ಸ್ನೇಹಿತನಿಗೆ 52 ಲಕ್ಷ ರೂ. ಮೌಲ್ಯದ ದುಬಾರಿ ಕಾರು ಗಿಫ್ಟ್ ಕೊಟ್ಟ ಧ್ರುವ ಸರ್ಜಾ

Dhruva Sarja (1)
Published on

ಬೆಂಗಳೂರು: ಸ್ಯಾಂಡಲ್​​ವುಡ್​​ ನಟ ಧ್ರುವ ಸರ್ಜಾ ಗೆಳೆಯನ ಹುಟ್ಟುಹಬ್ಬಕ್ಕೆ ಭರ್ಜರಿ ಸರ್ಪ್ರೈಸ್ ಕೊಟ್ಟಿದ್ದಾರೆ. ದುಬಾರಿ ಉಡುಗೊರೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಧ್ರುವ ಸರ್ಜಾ, ತಮ್ಮ ಆತ್ಮೀಯ ಗೆಳೆಯ ಹಾಗೂ ಮ್ಯಾನೇಜರ್ ಅಶ್ವಿನ್ ಹುಟ್ಟುಹಬ್ಬಕ್ಕೆ 52 ಲಕ್ಷ ರೂ. ಮೌಲ್ಯದ ಟೊಯೋಟಾ ಫಾರ್ಚುನರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಅಶ್ವಿನ್ ಹುಟ್ಟುಹಬ್ಬದಂದು ಗೆಳೆಯನನ್ನು ಕರೆದುಕೊಂಡು ಹೋಗಿ ಆಶ್ಚರ್ಯವಾಗುವಂತೆ ಗಿಫ್ಟ್ ಆಗಿ ಕಾರನ್ನು ನೀಡಿದ್ದಾರೆ. ಅಶ್ವಿನ್  ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ಆವರ ತಂದೆ ನಿಧನರಾಗಿದ್ದಾರೆ. ಕಾರಿನ ಜೊತೆಗೆ ಅಶ್ವಿನ್ ಅವರಿಗೆ ಮರೆಯಲಾದ ಫೋಟೋವನ್ನು ಗಿಫ್ಟ್ ಆಗಿ ನೀಡಿದ್ದಾರೆ. ಅಶ್ವಿನ್​ರ ಅಪ್ಪ-ಅಮ್ಮನ ಹಳೆಯ ಫೋಟೋವನ್ನು ಹುಡುಕಿ ಅದನ್ನು ಕಾರಿನ ಒಳಗೆ ಇರಿಸಿದ್ದಾರೆ. ಗೆಳೆಯ ಧ್ರುವ ಕೊಟ್ಟ ಈ ಉಡುಗೊರೆ ಕಂಡು ಅಶ್ವಿನ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಬಳಿಕ ಕೇಕ್ ಕತ್ತರಿಸಿ ಗೆಳೆಯ ಹುಟ್ಟುಹಬ್ಬ ಆಚರಿಸಿದರು.


ಧ್ರುವ ಸರ್ಜಾ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಕೆಲಸಗಳ ಜೊತೆಗೆ ಆಗಾಗ ಮಾನವೀಯ ಕೆಲಸಗಳ ಮೂಲಕವೂ ಸುದ್ದಿಯಲ್ಲಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net