ಪೇದೆಯಾದರು ಅಬಕಾರಿ ರಕ್ಷಕರು; ನಡೆಯಿತು ಮರು ನಾಮಕರಣ

excise
Published on

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ರಕ್ಷಕರು ಈಗ ಪೇದೆಯಾಗಿದ್ದಾರೆ. ಅರ್ಥಾತ್​ ಅವರ ಪದನಾಮವನ್ನು ಮರು ನಾಮಕಾರಣ ಮಾಡಲಾಗಿದೆ. ಆತ್ಮವಿಶ್ವಾಸ ಹಾಗೂ ದಕ್ಷತೆ ಹೆಚ್ಚಿಸುವ ಸಲುವಾಗಿ ಅಬಕಾರಿ ರಕ್ಷಕರನ್ನು ಅಬಕಾರಿ ಪೇದೆ ಹಾಗೂ ಅಬಕಾರಿ ಹಿರಿಯ ರಕ್ಷಕರನ್ನು ಅಬಕಾರಿ ಮುಖ್ಯ ಪೇದೆ ಎಂದು ಮರು ನಾಮಕಾರಣ ಮಾಡಿ ಮಂಗಳವಾರ ಇಲಾಖೆ ಆದೇಶ ಹೊರಡಿಸಿದೆ.

ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲಿ ಅಬಕಾರಿ ರಕ್ಷಕರನ್ನು ಅಬಕಾರಿ ಕಾನ್​ಸ್ಟೆಬಲ್ ಎಂದು ಕರೆಯಲಾಗುತ್ತಿದೆ. ಪೊಲೀಸ್ ಇಲಾಖೆ ಮಾದರಿಯಲ್ಲಿ ಕಾರ್ಯನಿರ್ವಹಣೆ ಸ್ವರೂಪ ಕೂಡ ಒಂದೇ ರೀತಿ ಇದೆ. ಅಲ್ಲದೆ, ಪೊಲೀಸ್ ಇಲಾಖೆಯಲ್ಲಿ ಬಳಸಲಾಗುತ್ತಿರುವ ಪದನಾಮಗಳ ಮಾದರಿಯಲ್ಲಿ ಅಬಕಾರಿ ರಕ್ಷಕರು ಹಾಗೂ ಅಬಕಾರಿ ಹಿರಿಯ ರಕ್ಷಕರ ಪದನಾಮವನ್ನು ಮರು ನಾಮಕಾರಣ ಮಾಡುವಂತೆ ರಕ್ಷಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಅಬಕಾರಿ ರಕ್ಷಕರ ಪದನಾಮ ಬದಲಿಸಲು ಸಿಬ್ಬಂದಿ ಈ ಹಿಂದಿನ ಸರ್ಕಾರಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ನಾನು ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡಿದ್ದರಿಂದ ಸಿಬ್ಬಂದಿಯ ಕಷ್ಟಗಳು ಚೆನ್ನಾಗಿ ಗೊತ್ತಿದೆ. ಹಾಗಾಗಿ, ಸಿಬ್ಬಂದಿ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿ ಪದನಾಮವನ್ನು ಮರುನಾಮಕಾರಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಿಬ್ಬಂದಿಯ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಸಚಿವ ಎಚ್.ನಾಗೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net