'ದೇವರ' ಬಗ್ಗೆ ಕೇಳಿಬಂದ ವದಂತಿಗೆ ಸ್ಪಷ್ಟನೆ ಕೊಟ್ಟ ಚಿತ್ರತಂಡ; ಈ ಭಾಷೆಯಲ್ಲಿ ಬರುವುದಿಲ್ಲ ಜೂ. ಎನ್​ಟಿಆರ್​ ಚಿತ್ರ!

Untitled design (32)
Published on

ಆಂಧ್ರಪ್ರದೇಶ: ಟಾಲಿವುಡ್​ ಚಿತ್ರರಂಗದ ಸ್ಟಾರ್​ ನಟ ಜೂ. ಎನ್​ಟಿಆರ್​ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಚಿತ್ರ 'ದೇವರ' ಬಗ್ಗೆ ಸಿನಿಪ್ರೇಕ್ಷಕರಲ್ಲಿ ದಿನದಿಂದ ದಿನಕ್ಕೆ ಭಾರೀ ಕೌತುಕ ಮೂಡುತ್ತಿದೆ. ಸದ್ಯ ಚಿತ್ರದ ಹೊಸ ಅಪ್ಡೇಟ್​ ಏನಾದರೂ ಬಂದಿದೆಯಾ ಎಂದು ನಿರೀಕ್ಷಿಸುತ್ತಿದ್ದ ಎನ್​ಟಿಆರ್​ ಫ್ಯಾನ್ಸ್​ಗೆ ಇದೀಗ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ ವದಂತಿಗೆ ಕೊಟ್ಟ ಸ್ಪಷ್ಟನೆಯೇ ಹೊಸ ಮಾಹಿತಿಯಾಗಿ ಲಭಿಸಿದೆ.

2024 ರಲ್ಲಿ ತೆರೆ ಕಾಣಲು ಸಜ್ಜಾಗಿರುವ ದೇವರ ಚಿತ್ರದ ಬಗ್ಗೆ ಈ ಹಿಂದಿನಿಂದಲೂ ಸಾಕಷ್ಟು ಕುತೂಹಲಕಾರಿ ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ಎನ್​ಟಿಆರ್​ ಫ್ಯಾನ್ಸ್​ ಚಿತ್ರತಂಡಕ್ಕೆ ಹಲವು ಪ್ರಶ್ನೆಗಳನ್ನು ಸಾಮಾನ್ಯವಾಗಿ ಕಮೆಂಟ್​ ಮೂಲಕ ವ್ಯಕ್ತಪಡಿಸುತ್ತಾರೆ. ಆದ್ರೆ, ಕೇವಲ ಅಗತ್ಯವಿದ್ದ ಪ್ರಶ್ನೆಗಳಿಗೆ ಮಾತ್ರ ಉತ್ತರ ದೊರಯುತ್ತದೆ. ಈ ಪೈಕಿ ಕಳೆದ ಕೆಲ ದಿನಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದ ವದಂತಿಗೆ ಸ್ವತಃ ಚಿತ್ರತಂಡವೇ ಉತ್ತರ ನೀಡುವ ಮೂಲಕ ಸ್ಪಷ್ಟನೆ ನೀಡಿದೆ.

ಶಿವ ಕೊರಟಾಲ ನಿರ್ದೇಶನದ ಪ್ಯಾನ್ ಇಂಡಿಯಾ 'ದೇವರ' ಚಿತ್ರವು ಇಂಗ್ಲೀಷ್​ ವರ್ಷನ್​ನಲ್ಲಿ ಬರಲಿದೆಯೇ ಎಂಬ ಪ್ರಶ್ನೆಯನ್ನು ಕೇಳಿದ ಟ್ವಿಟರ್​ ಖಾತೆಯೊಂದಕ್ಕೆ ಉತ್ತರಿಸಿದ ಚಿತ್ರತಂಡ, ಆಂಗ್ಲ ಭಾಷೆಯಲ್ಲಿ ಸಿನಿಮಾ ಬರುತ್ತಿಲ್ಲ ಎಂಬುದನ್ನು ರಿ-ಟ್ವೀಟ್ ಮಾಡುವ​ ಮುಖೇನ ದೃಢಪಡಿಸಿದೆ. ಚಿತ್ರದಲ್ಲಿ ಜೂ. ಎನ್​ಟಿಆರ್​ಗೆ ನಾಯಕಿಯಾಗಿ ಜಾನ್ವಿ ಕಪೂರ್ ಕಾಣಿಸಿಕೊಂಡಿದ್ದಾರೆ.

ಸದ್ಯ ದೇವರ ಚಿತ್ರೀಕರಣದ ಹಂತದಲ್ಲಿದ್ದು, ಚಿತ್ರತಂಡ ತಿಳಿಸಿರುವಂತೆ ಸಿನಿಮಾ ಏಪ್ರಿಲ್ 5, 2024 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net