

ಆಂಧ್ರಪ್ರದೇಶ: ಟಾಲಿವುಡ್ನ ಸ್ಟಾರ್ ನಟ ಜೂ. ಎನ್ಟಿಆರ್ ನಟನೆಯ ಬಹುನಿರೀಕ್ಷಿತ 'ದೇವರ' ಚಿತ್ರದ ಬಗ್ಗೆ ಹೊಚ್ಚ ಹೊಸ ಅಪ್ಡೇಟ್ಗಳನ್ನು ಪಡೆಯಲು ಸಿನಿಪ್ರಿಯರು ಮತ್ತು ಫ್ಯಾನ್ಸ್ ಬಹಳ ದಿನಗಳಿಂದ ತೀವ್ರ ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಇದೀಗ ಚಿತ್ರತಂಡ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಿರುವ ಬಾಲಿವುಡ್ ನಟ, ಸೈಫ್ ಅಲಿ ಖಾನ್ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಇಂದು ಬಿಡುಗಡೆಗೊಳಿಸಿದೆ.
ಸೈಫ್ ಅಲಿ ಖಾನ್ ಅವರ ಫಸ್ಟ್ ಲುಕ್ ಅನ್ನು ಇಂದು ಅಧಿಕೃತವಾಗಿ ಅನಾವರಣಗೊಳಿಸಿದ ಚಿತ್ರತಂಡ, ಭೈರಾ ಎಂಬ ಪಾತ್ರದಲ್ಲಿ ನಟ ಅಭಿನಯಿಸಿದ್ದಾರೆ ಎಂಬುದರ ಬಗ್ಗೆ ಪೋಸ್ಟರ್ ಮುಖೇನ ಮಾಹಿತಿ ನೀಡಿದೆ. ಅಭಿಮಾನಿಗಳು ಸೈಫ್ನ ಫಸ್ಟ್ ಲುಕ್ ಮೆಚ್ಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣದ ಹೊಸ ಶೆಡ್ಯೂಲ್ ಹೈದರಾಬಾದ್‌ನಲ್ಲಿ ನಡೆಯುತ್ತಿದೆ.
ಟಾಲಿವುಡ್ ಅಂಗಳದಲ್ಲಿ ಭಾರೀ ಭರವಸೆ ಮೂಡಿಸಿರುವ ಸಿನಿಮಾಗಳ ಪೈಕಿ ಜೂ. ಎನ್ಟಿಆರ್ ಅವರ 'ದೇವರ' ಕೂಡ ಪ್ರಮುಖವಾಗಿದೆ. ಶಿವ ಕೊರಟಾಲ ನಿರ್ದೇಶನದ ಈ ಚಿತ್ರದಲ್ಲಿ ಜಾಹ್ನವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಏಪ್ರಿಲ್ 5, 2024 ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಜ್ಜಾಗಿದೆ,(ಏಜೆನ್ಸೀಸ್).