ಇಂದೇ ವಿಚಾರಣೆ ನಡೆಸಲು ಉಪೇಂದ್ರ ಪರ ವಕೀಲ ಮನವಿ; ನಿರಾಕರಿಸಿದ ಹೈಕೋರ್ಟ್!

Untitled design - 2023-08-16T135526.448
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟ ಉಪೇಂದ್ರ ಅವರು ತಮ್ಮ ವಿರುದ್ಧ ದಾಖಲಾಗಿದ್ದ ಎಫ್​​ಐಆರ್​ ಅನ್ನು ರದ್ದುಗೊಳಿಸುವಂತೆ ಕೋರಿ ಸೋಮವಾರ ಹೈಕೋರ್ಟ್​ ಮೆಟ್ಟಿಲೇರಿದ್ದರು. ಉಪೇಂದ್ರ ಪರ ವಕೀಲರು ಇಂದೇ ಈ ಕೇಸ್​​ನ ವಿಚಾರಣೆ ನಡೆಸುವಂತೆ ಮಾಡಿದ ಮನವಿಯನ್ನು ಇದೀಗ ನ್ಯಾಯಾಲಯ ನಿರಾಕರಿಸಿದೆ.

ನ್ಯಾಯಾಲಯಕ್ಕೆ ಇಂದೇ (ಆಗಸ್ಟ್​ 16) ವಿಚಾರಣೆ ನಡೆಸುವಂತೆ ಉಪೇಂದ್ರ ಪರ ವಕೀಲರು ಮನವಿ ಮಾಡಿದರು. ಆದ್ರೆ, ಈ ಮನವಿಯನ್ನು ಆಲಿಸಿದ ಕೋರ್ಟ್,​ ವಿಚಾರಣೆ ನಡೆಸಲು ನಿರಾಕರಿಸಿದೆ. ಇದರ ಬದಲಿಗೆ ಆಗಸ್ಟ್​ 17 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ. ನ್ಯಾ. ಹೇಮಂತ್, ಚಂದನ್ ಗೌಡರ್ ಅವರ ಏಕಸದಸ್ಯ ಪೀಠ ಇದೀಗ ಈ ವಿಚಾರಣೆಯನ್ನು ಮುಂದೂಡಿದೆ.

ಉಪೇಂದ್ರ ವಿರುದ್ಧ ಎಫ್​ಐಆರ್​ ದಾಖಲಾಗಲು ಕಾರಣವೇನು?: ನಟ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಸಿ.ಕೆ. ಅಚ್ಚುಕಟ್ಟು ಪೊಲೀಸ್​ ಠಾಣೆಯಲ್ಲಿ ಎಫ್ಐಆರ್​ ದಾಖಲಿಸಲಾಗಿತ್ತು. ತದನಂತರ ಹಲಸೂರು ಪೊಲೀಸ್​ ಸ್ಟೇಷನ್​ನಲ್ಲಿ ಕೂಡ ಮತ್ತೊಂದು ದೂರು ದಾಖಲಾಗಿತ್ತು.

ಉಪೇಂದ್ರ ವಿರುದ್ಧ ಎಫ್​ಐಆರ್​ ದಾಖಲಿಸುವುದರ ಜತೆಗೆ ವ್ಯಾಪಕ ವಿರೋಧ ಕೂಡ ವ್ಯಕಪಡಿಸಲಾಗಿತ್ತು. ಈ ಬೆನ್ನಲ್ಲೇ ನ್ಯಾಯಾಲಯದ ಮೊರೆ ಹೋದ ನಟ, ಎಫ್​ಐಆರ್​​ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಉಪೇಂದ್ರ ಪರ ವಕೀಲರು ಇಂದು ಕೇಸ್​ನ ವಿಚಾರಣೆ ನಡೆಸುವಂತೆ ಮಾಡಿದ ಮನವಿಗೆ, ಇದೀಗ ನ್ಯಾಯಾಲಯ ನಿರಾಕರಿಸುವ ಮುಖೇನ ವಿಚಾರಣೆಯನ್ನು ಮುಂದೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net