ಅಸ್ಸಾಂ, ಪಶ್ಚಿಮ ಬಂಗಾಳದ ಜನಸಂಖ್ಯಾ ಬದಲಾವಣೆ 'ಟೈಂ ಬಾಂಬ್​' ಇದ್ದಂತೆ; ಆರ್​.ಎನ್​ ರವಿ| time-bomb

r n ravi
Published on

time-bomb; ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಜನಸಂಖ್ಯಾ ಬದಲಾವಣೆಗಳ ಬಗ್ಗೆ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಪ್ರವೃತ್ತಿಯನ್ನು "ಟಿಕ್ಕಿಂಗ್ ಟೈಮ್ ಬಾಂಬ್" ಎಂದು ಬಣ್ಣಿಸಿದ್ದಾರೆ.

ಕಳೆದ ಮೂರು ನಾಲ್ಕು ದಶಕಗಳಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಜನಸಂಖ್ಯಾ ಬದಲಾವಣೆಗಳನ್ನು ನಿರ್ದಿಷ್ಟವಾಗಿ ಗಮನಸೆಳೆದರು. ಮುಂದಿನ 50 ವರ್ಷಗಳಲ್ಲಿ, ರಾಷ್ಟ್ರ ವಿಭಜನೆಯ ಕೆಲಸಗಳು ಈ ಪ್ರದೇಶಗಳಲ್ಲಿ ನಡೆಯುವುದಿಲ್ಲ ಎಂದು ಯಾರಾದರೂ ಊಹಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

2025–2026ರ ಶೈಕ್ಷಣಿಕ ವರ್ಷದ ಆರಂಭದಲ್ಲಿ ಗಾಂಧಿನಗರದಲ್ಲಿನ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದಲ್ಲಿ (RRU) ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಆಂತರಿಕ ಬೆದರಿಕೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತವು ಐತಿಹಾಸಿಕವಾಗಿ ಬಾಹ್ಯ ಆಕ್ರಮಣಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದರೂ, ಆಂತರಿಕ ಸ್ಫೋಟಗಳು ದೂರಗಾಮಿ ಪರಿಣಾಮಗಳನ್ನು ಬೀರಿವೆ ಎಂದು ಎತ್ತಿ ತೋರಿಸಿದರು. 1947 ರ ವಿಭಜನೆಯನ್ನು ಉಲ್ಲೇಖಿಸಿದ ಅವರು, 1947 ರಲ್ಲಿ ಆಂತರಿಕ ಸ್ಫೋಟದಿಂದಾಗಿ ಭಾರತ ವಿಭಜನೆಯಾಯಿತು. ಒಂದು ಸಿದ್ಧಾಂತವನ್ನು ಅನುಸರಿಸುವ ಜನರು ಇತರರೊಂದಿಗೆ ಬದುಕಲು ಬಯಸುವುದಿಲ್ಲ, ಈ ಸಿದ್ಧಾಂತವು ನಮ್ಮ ರಾಷ್ಟ್ರವನ್ನು ಮುರಿಯಿತು ಎಂದು ಹೇಳಿದರು.

(ಏಜೆನ್ಸೀಸ್)

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಲವಾರು ಸಂದರ್ಭಗಳಲ್ಲಿ ಎಲ್ಲಾ ಭಾರತೀಯ ಭಾಷೆಗಳು ನಮ್ಮ ರಾಷ್ಟ್ರೀಯ ಭಾಷೆಗಳು ಮತ್ತು ನಾವು ಪ್ರತಿಯೊಂದನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ರಾಜ್ಯದಲ್ಲಿ ಕನಿಷ್ಠ ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ಭಾಷೆಗಳಲ್ಲಿ ನೀಡಬೇಕು ಎಂದು ಹೇಳಿದ್ದಾರೆ ಎಂದು ರವಿ ಹೇಳಿದರು,.

ಕೆಲವು ಪ್ರದೇಶಗಳಲ್ಲಿ ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಅದರ ಭವಿಷ್ಯ ಹೇಗಿರುತ್ತದೆ ಎಂಬುದರ ಕುರಿತು ನಾವು ಅಧ್ಯಯನ ನಡೆಸಬೇಕು. ಈ ವಿಷಯವು ಒಂದು ಟೈಮ್ ಬಾಂಬ್‌ನಂತಿದೆ. ಭವಿಷ್ಯದಲ್ಲಿ ನಾವು ಈ ಸಮಸ್ಯೆಯನ್ನು ಹೇಗೆ ಎದುರಿಸುತ್ತೇವೆ ಎಂಬುದರ ಕುರಿತು ಯೋಚಿಸಬೇಕು ಮತ್ತು ಇಂದಿನಿಂದಲೇ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಾರಂಭಿಸಬೇಕು ಎಂದು ಒತ್ತಿ ಹೇಳಿದರು. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಭಾಷೆಯ ಕುರಿತು ನಡೆಯುತ್ತಿರುವ ಗಲಾಟೆಗಳ ಮಧ್ಯೆ, ಭಾಷೆಯ ಹೆಸರಿನಲ್ಲಿ ಕಹಿ ಭಾವನೆ ಹೊಂದಿರುವುದು ಭಾರತದ ಸ್ವಭಾವವಲ್ಲ ಎಂದ ಅವರು, ಸ್ವಾತಂತ್ರ್ಯದ ನಂತರ, ನಾವು ಪರಸ್ಪರ ಹೋರಾಡಲು ಪ್ರಾರಂಭಿಸಿದೆವು. ಅದಕ್ಕೆ ಭಾಷೆಯೂ ಒಂದು ಕಾರಣವಾಗಿತ್ತು ಎಂದು ರಾಜ್ಯಪಾಲರು ಸಮರ್ಥಿಸಿಕೊಂಡರು. ಎಲ್ಲಾ ಭಾರತೀಯ ಭಾಷೆಗಳು ಒಂದೇ ಲೀಗ್‌ನಲ್ಲಿವೆ ಮತ್ತು ಸಮಾನ ಗೌರವಕ್ಕೆ ಅರ್ಹವಾಗಿವೆ ಎಂದು ಕೇಂದ್ರ ನಾಯಕತ್ವವು ಪದೇ ಪದೇ ಸ್ಪಷ್ಟಪಡಿಸಿದೆ ಎಂದು ಅವರು ಗಮನಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net