ಪ್ರಸಕ್ತ ರ್ಯಾಂಕಿಂಗ್ನಲ್ಲಿ 2022ರ ಮೊದಲ ತ್ರೖೆಮಾಸಿಕದಲ್ಲಿ ಭಾರತ ತನ್ನ ಸ್ಥಾನವನ್ನು ಸೆಂಟ್ರಲ್ ಆಫ್ರಿಕಾದ ಸಾವೊ ಟೋಮ್ ಮತ್ತು ಪ್ರಿನ್ಸಿಪ್ ಜತೆಗೆ ಹಂಚಿಕೊಂಡಿದೆ.. ಸೂಚ್ಯಂಕದಲ್ಲಿ ಜಪಾನ್ ಮತ್ತು ಸಿಂಗಾಪುರ ಪಾಸ್ಪೋರ್ಟ್ಗಗಳು ಮೊದಲ ಸ್ಥಾನಗಳಲ್ಲಿವೆ. ಜರ್ಮನಿ ಮತ್ತು ದಕ್ಷಿಣ ಕೊರಿಯಾಗಳು ಎರಡನೇ ಸ್ಥಾನವನ್ನು ಜಂಟಿಯಾಗಿ ಹಂಚಿಕೊಂಡಿವೆ. ಅಫ್ಘಾನಿಸ್ತಾನ ಸೂಚ್ಯಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅಮೆರಿಕ ಮತ್ತು ಬ್ರಿಟನ್ ಪಾಸ್ಪೋರ್ಟ್ಗಳು 2020ರಲ್ಲಿ 8ನೇ ಸ್ಥಾನದಲ್ಲಿದ್ದವು ಕಳೆದ ವರ್ಷ ಆರನೇ ಸ್ಥಾನಕ್ಕೆ ಬಂದಿವೆ. ಫಿನ್ಲೆಂಡ್, ಇಟಲಿ, ಲಕ್ಸಂಬರ್ಗ್ ಮತ್ತು ಸ್ಪೇನ್ ಮೂರನೇ ಸ್ಥಾನದಲ್ಲಿದ್ದು 189 ಸ್ಕೋರ್ ಹೊಂದಿವೆ. ಹೆನ್ಲೆ ಪಾಸ್ ಪೋರ್ಟ್ ಸೂಚ್ಯಂಕದಲ್ಲಿ ಭಾರತದ ಪಾಸ್ಪೋರ್ಟ್ ಏಳು ಅಂಕಿ ಮೇಲೇರಿದ್ದು, 83ನೇ ಸ್ಥಾನಕ್ಕೆ ತಲುಪಿದೆ. ಕಳೆದ ವರ್ಷ ಇದು 90ನೇ ಸ್ಥಾನದಲ್ಲಿತ್ತು. ಜರ್ಮನಿ, ದಕ್ಷಿಣ ಕೊರಿಯಾ ಪಾಸ್ಪೋರ್ಟ್ ಮೂಲಕ ಜಗತ್ತಿನ 190 ರಾಷ್ಟ್ರಗಳಿಗೆ ವೀಸಾ ರಹಿತವಾಗಿ ಪ್ರವೇಶ ಪಡೆಯಬಹುದು. .https://www.vijayavani.net/covid-cases-in-state-crossed-21-thousands-today/.https://www.vijayavani.net/man-lost-his-life-for-keeping-relationship-with-married-woman/