ನಾಸಾ-ಇಸ್ರೋ ಸಹಯೋಗದಲ್ಲಿ 'ನಿಸಾರ್' ಭೂ ವೀಕ್ಷಣಾ ಉಪಗ್ರಹ ಯಶಸ್ವಿ ಉಡಾವಣೆ| NISAR MISSION

isro
Published on

Nisar Mission; ನಾಸಾ ಹಾಗೂ ಇಸ್ರೋ ಇಸ್ರೋ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR) ಉಪಗ್ರಹವನ್ನು ಇಂದು (ಜು.30) ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಇಸ್ರೋದ GSLV-F16 ರಾಕೆಟ್ ಇಂದು ಸಂಜೆ 5.40 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಿದೆ. ಇದು ಡ್ಯುಯಲ್ ಫ್ರೀಕ್ವೆನ್ಸಿ ರಾಡಾರ್ (L-ಬ್ಯಾಂಡ್ ಮತ್ತು S-ಬ್ಯಾಂಡ್) ಬಳಸುವ ವಿಶ್ವದ ಮೊದಲ ಉಪಗ್ರಹವಾಗಿದೆ. ಇದು ಭೂಮಿಯ ಮೇಲ್ಮೈಯನ್ನು ಎರಡು ವಿಭಿನ್ನ ರೀತಿಯ ರೇಡಿಯೋ ತರಂಗಗಳೊಂದಿಗೆ ಸ್ಕ್ಯಾನ್ ಮಾಡುವ ಮೂಲಕ ಅತ್ಯಂತ ಸ್ಪಷ್ಟವಾದ ಚಿತ್ರಗಳನ್ನು ನೀಡಲಿದೆ.

ನಿಸಾರ್ ಉಪಗ್ರಹವನ್ನು 1.5 ಬಿಲಿಯನ್ ಡಾಲರ್ ವೆಚ್ಚದಲ್ಲಿ ತಯಾರಿಸಲಾಗಿದೆ. ರಾಡಾರ್ ಇಮೇಜಿಂಗ್ ಸೆಟಿಲೈಟ್ ಇದಾಗಿದ್ದು, ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ವಿಕೋಪ ಸಂದರ್ಭಗಳನ್ನು ಗಮನಿಸಲು ಈ ಉಪಗ್ರಹ ಪ್ರಯೋಜನಕಾರಿಯಾಗಲಿದೆ. ನಿಸಾರ್ ಉಪಗ್ರಹ ಉಡಾವಣೆಯು ಭಾರತಕ್ಕೆ ಮಾತ್ರವಲ್ಲ ವಿಶ್ವಕ್ಕೂ ಒಂದು ಮೈಲಿಗಲ್ಲಾಗಲಿದೆ. ಜಾಗತಿಕ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರಕ್ಕೆ ಇದು ವಿಶೇಷ ಕ್ಷಣಗಳಲ್ಲಿ ಒಂದಾಗಿದೆ. ನಾಸಾ ಮತ್ತು ಇಸ್ರೋ ಜಂಟಿಯಾಗಿ ಅಭಿವೃದ್ಧಪಡಿಸಿರುವ ಸಿಂಥೆಟಿಕ್ ಅಪರ್ಚರ್ ರಾಡಾರ್ ಇದಾಗಿದ್ದು, ಇದಕ್ಕೆ NISAR (NASA ISRO Synthetic Aperture Radar) ಎಂದು ಹಸೆರನ್ನಿಡಲಾಗಿದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net