

ವಾಷಿಂಗ್ಟನ್: ಭಾರತ ಸೇರಿ ಹಲವು ರಾಷ್ಟ್ರಗಳು ಹೈಪರ್ಸಾನಿಕ್ ಅಣ್ವಸ್ತ್ರ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುತ್ತಿವೆ ಎಂದು ಅಮೆರಿಕದ ಕಾಂಗ್ರೆಸ್ನ (ಸಂಸತ್) ಸ್ವತಂತ್ರ ಸಮಿತಿ(ಸಿಆರ್ಎಸ್)ಯೊಂದರ ವರದಿ ತಿಳಿಸಿದೆ. ಇತ್ತೀಚೆಗೆ ಚೀನಾ ಇಂಥ ಕ್ಷಿಪಣಿಯ ಪರೀಕ್ಷೆ ನಡೆಸಿದ್ದು, ಇದರ ಬೆನ್ನಿಗೆ ಬೇರೆ ದೇಶಗಳಲ್ಲೂ ಇಂಥ ಯತ್ನ ನಡೆಯುತ್ತಿದೆ. ಇದು ಚೀನಾವನ್ನು ಕಟ್ಟಿಹಾಕುವ ಪ್ರಯತ್ನವೂ ಆಗಿದೆ ಎನ್ನಲಾಗಿದೆ. ಅಮೆರಿಕ, ರಷ್ಯಾ, ಚೀನಾ ಈಗಾಗಲೇ ಹೈಪರ್ಸಾನಿಕ್ ಶಸ್ತ್ರ ಕಾರ್ಯಕ್ರಮಗಳನ್ನು ಹೊಂದಿದ್ದು, ಈ ಸಾಲಿಗೆ ಸೇರಲು ಆಸ್ಟ್ರೇಲಿಯಾ, ಭಾರತ, ಫ್ರಾನ್ಸ್, ಜರ್ಮನಿ, ಜಪಾನ್ ಪ್ರಯತ್ನ ನಡೆಸುತ್ತಿವೆ. ಈ ಅಣ್ವಸ್ತ್ರ ಸಜ್ಜಿತ ಹೈಪರ್ಸಾನಿಕ್ ಕ್ಷಿಪಣಿ ಅಭಿವೃದ್ಧಿಗಾಗಿ ಆಸ್ಟ್ರೇಲಿಯಾ, ಅಮೆರಿಕವನ್ನು ಆಶ್ರಯಿಸಿದೆ. ಭಾರತವು ರಷ್ಯಾವನ್ನು ನೆಚ್ಚಿಕೊಂಡಿದೆ. ಜತೆಗೆ ತಾನೆ ಸ್ವಂತವಾಗಿಯೂ ಒಂದು ಯೋಜನೆಯನ್ನು ಭಾರತ ದೇಶೀಯವಾಗಿ ಅಭಿವೃದ್ಧಿ ಪಡಿಸುತ್ತಿದೆ ಎಂದು ಸಿಆರ್ಎಸ್ ಹೇಳಿದೆ.
ಹೈಪರ್ಸಾನಿಕ್ ವಾಹನದ ಪರೀಕ್ಷೆಯನ್ನಷ್ಟೆ ನಡೆಸಲಾಯಿತೇ ಹೊರತು ಅದು ಅಣ್ವಸ್ತ್ರ ಸಜ್ಜಿತ ಹೈಪರ್ಸಾನಿಕ್ ಕ್ಷಿಪಣಿಯಲ್ಲ ಎಂದು ಚೀನಾ ಹೇಳಿತ್ತು. ಆದರೆ, ಚೀನಾ ಈ ಹೈಪರ್ಸಾನಿಕ್ ಕ್ಷಿಪಣಿಯು 12 ಮೈಲಿ ಅಂತರದಲ್ಲಿ ನಿಗದಿತ ಗುರಿಯನ್ನು ತಪ್ಪಿಸಿತ್ತು ಎಂದು ಬ್ರಿಟನ್ ಪತ್ರಿಕೆ ಕಳೆದ ವಾರ ವರದಿ ಮಾಡಿತ್ತು.
ಚೀನಾ ಗಡಿಗೆ ಪಿನಾಕ ರಾಕೆಟ್: ಅಸ್ಸಾಂನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ಚೀನಾದಿಂದ ಎದುರಾಗಬಹುದಾದ ಯಾವುದೇ ಅಪಾಯವನ್ನು ಸಮರ್ಥವಾಗಿ ಎದುರಿಸಲು ಗಡಿಯ ಮುಂಚೂಣಿ ಘಟಕಗಳಿಗೆ ಪಿನಾಕ ರಾಕೆಟ್ ಮತ್ತು ಸ್ಮೆರ್ಚ್ ಮಲ್ಪಿಪಲ್ ರಾಕೆಟ್ ಲಾಂಚರ್ ವ್ಯವಸ್ಥೆಯನ್ನು ಭಾರತೀಯ ಸೇನೆ ನಿಯೋಜಿಸಿದೆ. ಪಿನಾಕ ರಾಕೆಟ್ ಸ್ವಯಂಚಾಲಿತ ಫಿರಂಗಿ ವ್ಯವಸ್ಥೆಯಾಗಿದ್ದು, ಸುಮಾರು 40 ಕಿ.ಮೀ. ವ್ಯಾಪ್ತಿಯ ಗುರಿಯನ್ನು ಭೇದಿಸುವ ಸಾಮರ್ಥ್ಯ ಹೊಂದಿದೆ. 44 ಸೆಕೆಂಡ್ಗಳಲ್ಲಿ 72 ರಾಕೆಟ್ಗಳನ್ನು ಇದು ಉಡಾಯಿಸಬಲ್ಲದು.
