ಜೂ.ಎನ್​ಟಿಆರ್​ ಫ್ಯಾನ್ಸ್​ ಬೇಡಿಕೆಯಂತೆ ಹೊಸ ಅಪ್ಡೇಟ್​ ಕೊಟ್ಟ 'ದೇವರ' ಚಿತ್ರತಂಡ

Untitled design - 2023-10-06T161149.214
Published on

ಆಂಧ್ರಪ್ರದೇಶ: 'ಆರ್​ಆರ್​ಆರ್'​ ಖ್ಯಾತಿಯ ನಟ ಜೂ. ಎನ್​​ಟಿಆರ್​ ಅಭಿನಯದ ಬಹುನಿರೀಕ್ಷಿತ 'ದೇವರ' ಸಿನಿಮಾ ಸದ್ಯ ಭಾರತೀಯ ಚಿತ್ರರಂಗದಲ್ಲಿ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಸಿನಿಮಾ ಕುರಿತು ಹೆಚ್ಚಿನ ಮಾಹಿತಿ ಅಪ್ಡೇಟ್​ ಮಾಡಿ ಎಂದು ಒತ್ತಾಯಿಸಿದ್ದ ಎನ್​ಟಿಆರ್ ಫ್ಯಾನ್ಸ್​ಗೆ ಇದೀಗ ಚಿತ್ರತಂಡ ಹೊಸ ಮಾಹಿತಿ ಪ್ರಕಟಿಸಿದೆ.

'ಜನತಾ ಗ್ಯಾರೇಜ್‌' ಚಿತ್ರ ಸೂಪರ್​ಹಿಟ್​ ಆದ ನಂತರದಲ್ಲಿ ಜೂನಿಯರ್ ಎನ್‌ಟಿಆರ್ ಅವರೊಂದಿಗೆ ನಿರ್ದೇಶಕ ಕೊರಟಾಲ ಶಿವ ಕೈಜೋಡಿಸಿದ್ದು, 'ದೇವರ' ಮೂಲಕ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಮುಂದಾಗಿದ್ದಾರೆ. ಸದ್ಯ ಈ ಚಿತ್ರ ತೆಲುಗಿನ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿದ್ದು, ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

ಶೀಘ್ರವೇ ಚಿತ್ರವನ್ನು ಸಿನಿಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸಲು ಹೆಚ್ಚು ಸಮಯವನ್ನು ವ್ಯರ್ಥ ಮಾಡದೆ ಚಿತ್ರೀಕರಣದಲ್ಲಿ ಬ್ಯುಸಿಯಿರುವ ಚಿತ್ರತಂಡ, ಸದ್ಯ ಹೈದರಾಬಾದ್‌ನಲ್ಲಿ ವಿಶೇಷವಾಗಿ ನಿರ್ಮಿಸಲಾದ ಸೆಟ್‌ನಲ್ಲಿ ವಿಲನ್​ ಪಾತ್ರಧಾರಿಯಾದ ಸೈಫ್ ಅಲಿ ಖಾನ್ ಮತ್ತು ಜೂನಿಯರ್ ಎನ್‌ಟಿಆರ್ ಮುಖಾಮುಖಿಯ ದೃಶ್ಯಗಳನ್ನು ಚಿತ್ರೀಕರಿಸುತ್ತಿದೆ.

'ದೇವರ' ಚಿತ್ರಕ್ಕೆ ನಾಯಕಿಯಾಗಿ ಬಾಲಿವುಡ್​ ನಟಿ ಜಾನ್ವಿ ಕಪೂರ್​ ಕಾಣಿಸಿಕೊಂಡಿದ್ದು, ಅವರ ಪಾತ್ರದ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ ಎಂದು ಹೇಳಲಾಗಿದೆ. ಸಿನಿಮಾಗೆ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ಮ್ಯೂಸಿಕ್​ ಕಂಪೋಸ್​ ಮಾಡಲಿದ್ದು, ಈ ಹಿಂದೆಯೇ ನಿಗದಿಪಡಿಸಿರುವಂತೆ ಚಿತ್ರ ಏಪ್ರಿಲ್ 5, 2024 ರಂದು ಬಿಡುಗಡೆಯಾಗಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net