ದೇಶ ನಿರ್ಮಿಸುವಲ್ಲಿ ಕಾರ್ಮಿಕರ ಪಾತ್ರ ಹಿರಿದು

1 ಎಸ್ಕೆಪಿ 1 ಅರಿವು ಕಾರ್ಯಕ್ರಮ
ಶಿಕಾರಿಪುರದಲ್ಲಿ ಕಾರ್ಮಿಕರಿಗೆ ದುಶ್ಚಟಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಯಶವಂತ್ ಕುಮಾರ್ ಮಾತನಾಡಿದರು. ಅವಿನಾಶ್ ಘಾಳಿ, ವೇಣುಗೋಪಾಲ್, ಕ್ಕೀರಪ್ಪ, ಸಂತೋಷ್ ಇತರರಿದ್ದರು
Published on

ಶಿಕಾರಿಪುರ: ರಾಷ್ಟ್ರ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಹಿರಿದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಯಶವಂತ್‌ಕುಮಾರ್ ಹೇಳಿದರು.
ತಾಪಂ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ,ಬಾಲಕಾರ್ಮಿಕ ಇಲಾಖೆ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿ ಮಂಗಳವಾರ ಆಯೋಜಿಸಿದ್ದ ಕಾರ್ಮಿಕರಿಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಹುತೇಕ ಕಾರ್ಮಿಕರು ದುಶ್ಚಟಗಳ ದಾಸರಾಗಿರುವುದು ನಿಜ. ಇದರಿಂದ ಅವರ ದುಡಿಮೆಯ ಬಹುಪಾಲು ವ್ಯಸನಗಳಿಗೆ ಖರ್ಚಾಗುತ್ತದೆ. ಹಾಗಾಗಿ ಅವರ ಕುಟುಂಬ ಬಡತನ ರೇಖೆಯಿಂದ ಮೇಲೆ ಬರುವುದು ದುಸ್ತರವಾಗುತ್ತಿದೆ ಎಂದರು.
ಮದ್ಯಪಾನದಿಂದ ಆರೋಗ್ಯ, ಕುಟುಂಬದ ನೆಮ್ಮದಿ ಹಾಳಾಗುತ್ತದೆ. ಕಾರ್ಮಿಕರು ದುಶ್ಚಟಗಳಿಂದ ದೂರವಿರಬೇಕು. ಮಕ್ಕಳನ್ನು ಸುಶಿಕ್ಷಿತರನ್ನಾಗಿಸಿ ಉಜ್ವಲ ಭವಿಷ್ಯ ರೂಪಿಸುವ ಜವಾಬ್ದಾರಿ ಹೊರಬೇಕು. ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಅವಿನಾಶ್ ಘಾಳಿ, ಶಿವಮೊಗ್ಗ ಉಪವಿಭಾಗ ಕಾರ್ಮಿಕ ಅಧಿಕಾರಿ ವೇಣುಗೋಪಾಲ್, ಕಾರ್ಮಿಕ ನಿರೀಕ್ಷಕರಾದ ಕ್ಕೀರಪ್ಪ, ವಕೀಲರ ಸಂಘದ ಅಧ್ಯಕ್ಷ ಸಂತೋಷ್, ಕುಮಾರ್, ಕಾರ್ಮಿಕ ಇಲಾಖೆ ಸಿಬ್ಬಂದಿ ಶಶಿಕುಮಾರ್, ಹನುಮಂತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net