ತಿರುಪತಿ ತಿಮ್ಮಪ್ಪ ದೇಗುಲದ ಲಡ್ಡೂಗಳಿಗೆ ತಗ್ಗದ ಬೇಡಿಕೆ! demand for tirupati laddoos

Tirupati Laddu Row
ತಿರುಪತಿ ಲಡ್ಡು
Published on

ತಿರುಪತಿ: ಜಗನ್​ ಆಂಧ್ರದ ಮುಖ್ಯಮಂತ್ರಿಯಾಗಿದ್ದಾಗ ಟಿಟಿಡಿ ಅಗ್ಗದ ಬೆಲೆಯ ತುಪ್ಪ ಕೊಳ್ಳುವಂತೆ ಮಾಡಿದ್ದು, ಅದರಲ್ಲಿ ದನ, ಹಂದಿಕೊಬ್ಬು ಮೀನಿನೆಣ್ಣೆಯನ್ನು ಸೇರಿಸಿ ಸರಬರಾಜು ಮಾಡಲಾಗಿತ್ತು ಎಂಬುದು ಬಹಿರಂಗವಾದ ಮೇಲೆ ಸಹ ಲಡ್ಡೂಗಳಿಗೆ ಡಿಮ್ಯಾಂಡ್​ ಕಡಿಮೆಯಾಗಿಲ್ಲ.

ಲಡ್ಡು ವಿವಾದ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಲಡ್ಡು ಮಾರಾಟದಲ್ಲಿ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದ್ದರೂ, ಲಡ್ಡು ಮಾರಾಟ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಲಬೆರಕೆ ತುಪ್ಪದ ವಿವಾದ ಲಡ್ಡೂ ಮಾರಾಟದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಲಡ್ಡು ತಯಾರಿಕೆ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದ್ದರೂ, ಚಂದ್ರಬಾಬು ನೇತೃತ್ವದ ಸರ್ಕಾರ ಬಂದ ನಂತರ ಕೆಎಂಎಫ್​ನಿಂದ ನಂದಿನಿ ತುಪ್ಪ ತರಿಸಿ ಲಡ್ಡು ತಯಾರಿಸುತ್ತಿರುವುದರಿಂದ ಭಕ್ತರು ಲಡ್ಡೂಗಳನ್ನು ಅತ್ಯಂತ ಪವಿತ್ರ ಪ್ರಸಾದವೆಂದು ಪರಿಗಣಿಸುತ್ತಾರೆ. ಹೀಗಾಗಿ ಯಾವುದೇ ಅಪಪ್ರಚಾರಗಳನ್ನು ಭಕ್ತರು ಕಿವಿಗೆ ಹಾಕಕೊಳ್ಳದೆ ಪ್ರಸಾದ ಖರೀದಿಸುತ್ತಿದ್ದಾರೆ.

ಮೂರು ಲಕ್ಷಕ್ಕೂ ಅಧಿಕ ಲಡ್ಡು ಮಾರಾಟ: 

ಸೆಪ್ಟೆಂಬರ್ 19 ರಂದು 3.59 ಲಕ್ಷ, ಸೆ.20 ರಂದು 3.16 ಲಕ್ಷ ಮತ್ತು ಸೆ. 21 ರಂದು 3.66 ಲಕ್ಷ ಲಡ್ಡುಗಳನ್ನು ಭಕ್ತರು ಖರೀದಿಸಿದ್ದಾರೆ.

ಈ ನಡುವೆ ಸೆ.23(ಸೋಮವಾರ) ವೆಂಕಟೇಶ್ವರ ದೇವಸ್ಥಾನದಲ್ಲಿ ಪಾವಿತ್ರ್ಯಕ್ಕೆ ಧಕ್ಕೆಯುಂಟಾಗಿರುವುದರಿಂದ ಮಹಾಶಾಂತಿ ಯಾಗವನ್ನು ಆಯೋಜಿಸಲು ಟಿಟಿಡಿ ಅಧಿಕಾರಿಗಳು ತ್ವರಿತ ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ದೇವಸ್ಥಾನದ ಯಾಗ ಹಾಲ್‌ನಲ್ಲಿ ಅರ್ಚಕರು ಹೋಮ ನೆರವೇರಿಸಲಿದ್ದಾರೆ. ಅಂದು ರೋಹಿಣಿ ನಕ್ಷತ್ರ ಬಲವಾಗಿರುವುದರಿಂದ ಸೋಮವಾರ ಬೆಳಗ್ಗೆ 6ರಿಂದ 10ರವರೆಗೆ ಮಹಾ ಶಾಂತಿ ಹೋಮ ನಡೆಯಲಿದೆ. ಮೊದಲು ಮಹಾ ಶಾಂತಿ ಯಾಗ ಮತ್ತು ವಾಸ್ತು ಹೋಮವನ್ನು ನಡೆಸಲಾಗುತ್ತದೆ. ಅಂತಿಮವಾಗಿ ಪಂಚಗವ್ಯದೊಂದಿಗೆ ಸಂಪ್ರೋಕ್ಷಣೆ ನಡೆಯಲಿದೆ. ಆಗಮ ಪಂಡಿತರು ಭಗವಂತನಿಗೆ ಮಾಡುವ ಪುಣ್ಯಕಾರ್ಯಗಳಿಗೆ ಅಡ್ಡಿಯಾಗದಂತೆ ಯಾಗವನ್ನು ಒಂದು ದಿನ ಮಾತ್ರ ನಡೆಸಬೇಕೆಂದು ನಿರ್ಧರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net