ ಬಲಿಯಾಗಿದ್ದಾರೆ. ಅಮೆರಿಕ, ಬ್ರೆಜಿಲ್​ ಹಾಗೂ ಭಾರತದಲ್ಲಿ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದ್ದಾರೆ.

    ಕೆಲವು ದೇಶಗಳಿಂದ ಯುನೈಟೆಡ್ ಕಿಂಗ್​ಡಮ್​ಗೆ ಮರಳುವ ಅಥವಾ ಭೇಟಿ ನೀಡುವ ಜನರಿಗೆ ಕ್ಯಾರೆಂಟೈನ್ ನಿಯಮಗಳಲ್ಲಿ ಇಂದಿನಿಂದ ಸಡಿಲಗೊಳಿಸಿರುವುದರ ಬೆನ್ನಲ್ಲೇ ಘೆಬ್ರೆಯೆಸಸ್ ಅವರು ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಯುಕೆ ಸರ್ಕಾರ ಕೇಂದ್ರಾಡಳಿ ಪ್ರದೇಶ ಹಾಗೂ ದೇಶಗಳು ಸೇರಿದಂತೆ 72 ಸ್ಥಳಗಳನ್ನು ಪಟ್ಟಿ ಮಾಡಿದ್ದು, ಇಲ್ಲಿಂದ ಯುಕೆಗೆ ಬರುವ ಜನರು 14 ದಿನಗಳವರೆಗೆ ಸ್ವಯಂ ಕ್ವಾರಂಟೈನ್​ನಲ್ಲಿ ಇರುವ ಅವಶ್ಯಕತೆ ಇಲ್ಲ ಎಂದು ಹೇಳಿದೆ.

    ಇದನ್ನೂ ಓದಿ: VIDEO| ಸುಮಾರು 10 ಅಡಿ ಉದ್ದದ ನಿಗೂಢ ಜೀವಿ ನೋಡಿ ಬೆಚ್ಚಿಬಿದ್ದ ಗ್ರಾಮಸ್ಥರು!

    ಕರೊನಾ ವೈರಸ್ ವಿಶ್ವದ ಕೆಲ ಶ್ರೀಮಂತ ರಾಷ್ಟ್ರಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ಹೆಚ್ಚಿಸಿದೆ. ಕರೊನಾ ಕಟ್ಟಿಹಾಕಲು ಪ್ರತ್ಯೇಕತೆ, ಪರೀಕ್ಷೆ, ಪ್ರಕರಣಗಳ ಚಿಕಿತ್ಸೆ ಮತ್ತು ಕ್ವಾರಂಟೈನ್​ ಸಂಪರ್ಕ ಮುಂತಾದವುಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿದಾಗಲೇ ಕರೊನಾವನ್ನು ನಿಯಂತ್ರಣಕ್ಕೆ ತರಬಹುದು. ಆದರೆ, ಅನೇಕ ರಾಷ್ಟ್ರಗಳಲ್ಲಿ ವೈರಸ್​ ಕೆಟ್ಟ ಸ್ವರೂಪಕ್ಕೆ ತಿರುಗಿದೆ ಎಂದರು. (ಏಜೆನ್ಸೀಸ್​)

    ಸಿಬಿಎಸ್​ಇ ಪಠ್ಯ ಕಡಿತ: ಜೆಇಇ, ನೀಟ್​ ಪರೀಕ್ಷೆ ಮೇಲೂ ಪರಿಣಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts