ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಮಹಿಳೆ ಮಾಡಿದ ಕೆಲಸವೇನು ನೋಡಿ..

mobuile
Published on

ನವದೆಹಲಿ: ರಸ್ತೆ ಮೇಲೆ ನಡೆದುಕೊಂಡು ಹೋಗುವಾಗ ಯಾರಾದರೂ ಹಿಂಬಾಲಿಸಿದರೆ ಒಮ್ಮೆ ಗಾಬರಿಯಾಗುವುದು ಕಂಡಿತ. ಆದರೆ ಮೊಬೈಲ್​ ಹಿಡಿದು ಮಾತನಾಡಿಕೊಂಡು ಹೊರಟರೆ, ಮುಂದೆ-ಹಿಂದೆ ಬರುವವರ ಪರಿವೆಯೇ ಇಲ್ಲದಂತೆ ನಡೆದು ಹೋಗುವವರೂ ಇದ್ದಾರೆ. ಅದೇ ರೀತಿ ಫೋನ್​ ಹಿಡಿದು ಹೋಗುತ್ತಿದ್ದ ಮಹಿಳೆಗೆ ಏನಾಯಿತೆಂಬುದನ್ನು ನೀವೇ ನೋಡಿ..

ಆ ಮಹಿಳೆ ಫೋನ್​ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಳೆ. ಹಿಂದಿನಿಂದ ಬಂದ ಜ್ಯೋತಿ ಹೆಸರಿನ ಮಹಿಳೆ ಇದಕ್ಕಿದ್ದಂತೆ ಆಕೆಯ ಮೊಬೈಲ್​ಗೆ ಕೈ ಹಾಕಿ ಅದನ್ನು ಕಿತ್ತುಕೊಳ್ಳುತ್ತಾಳೆ. ತಕ್ಷಣ ಮೊಬೈಲ್​ ಕೈ ಬಿಡದ ಮಹಿಳೆ ಸಾಕಷ್ಟು ಪ್ರಯತ್ನ ಪಟ್ಟರೂ ಮೊಬೈಲ್​ ಕಾಪಾಡಿಕೊಳ್ಳಲು ಆಗುವುದಿಲ್ಲ. ಕೆಲ ಸೆಕೆಂಡುಗಳ ಕಾಲ ಎಳೆದಾಡಿದ ಜ್ಯೋತಿ ಮೊಬೈಲ್​ ಕಸಿದುಕೊಂಡು ಅರಾಮಾಗಿ ನಡೆದುಕೊಂಡು ಹೋಗುತ್ತಾಳೆ.

ಈ ರೀತಿಯ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿತ್ತು. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಿಸಿ ಕ್ಯಾಮರಾದಲ್ಲಿ ಕಾಣಿಸಿಕೊಂಡ ಮಹಿಳೆಯ ಗುರುತಿ ಪತ್ತೆ ಹಚ್ಚಿ ಆಕೆಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿ ಪೊಲೀಸರ ವಶದಲ್ಲಿದ್ದಾಳೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net