ಡಿಜಿಪಿ ಕಚೇರಿ ಸಿಬ್ಬಂದಿಗೂ ಕರೊನಾ

police
Published on

ಬೆಂಗಳೂರು: ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಭದ್ರತಾ ಕಾರ್ಯನಿರ್ವಹಿಸುತ್ತಿದ್ದ ಕಾನ್​ಸ್ಟೆಬಲ್​ಗೆ ಕರೊನಾ ಸೋಂಕು ತಗುಲಿದೆ. ದೇವರಜೀವನಹಳ್ಳಿಯ ಎಸ್.ಕೆ. ಗಾರ್ಡನ್ ವಾರ್ಡ್​ನಲ್ಲಿ ನೆಲೆಸಿದ್ದರು. ರೋಗಿ ಸಂಖ್ಯೆ 1,395 ಎಂದು ಗುರುತಿಸಿ ನಿರ್ದಿಷ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಇವರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚಲಾಗು ತ್ತಿದ್ದು, ಸೋಂಕು ಹೇಗೆ ತಗುಲಿದೆ ಎಂಬುದು ಗೊತ್ತಾಗಿಲ್ಲ. ಪೇದೆ ಜತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದವರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲತಃ ಉತ್ತರ ಕರ್ನಾಟಕ ಭಾಗದವ ರಾದ ಕಾನ್​ಸ್ಟೆಬಲ್, ವಾರದ ಹಿಂದೆ ತಮ್ಮ ಊರಿಗೆ ಹೋಗಿ ಬಂದಿದ್ದರು. 2 ದಿನದ ಹಿಂದೆ ಜ್ವರ ಕಾಣಿಸಿಕೊಂಡಿದೆ. ಶಂಕೆ ಮೇರೆಗೆ ಕರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಭಾನುವಾರ (ಮೇ 31) ವರದಿ ಬಂದಿದ್ದು, ಸೋಂಕು ದೃಢಪಟ್ಟಿದೆ. ಕಾನ್​ಸ್ಟೆಬಲ್ ನೆಲೆಸಿದ್ದ ಮನೆ ಯನ್ನು ಸೋಂಕು ನಿವಾರಣ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net