

ಬೆಂಗಳೂರು: 'ಕೆಜಿಎಫ್' ಖ್ಯಾತಿಯ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಹಾಗೂ ಟಾಲಿವುಡ್ನ ರೆಬೆಲ್ ಸ್ಟಾರ್, ನಟ ಪ್ರಭಾಸ್ ಮತ್ತು ನಟಿ ಶ್ರುತಿ ಹಾಸನ್ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ 'ಸಲಾರ್' ಇದೀಗ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ್ದು, ಬಿಡುಗಡೆಗೊಂಡು ಇಂದಿಗೆ 9ನೇ ದಿನ ಕಳೆದರೂ, ಗಲ್ಲಾಪೆಟ್ಟಿಗೆಯಲ್ಲಿ ತನ್ನ ಆರ್ಭಟವನ್ನು ಮುಂದುವರೆಸಿದೆ. ಅಷ್ಟಕ್ಕೂ ಪ್ರಭಾಸ್ ನಟನೆಯ ಸಿನಿಮಾ ಜಾಗತಿಕವಾಗಿ ಇಲ್ಲಿಯವರೆಗೆ ಗಳಿಸಿದ್ದೆಷ್ಟು? ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್ ಅನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಸಿನಿಪ್ರಿಯರಿಗೆ ಇದೀಗ 'ಸಲಾರ್' ನೋಡಿ ಖುಷಿಯಾಗಿದ್ದು, ವ್ಯಾಪಕ ಪ್ರತಿಕ್ರಿಯೆ ನೀಡುವ ಮೂಲಕ ಸಿನಿಮಾ ಹೇಗಿದೆ ಎಂಬುದನ್ನು ತಮ್ಮ ಶೈಲಿಯಲ್ಲೇ ತಿಳಿಸಿದ್ದಾರೆ.
ಜಾಗತಿಕ ಬಾಕ್ಸ್ ಆಫೀಸ್ನಲ್ಲಿ 'ಸಲಾರ್' ಇಲ್ಲಿಯವರೆಗೆ ಒಟ್ಟು 578.29 ಕೋಟಿ ರೂ. ಗಳಿಕೆ ಕಂಡಿದ್ದು, ಇದೀಗ 600 ಕೋಟಿಯತ್ತ ಸಾಗುತ್ತಿದೆ. ರಿಲೀಸ್ ಆದ ಮೊದಲ ದಿನದಿಂದ 9ನೇ ದಿನಕ್ಕೆ ಪ್ರಭಾಸ್ ಚಿತ್ರ ಮಾಡಿದ ಆಯಾ ದಿನದ ಕಲೆಕ್ಷನ್ ವಿವರ ಹೀಗಿದೆ.
ದಿನ 1: 176.52 ಕೋಟಿ ರೂ.
ದಿನ 2: 101.39 ಕೋಟಿ ರೂ.
ದಿನ 3: 95.24 ಕೋಟಿ ರೂ.
ದಿನ 4: 76.91 ಕೋಟಿ ರೂ.
ದಿನ 5: 40.17 ಕೋಟಿ ರೂ.
ದಿನ 6: 31.62 ಕೋಟಿ ರೂ.
ದಿನ 7: 20.78 ಕೋಟಿ ರೂ.
ದಿನ 8: 14.21 ಕೋಟಿ ರೂ.
ದಿನ 9: 21.45 ಕೋಟಿ ರೂ.
ಒಟ್ಟು ಗಳಿಕೆ: 578.29 ಕೋಟಿ ರೂ.