ನಾಪತ್ತೆಯಾಗಿದ್ದ ದಂತ ವೈದ್ಯ ಡಾ. ಕೃಷ್ಣಮೂರ್ತಿ ಕುಂದಾಪುರದಲ್ಲಿ ಶವವಾಗಿ ಪತ್ತೆ!

krishnamurthy
Published on

ಉಡುಪಿ: ನ.8ರಂದು ನಾಪತ್ತೆಯಾಗಿದ್ದ ದಂತ ವೈದ್ಯ ಡಾ. ಕೃಷ್ಣಮೂರ್ತಿ ಅವರು ಕುಂದಾಪುರದ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ.

ಕೇರಳದ ಕಾಸರಗೋಡಿ ಜಿಲ್ಲೆ ಬದಿಯಡ್ಕ ನಿವಾಸಿ ಡಾ.ಕೃಷ್ಣಮೂರ್ತಿ ಮೃತರು. ಯುವತಿಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆಂದು ವೈದ್ಯರ ಮೇಲೆ ದೂರು ದಾಖಲಾಗಿತ್ತು. ಜಮೀನಿನ ತಕರಾರಿನ ಹಿನ್ನೆಲೆಯಲ್ಲಿ ಕಿರುಕುಳ ಅನುಭವಿಸಿದ್ದರೂ ಎಂಬ ಮಾಹಿತಿಯೂ ಲಭ್ಯವಾಗಿದೆ. ಬದಿಯಡ್ಕದಲ್ಲೇ ಬೈಕ್ ಮತ್ತು ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದರು. ನ.8ರಂದು ಕೃಷ್ಣಮೂರ್ತಿ ನಾಪತ್ತೆಯಾಗಿದ್ದಾರೆ ಎಂದು ಬದಿಯಡ್ಕದಲ್ಲಿ ದೂರು ದಾಖಲಾಗಿತ್ತು.

ಕುಂದಾಪುರದ ಹಟ್ಟಿಯಂಗಡಿ ಗ್ರಾಮದ ಅಜ್ಜಿ ಮನೆ ಸಮೀಪದ ರೈಲ್ವೆ ಹಳಿ ಮೇಲೆ ನಿನ್ನೆ(ಗುರುವಾರ) ಡಾ.ಕೃಷ್ಣಮೂರ್ತಿ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಪ್ರಕರಣದಂತೆ ಕಂಡು ಬಂದಿದೆ. ತನಿಖೆ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net