

ತಮಿಳುನಾಡು: ಹೊಸ ವರ್ಷ ಸಮೀಪಿಸುತ್ತಿರುವ ಬೆನ್ನಲ್ಲೇ ಇದೀಗ ಸಿನಿಪ್ರಿಯರ ಕುತೂಹಲ ಕೂಡ ಹೆಚ್ಚಿದ್ದು, 2024ರ ಆರಂಭದಲ್ಲಿ ಯಾವೆಲ್ಲ ನಟರ ಸಿನಿಮಾಗಳು ತೆರೆಗೆ ಬರಲಿದೆ ಎಂಬ ಮಾಹಿತಿಯನ್ನು ಕಲೆಹಾಕುವಲ್ಲಿ ಸದ್ಯ ಮುಂದಿದ್ದಾರೆ. 2024ರ ಸಂಕ್ರಾಂತಿ ಹಬ್ಬದ ವಾರದಲ್ಲಿ ಬಾಲಿವುಡ್, ಸ್ಯಾಂಡಲ್ವುಡ್ ಚಿತ್ರಗಳಿಗೆ ಹೋಲಿಸಿದರೆ ಟಾಲಿವುಡ್ ಮತ್ತು ಕಾಲಿವುಡ್ ಚಿತ್ರಗಳು ಬಿಡುಗಡೆಗೊಳ್ಳಲು ಸಾಲು ಸಾಲಾಗಿ ನಿಂತಿವೆ. ಆ ಪೈಕಿ ತಮಿಳು ಚಿತ್ರರಂಗದ ಸ್ಟಾರ್ ನಟ ಧನುಷ್ ಅಭಿನಯದ ಬಹುನಿರೀಕ್ಷಿರ 'ಕ್ಯಾಪ್ಟನ್ ಮಿಲ್ಲರ್' ಕೂಡ ಒಂದು.
ಈಗಾಗಲೇ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಸಿನಿಮಾ ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಜನವರಿ 12, 2024 ರಂದು ಬಿಡುಗಡೆಗೊಳ್ಳಲು ಸಿದ್ಧಗೊಂಡಿದೆ. ಆದ್ರೆ, ಅದೇ ದಿನ ತೆಲುಗು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿಲ್ಲ ಎಂಬ ಸುದ್ದಿ ಸದ್ಯ ಟಾಲಿವುಡ್ ಮಂದಿಗೆ ತೀವ್ರ ಬೇಸರ ಮೂಡಿಸಿದೆ.
ಜನವರಿ 12ರಂದು ತೆಲುಗು ಆವೃತ್ತಿಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಈ ಕುರಿತಂತೆ ಚಿತ್ರತಂಡ ಏನಾದರೂ ಬದಲಾವಣೆ ಮಾಡಲಿದೆಯಾ ಅಥವಾ ನೇರವಾಗಿ ಒಟಿಟಿಯಲ್ಲೇ ರಿಲೀಸ್ ಮಾಡಲಿದ್ಯಾ? ಎಂಬುದನ್ನು ನಿರೀಕ್ಷಿಸಬೇಕಿದೆ. ಕ್ಯಾಪ್ಟನ್ ಮಿಲ್ಲರ್ನಲ್ಲಿ ಧನುಷ್ಗೆ ಜೋಡಿಯಾಗಿ ನಟಿ ಪ್ರಿಯಾಂಕಾ ಅರುಲ್ ಮೋಹನ್ ಕಾಣಿಸಿಕೊಂಡಿದ್ದಾರೆ.
ಸತ್ಯಜ್ಯೋತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸೆಂಧಿಲ್ ತ್ಯಾಗರಾಜ್ ಮತ್ತು ಅರ್ಜುನ್ ತ್ಯಾಗರಾಜನ್ ಚಿತ್ರವನ್ನು ನಿರ್ಮಿಸಿರುವ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್, ಸಂದೀಪ್ ಕಿಶನ್, ನಿವೇದಿತಾ ಸತೀಶ್, ಜಾನ್ ಕೊಕ್ಕೆನ್, ವಿಜಯಕನ್, ಎಡ್ವರ್ಡ್ ಸೊನ್ನೆನ್‌ಬ್ಲಿಕ್ ಮೂಂತಾದವರ ತಾರಗಣವಿದೆ,(ಏಜೆನ್ಸೀಸ್).