ಅಭ್ಯಾಸ್ ಪರೀಕ್ಷೆ ಯಶಸ್ವಿ: ವಿಸõತ ವೈಮಾನಿಕ ಗುರಿಯನ್ನು ಛೇದಿಸುವಂತಹ ಅತಿ ವೇಗದ ವೈಮಾನಿಕ ವಾಹನ (ಹೀಟ್) ಅಭ್ಯಾಸ್ ಪರೀಕ್ಷೆ ಶುಕ್ರವಾರ ಯಶಸ್ವಿಯಾಗಿ ನಡೆದಿದೆ. ಇದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮತ್ತು ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್ವೆುಂಟ್ ಎಸ್ಟಾಬ್ಲಿಷ್ಮೆಂಟ್ (ಎಡಿಇ) ಅಭಿವೃದ್ಧಿ ಪಡಿಸಿದೆ. ಒಡಿಶಾದ ಚಂಡಿಪುರದ ಸಮಗ್ರ ಪರೀಕ್ಷಾ ವಲಯ (ಐಟಿಆರ್)ದಲ್ಲಿ ಇದರ ಪರೀಕ್ಷೆ ನಡೆದಿದೆ. ಈ ವಾಹನವನ್ನು ವಾಯು ಮಾರ್ಗದಲ್ಲಿ ಎದುರಾಗಬಹುದಾದ ಕ್ಷಿಪಣಿ ವ್ಯವಸ್ಥೆಗಳನ್ನು ಭೇದಿಸಲು ಬಳಸಬಹುದಾಗಿದೆ. ಹೀಟ್ ಪರೀಕ್ಷೆ ಯಶಸ್ವಿಯಗಿ ನಡೆಸಿರುವ ಡಿಆರ್ಡಿಒವನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಅಭಿನಂದಿಸಿದ್ದಾರೆ. ಹೀಟ್ ಸಂಪೂರ್ಣವಾಗಿ ಸ್ವಯಂಚಾಲಿತವಾಗಿದ್ದು, ಅಂತರಿಕ ನ್ಯಾವಿಗೇಷನ್ ವ್ಯವಸ್ಥೆ (ಐಎನ್ಎಸ್), ಫ್ಲೈಟ್ ಕಂಟ್ರೋಲ್ ಕಂಪ್ಯೂಟರ್ ವ್ಯವಸ್ಥೆಯನ್ನು ಹೊಂದಿದೆ.
ಬ್ರಹ್ಮೋಸ್-2: ರಷ್ಯಾದ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಬ್ರಹ್ಮೋಸ್-2, ಮ್ಯಾಕ್ 7 ಹೈಪರ್ಸಾನಿಕ್ ಅಣ್ವವಸ್ತ್ರ ಕ್ಷಿಪಣಿ ವ್ಯವಸ್ಥೆ ಆಗಿದೆ. ಬ್ರಯ್ಮೋಸ್-2 ಯೋಜನೆ 2017ರಲ್ಲೇ ಮುಗಿಯಬೇಕಿತ್ತು. ಆದರೆ, ಯೋಜನೆ ಮಂದಗತಿ ಕಾರಣ ಇದು 2028ರೊಳಗೆ ಮುಗಿಯಲಿದೆ ಎನ್ನಲಾಗಿದೆ. ಇದರ ಹೊರತಾಗಿ ದೇಶೀಯವಾಗಿಯೂ ಹೈಪರ್ಸಾನಿಕ್ ಅಣ್ವಸ್ತ್ರ ಸಜ್ಜಿತ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುತ್ತಿದೆ. ಇದು ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಜತೆಗೆ ಹೈಪರ್ಸಾನಿಕ್ ತಂತ್ರಜ್ಞಾನದ ಡೆಮಾನ್ಸ್ಟ್ರೇಟರ್ ವೆಹಿಕಲ್ ಕಾರ್ಯಕ್ರಮವೂ ಆಗಿದೆ. ಇದರ ಮ್ಯಾಕ್ 6 ಸ್ಕಾ›ಮ್ೆಟ್ ಅನ್ನು 2019ರ ಜೂನ್ ಮತ್ತು 2020ರ ಸೆಪ್ಟೆಂಬರ್ನಲ್ಲಿ ಪರೀಕ್ಷೆ ನಡೆಸಲಾಗಿದೆ.