ದೆಹಲಿ ಫಲಿತಾಂಶ ಅಭಿವೃದ್ಧಿಗೆ ಹೊಸ ದಿಕ್ಕು

bjp (5)
ಭದ್ರಾವತಿಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಜಿ.ಧರ್ಮಪ್ರಸಾದ್, ತೀರ್ಥಯ್ಯ, ಚನ್ನೇಶ್, ಅನ್ನಪೂರ್ಣಾ, ಲತಾ ಇತರರಿದ್ದರು.
Published on

ಭದ್ರಾವತಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ ಕಾರ್ಯಕರ್ತರು ನಗರದ ಮಾಧವಾಚಾರ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನಗರದಲ್ಲಿ ಶನಿವಾರ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಯ ದಿಕ್ಕನ್ನು ದೆಹಲಿ ಚುನಾವಣೆ ಲಿತಾಂಶ ಬದಲಿಸಲಿದೆ. 27 ವರ್ಷಗಳ ಬಳಿಕ ಭಾರತದ ಹೃದಯ ಭಾಗದಲ್ಲಿ ಅರಳಿದ ಕಮಲ ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಜನಮನ್ನಣೆ ದೊರೆತಿದೆ ಎಂದು ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್ ಹೇಳಿದರು.

ಸಂಘದ ಶತಮಾನೋತ್ಸವ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿ ಬಿಜೆಪಿ ಕೈಸೇರಿದೆ. ಇಡೀ ಜಗತ್ತು ನರೇಂದ್ರ ಮೋದಿ ಅವರ ನಾಯಕತ್ವ ಒಪ್ಪಿಕೊಂಡಿತ್ತು. ಆದರೆ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರದ ಪ್ರತಿರೂಪವೆಂಬಂತೆ ವರ್ತಿಸಿದರು. ಅಬಕಾರಿ ಹಗರಣದಲ್ಲಿ ಕೋಟ್ಯಂತರ ರೂ. ವಂಚನೆ ಆರೋಪದಡಿ ಜೈಲಿನಲ್ಲಿದ್ದು, ಜೈಲಿನಿಂದಲೇ ಆಡಳಿತ ಮಾಡುವುದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಅವಮಾನಿಸಿದ ವ್ಯಕ್ತಿಗೆ ಸೋಲಾಗಿದೆ ಎಂದರು.

ಪ್ರಮುಖರಾದ ತೀರ್ಥಯ್ಯ, ಸಿಮೆಂಟ್ ಮಂಜಣ್ಣ, ಚನ್ನೇಶ್, ರಾಮಲಿಂಗಯ್ಯ, ಸುರೇಶಪ್ಪ, ಕಾ.ರಾ.ನಾಗರಾಜ್, ರಂಗಸ್ವಾಮಿ, ರಾಜಶೇಖರ್, ಧನುಷ್, ಸರಸ್ವತಿ, ಸತೀಶ್, ಅನ್ನಪೂರ್ಣಾ, ಸಾಗರ್, ಲತಾ, ಮಂಜುಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net