More

    ಏಷ್ಯನ್​ ಗೇಮ್ಸ್| ಬಾಂಗ್ಲಾದೇಶವನ್ನು ಮಣಿಸಿ ಫೈನಲ್​​ಗೆ ಲಗ್ಗೆ ಇಟ್ಟ ಭಾರತ ಕ್ರಿಕೆಟ್ ತಂಡ

    ನವದೆಹಲಿ:  ಚೀನಾದ ಹ್ಯಾಂಗ್​​​​​​​​​ಝೌನಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ ಪುರುಷರ ಟಿ-20 ಕ್ರಿಕೆಟ್​ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ 9 ವಿಕೆಟ್​ಗಳ ಜಯ ಗಳಿಸುವ ಮೂಲಕ ಫೈನಲ್​ಗೆ ಲಗ್ಗೆ ಇಟ್ಟಿದೆ.

    ಹ್ಯಾಂಗ್​ಝೌನ ಪಿಂಗ್​ಫೆಂಗ್ ಕ್ಯಾಂಪಸ್ ಕ್ರಿಕೆಟ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​​ ಮಾಡಿದ ಬಾಂಗ್ಲಾದೇಶ ತಂಡವು ಭಾರತದ ಬೌಲಿಂಗ್ ದಾಳಿಗೆ ನಲುಗಿ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 96 ರನ್​ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಸಾಯಿ ಕಿಶೋರ್ (4-0-12-3), ವಾಷಿಂಗ್ಟನ್​ ಸುಂದರ್ (4-0-15-2), ರವಿ ಬಿಷ್ಣೋಯಿ (4-0-26-1), ಹರ್ಷ್​​ದೀಪ್ ಸಿಂಗ್ (3-0-10-1), ತಿಲಕ್ ವರ್ಮಾ (2-0-5-1), ಶಹಬಾಜ್ ಅಹಮದ್ (2-0-13-1), ಶಿವಂ ದುಬೆ (1-0-9-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.

    ಇದನ್ನೂ ಓದಿ: ನಾಯಿ ಮರಿಗೆ “ನೂರಿ” ಎಂದು ಹೆಸರಿಟ್ಟ ರಾಹುಲ್ ಗಾಂಧಿ; ಮುಸ್ಲಿಂ ಮಹಿಳೆಯರಿಗೆ ಮಾಡಿದ ಅವಮಾನ ಎಂದ ಎಐಎಂಐಎಂ

    ಸುಲಭ ಗುರಿ ಬೆನ್ನತ್ತಿದ್ದ ಭಾರತ ತಂಡವು ಆರಂಭಿಕ ವೈಫಲ್ಯದ ಹೊರತಾಗಿಯೂ ನಾಯಕ ಋತುರಾಜ್ ಗಾಯಕ್ವಾಡ್ (40 ರನ್, 26 ಎಸೆತ, 4 ಬೌಂಡರಿ, 3 ಸಿಕ್ಸರ್), ತಿಲಕ್ ವರ್ಮಾ (55 ರನ್, 26 ಎಸೆತ, 2 ಬೌಂಡರಿ, 6 ಸಿಕ್ಸರ್​) ಸ್ಪೋಟಕ ಆಟದ ಫಲವಾಗಿ 9.2 ಓವರ್​ಗಳಲ್ಲಿ 97 ರನ್​ಗಳಿಸಿ 9 ವಿಕೆಟ್​ ಗಳ ಜಯ ಗಳಿಸುವ ಮೂಳಖ ಫೈನಲ್​ಗೆ ಲಗ್ಗೆ ಇಟ್ಟಿತ್ತು.

    ಶನಿವಾರ ಚಿನ್ನದ ಪದಕದ ಸಲುವಾಗಿ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಭಾರತ ತಂಡಕ್ಕೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನ ತಂಡದ ಸವಾಲು ಎದುರಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts