

ಲಖನೌ: ಅವರಿಬ್ಬರು ಪ್ರೀತಿಸಿದ್ದರು. ಪ್ರೀತಿಗೆ ಒಪ್ಪಿದ್ದ ಕುಟುಂಬ ಮದುವೆಗೂ ಸಿದ್ಧತೆ ನಡೆಸಿತ್ತು. ಮದುವೆಗೆ ಇನ್ನೇನು ಐದೇ ದಿನಗಳಿವೆ ಎನ್ನುವಾಗ ಭಾವಿ ಪತಿಯೊಂದಿಗೆ ಶಾಪಿಂಗ್ಗೆ ಹೋಗಿದ್ದ ಯುವತಿ ರಸ್ತೆ ಬದಿ ಹೆಣವಾಗಿ ಪತ್ತೆಯಾಗಿದ್ದಾಳೆ.
ಉತ್ತರ ಪ್ರದೇಶದ ಮೊರದಾಬಾದ್ನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಟೀನಾ ಹಾಗೂ ಜಿತಿನ್ಗೆ ಮದುವೆ ನಿಶ್ಚಯವಾಗಿತ್ತು. ಪ್ರೀತಿಸಿದ್ದ ಅವರಿಬ್ಬರ ಮದುವೆಗೆ ಸ್ವತಃ ಜಿತಿನ್ ಒಪ್ಪಿಗೆ ನೀಡಿರಲಿಲ್ಲವಂತೆ. ಆದರೂ ಹಠ ಮಾಡಿದ ಟೀನಾ ಮದುವೆಗೆ ಒಪ್ಪಿಸಿದ್ದಳು. ಮದುವೆಗೆ ಒಂದಿಷ್ಟು ಸೀರೆ ತೆಗೆದುಕೊಳ್ಳಬೇಕು, ನೀನು ಬಂದು ಸೀರೆ ಆಯ್ಕೆಗೆ ಸಹಾಯ ಮಾಡು ಎಂದು ಜಿತಿನ್ ಟೀನಾಳಿಗೆ ಸೋಮವಾರ ಕರೆದಿದ್ದಾನೆ. ಅದಕ್ಕೆ ಒಪ್ಪಿದ ಟೀನಾ ಅಂಗಡಿಗೆ ಹೋಗಲು ಸಿದ್ಧಳಾಗಿದ್ದಾಳೆ. ಆಕೆಯ ತಾಯಿ ಮಗಳನ್ನು ಬಸ್ ನಿಲ್ದಾಣವರೆಗೆ ಬಿಟ್ಟು ಬಂದಿದ್ದಾಳೆ.
ಬೆಳಗ್ಗೆ ಮಗಳು ಭಾವಿ ಪತಿಯೊಂದಿಗೆ ಶಾಪಿಂಗ್ಗೆ ಹೋಗಿದ್ದಾಳೆ ಎಂದುಕೊಂಡಿದ್ದ ಪೋಷಕರಿಗೆ ಮಧ್ಯಾಹ್ನದ ಹೊತ್ತಿದೆ ಅಘಾತವೊಂದು ಎದುರಾಗಿದೆ. ಮನೆಗೆ ಬಂದ ಪೊಲೀಸರು, ರಸ್ತೆಯಲ್ಲಿ ಹೆಣವೊಂದಿದೆ, ನಿಮ್ಮ ಮಗಳಿರಬಹುದೇ ಎಂದು ಬಂದು ನೋಡಿ ಎಂದು ಹೇಳಿದ್ದಾರೆ. ಗಾಬರಿಯಿಂದ ಓಡಿಬಂದ ಪೋಷಕರು ಮಗಳ ಶವವನ್ನು ಕಂಡು ಅಲ್ಲೇ ಜೋರಾಗಿ ಅಳಲಾರಂಭಿಸಿದ್ದಾರೆ.
ಆಕೆ ತನ್ನ ಭಾವಿ ಪತಿಯೊಂದಿಗೆ ಶಾಪಿಂಗ್ಗೆ ಹೋಗಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಜಿತಿನ್ನನ್ನು ಬಂಧಿಸಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. (ಏಜೆನ್ಸೀಸ್)