ಶ್ರದ್ಧೆಯ ಆರಾಧನೆ ಸಂಕಟಗಳಿಗೆ ಪರಿಹಾರ

sor jade
ಆನವಟ್ಟಿಯ ತಲ್ಲೂರು, ತಿಮ್ಮಾಪುರ ವ್ಯಾಪ್ತಿಯ ಶಿರಡಿ ಸಾಯಿಬಾಬಾ ದೇವಾಲಯದ ಆವರಣದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಮಂಜಯ್ಯ ಹಿರೇಮಠ, ವಿಜಯೇಂದ್ರ ಸ್ವಾಮಿ, ಬಸವರಾಜಪ್ಪ ಇತರರಿದ್ದರು.
Published on

ಸೊರಬ: ಭಗವಂತನಿಂದ ಸೃಷ್ಟಿಯಾದ ಜಗತ್ತು ಎಲ್ಲ ಸಂಕಷ್ಟಗಳಿಗೂ ಆತನೇ ಮಾರ್ಗದರ್ಶನ ತೋರುತ್ತಾನೆ. ಆದ್ದರಿಂದ ಆತನೇ ಮಹಿಮಾ ಪುರುಷ ಎಂದು ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಹೇಳಿದರು.

ಆನವಟ್ಟಿಯ ತಲ್ಲೂರು, ತಿಮ್ಮಾಪುರ ವ್ಯಾಪ್ತಿಯ ಶಿರಡಿ ಸಾಯಿಬಾಬಾ ದೇವಾಲಯದ ಆವರಣದಲ್ಲಿ ಸದ್ಗುರು ಸಾಯಿ ಸೇವಾ ಸಮಿತಿ ಟ್ರಸ್ಟ್‌ನಿಂದ ಆಯೋಜಿಸಿದ್ದ ಕಾರ್ತಿಕ ದೀಪೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಕಣ ಕಣದಲ್ಲಿಯೂ ದೇವರ ಅಸ್ತಿತ್ವವಿದ್ದು, ಎಲ್ಲ ಕಡೆಗೂ ವ್ಯಾಪಕವಾಗಿ ಹರಡಿಕೊಂಡಿದೆ. ಭಕ್ತನು ಆತನನ್ನು ಶ್ರದ್ಧೆಯಿಂದ ಆರಾಧಿಸಿದಾಗ ಪರಿಹಾರವಾಗುವ ಸಂಕಟಗಳ ಕಾರಣದಿಂದಲೇ ದೇವರು ಮಹಿಮಾ ಪುರುಷ ಎನ್ನಿಸಿಕೊಳ್ಳುತ್ತಾನೆ. ಆದರೆ ಮನುಷ್ಯರು ಉತ್ತಮ ಕೆಲಸಗಳಿಗಿಂತ ಹೊಲ, ಮನೆ, ತೋಟ, ಧನ, ವಸ್ತು, ಒಡವೆ, ಪದವಿ, ಪಾರಿತೋಷಕಗಳ ಸಂಗ್ರಹ ಮಾಡುತ್ತಿದ್ದಾನೆ. ಆದರೆ ಇದ್ಯಾವುದೂ ಶಾಶ್ವತವಲ್ಲ. ಶಾಶ್ವತವಾದದ್ದು ಧರ್ಮ ಮಾತ್ರ ಎಂದರು.

ಗ್ರಾಮದ ಮುಖಂಡ ಚೌಟಿ ಚಂದ್ರಶೇಖರ ಗೌಡ ಮಾತನಾಡಿ, ಈ ಭಾಗದಲ್ಲಿ ಶಿರಡಿ ಸಾಯಿಬಾಬಾ ದೇವಾಲಯ ಇರುವುದು ಹೆಮ್ಮೆಯ ಸಂಗತಿ,. ಸರ್ವರಿಗೂ ಇದರಿಂದ ಶಾಂತಿ ಸಿಗುತ್ತಿದೆ. ಮಠ ಮಂದಿರಗಳಿಂದ ಸಂಸ್ಕಾರ ಸಿಗುತ್ತದೆ. ದೇವಾಲಯ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಪ್ರಾತಃಕಾಲದಲ್ಲಿ ದೇವರಿಗೆ ಅಭಿಷೇಕ, ಅಷ್ಟೋತ್ತರ ಪೂಜೆಗಳು ನಡೆದವು. ಕಾರ್ಯಕ್ರಮದ ನಂತರ ಪ್ರಸಾದ ವಿನಿಯೋಗ ನಡೆಯಿತು. ದೇವಾಲಯ ಮುಖ್ಯಸ್ಥ ಮಂಜಯ್ಯ ಹಿರೇಮಠ, ವಿಜಯೇಂದ್ರ ಸ್ವಾಮಿ, ಬಸವರಾಜಪ್ಪ, ಇಂಜಿನಿಯರ್ ಅಶೋಕ್, ಗುರುರಾಜ್, ಆನಂದ ರಾವ್, ಶಿಕ್ಷಕ ಅಶೋಕ್, ಜಗನ್ನಾತಪ್ಪ, ಜಯಪ್ಪ, ಶಿವಶಂಕರಪ್ಪ, ಚನ್ನಬಸಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net