More

    VIDEO| ಸಾರ್ವಜನಿಕವಾಗಿ ಪಿಸ್ತೂಲ್​ ಹಿಡಿದು ತಿರುಗಾಟ; ಪ್ರಶ್ನಿಸಿದ ಪತ್ರಕರ್ತರಿಗೆ ಅವಾಜ್​ ಹಾಕಿ ದರ್ಪ ಮೆರೆದ ಶಾಸಕ

    ಪಟ್ನಾ: ಆಘಾತಕಾರಿ ಘಟನೆಯೊಂದರಲ್ಲಿ ಶಾಸಕರೊಬ್ಬರು ಸಾರ್ವಜನಿಕ ಪ್ರದೇಶದಲ್ಲಿ ತಮ್ಮ ಬಳಿ ಇರುವ ಪಿಸ್ತೂಲ್​ಅನ್ನು ಝಳಪಿಸುತ್ತಾ ಒಡಾಡಿರುವ ಘಟನೆ ಬಿಹಾರದ ಭಾಗಲ್‌ಪುರದ ಜವಾಹರ್ ಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದೆ.

    ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಪ್ರಶ್ನಿಸಿದ ಪತ್ರಕರ್ತರಿಗೆ ಶಾಸಕ ಅವಾಜ್​ ಹಾಕಿ ದರ್ಪ ಮೆರೆದಿರುವುದು ವ್ಯಾಪಕ ಖಂಡನೆಗೆ ಗುರಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಕಳವಳವನ್ನು ಉಂಟುಮಾಡಿದೆ.

    ವೈರಲ್​ ಆಗಿರುವ ವಿಡಿಯೋದಲ್ಲಿ ಶಾಸಕ ಗೋಪಾಲ್ ಮಂಡಲ್ ತಾವು ಸಾರ್ವಜನಿಕವಾಗಿ ಪಿಸ್ತೂಲ್ ಹಿಡಿದು ಒಡಾಡಿರುವ ಕುರಿತು ಪ್ರಶ್ನಿಸಿದಾಗ ತಾವು ಈಗಲೂ ಗನ್​ ಹಿಡಿದುಕೊಂಡಿದ್ದು, ಇದನ್ನು ಪ್ರಶ್ನಿಸಲು ಯಾರಿಗೂ ಅಧಿಕಾರವಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಮಹದೇವ ಬೆಟ್ಟಿಂಗ್ ಆ್ಯಪ್ ಪ್ರಕರಣ; ED ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿದ ರಣಬೀರ್

    ತಮ್ಮ ಬಳಿ ಗನ್​ ಹಿಡಿದುಕೊಂಡಿರುವುದನ್ನು ಸಮರ್ಥಿಸಿಕೊಂಡ ಶಾಸಕ ಗೋಪಾಲ್ ಬೆಲ್ಟ್​ ಸರಿಯಾಗಿ ಧರಿಸದ ಕಾರಣ ನಾನು ಪಿಸ್ತೂಲ್​ಅನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಾಡಬೇಕಾಯಿತು. ಇದನ್ನು ಪ್ರಶ್ನಿಸಲು ನೀವು ಯಾರು ಎಂದು ಕೇಳುತ್ತಾ ಮಾಧ್ಯಮದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದನ್ನು ವೈರಲ್​ ವಿಡಿಯೋದಲ್ಲಿ ನೋಡಬಹುದಾಗಿದೆ.

    See also  ಮಗ ಡ್ರಗ್ಸ್‌ ಕೇಸ್‌ನಲ್ಲಿ ಅರೆಸ್ಟ್‌ ಆಗ್ತದ್ದಂತೆಯೇ ಶತಕೋಟಿ ಆಸ್ತಿ ದಾನ- ಇಡೀ ಚಿತ್ರರಂಗಕ್ಕೆ ಶಾಕ್‌ ತಂದ ನಟ!

    ಆ ನಂತರ ತಮ್ಮ ಹೇಳಿಕೆಗೆ ಸಮಾಜಾಯಿಷಿ ನೀಡಿದ ಶಾಸಕ ಗೋಪಾಲ್ ನನ್ನ ಪ್ರಾಣ ಬೆದರಿಕೆ ಇರುವುದರಿಂದ ರಕ್ಷಣೆಗಾಗಿ ನಾನು ಸದಾ ನನ್ನ ಜೊತೆ ಗನ್​ ಒಂದನ್ನು ಇಟ್ಟುಕೊಂಡಿರುತ್ತೇನೆ. ಒಂದು ವೇಳೆ ನನ್ನ ಮೇಲೆ ಯಾರೇ ದಾಳಿ ಮಾಡಲು ಮುಂದಾದರೂ ಅವರ ಮೇಲೆ ಗುಂಡು ಹಾರಿಸಲು ನಾನು ಹಿಂಜರಿಯುವುದಿಲ್ಲ ಎಂದು ಶಾಸಕ ಗೋಪಾಲ್​ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts