ದೇವರನ್ನು ಒಲಿಸಿಕೊಳ್ಳಲು ಸಮರ್ಪಣಾ ಭಾವ ಅವಶ್ಯ

sor (12)
ಸೊರಬ ತಾಲೂಕಿನ ಚಿಕ್ಕಬ್ಬೂರು ಗ್ರಾಮದಲ್ಲಿ ವೀರಾಂಜನೇಯ ದೇವಾಲಯದ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ಧರ್ಮ ಸಭೆಯಲ್ಲಿ ಘನಬಸವ ಅಮರೇಶ್ವರ ಶ್ರೀ, ಶ್ರೀ ಸಿದ್ಧವೃಷಭೇಂದ್ರ ಸ್ವಾಮೀಜಿ, ನಾಗರಾಜ, ಗಣಪತಿ ನಾಯಕ್ ಇತರರಿದ್ದರು.
Published on

ಸೊರಬ: ದೇವರನ್ನು ಭಕ್ತಿಯ ಮೂಲಕ ಒಲಿಸಿಕೊಳ್ಳಬಹುದು ಎಂಬುದನ್ನು ಹಲವಾರು ಶಾಸ್ತ್ರಗಳು ಹೇಳಿವೆ. ಆದರೆ ಸಮರ್ಪಣಾ ಭಾವದಿಂದ ಪರಮಾತ್ಮನ ಸೇವೆ ಮಾಡಿದರೆ ಒಲಿಯುತ್ತಾನೆ. ಇದಕ್ಕೆ ಸಾಕ್ಷಿಯಂತೆ ರಾಮನ ಭಕ್ತ ಹನುಮಂತ ದೇವರು ಎಂದು ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯರು ಹೇಳಿದರು.

ತಾಲೂಕಿನ ಚಿಕ್ಕಬ್ಬೂರು ಗ್ರಾಮದಲ್ಲಿ ವೀರಾಂಜನೇಯ ದೇವಾಲಯದ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.

ಆಧುನಿಕ ಕಾಲದಲ್ಲಿ ಮನುಷ್ಯ ಬುದ್ಧಿವಂತಿಕೆ ಮೂಲಕ ದೇವರನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಆತ ಅದರಲ್ಲಿ ಎಂದೂ ಯಶಸ್ವಿ ಆಗಲು ಸಾಧ್ಯವಿಲ್ಲ. ಭಗವಂತನನ್ನು ಭಕ್ತಿಯಿಂದ ಮಾತ್ರ ಒಲಿಸಿಕೊಳ್ಳಬಹುದು. ಬುದ್ಧಿಯ ಮೂಲಕ ಮನುಷ್ಯ ಆಕಾಶದಲ್ಲಿ ಹಾರುತ್ತಿದ್ದಾನೆ. ನೀರಿನಲ್ಲಿ ಈಜುತ್ತಿದ್ದಾನೆ. ಚಂದ್ರ, ಮಂಗಳ ಗ್ರಹದಲ್ಲಿ ಸಂಶೋಧನೆಯತ್ತ ದಾಪುಗಾಲು ಇಟ್ಟಿದ್ದಾನೆ. ಆದರೆ ದೇವರನ್ನು ಮಾತ್ರ ಶ್ರದ್ಧಾಭಕ್ತಿಯಿಂದ ಒಲಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.

ಜಡೆ ಸಂಸ್ಥಾನ ಮಠದ ಶ್ರೀ ಕುಮಾರ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ ಮಾತನಾಡಿ, ಹಳ್ಳಗಳು, ನದಿಗಳು, ಕೆರೆ ಕಟ್ಟೆಗಳು ಬತ್ತಬಹುದು ಆದರೆ ಗ್ರಾಮಾಸ್ಥರ ಭಕ್ತಿ ಎಂದಿಗೂ ಬತ್ತುವುದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು. ಆಲಳ್ಳಿ ಮಠದ ನಟರಾಜ ಅವರ ನೇತೃತ್ವದಲ್ಲಿ ವಿಧಿ ವಿಧಾನಗಳು ನಡೆದವು. ನಾಗರಾಜ, ಗಣಪತಿ ನಾಯಕ್, ಸುಮಾ, ಅಶೋಕ್ ಗೌಡ, ಗ್ರಾಮದ ಅಧ್ಯಕ್ಷರು, ಪದಾಧಿಕಾರಿಗಳು, ದಾನಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net