22 ವರ್ಷದಿಂದ ನಾಪತ್ತೆಯಾಗಿದ್ದ ಮಗ ಸನ್ಯಾಸಿಯಾಗಿ ವಾಪಸ್: ಕಣ್ಣೀರು ಹಾಕಿದ ತಾಯಿ!

a monk
Published on

ಉತ್ತರಪ್ರದೇಶ: ಮಗನ 11 ವಯಸ್ಸಿನಲ್ಲಿ ಮಾರ್ಬಲ್ ಆಟ ಆಡುತ್ತಿದ್ದ ಮಗನ ಮೇಲೆ ಪೋಷಕರು ರೇಗಾಡಿದ್ದಾರೆ. ಇದಾದ ನಂತರ ಮಗ ನಾಪತ್ತೆಯಾಗಿದ್ದ. ಈ ಬಗ್ಗೆ ಪೊಲೀಸರಿಗೂ ನಾಪತ್ತೆ ಬಗ್ಗೆ ದೂರು ನೀಡಿದ್ದರು. ಎಷ್ಟೇ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಮಗು ಇಲ್ಲದ ನೋವಿನಲ್ಲಿ ತಾಯಿ ದಿನಾ ಕಣ್ಣೀರು ಹಾಕುತ್ತಿದ್ದಳು.

ಇದಾದ ಬರೋಬ್ಬರಿ ಎರಡು ದಶಕಗಳ ಹಿಂದೆ ನಾಪತ್ತೆಯಾಗಿದ್ದ 11 ವರ್ಷದ ಬಾಲಕ ತನ್ನ ತಾಯಿಯ ಪ್ರಾರ್ಥನೆಯಿಂದ ಮನೆಗೆ ಬಂದಿದ್ದಾನೆ. ಆದರೆ ಮಗ ಸನ್ಯಾಸಿಯಾಗಿ ಮನೆಗೆ ಮರಳಿದ್ದಾನೆ. ಹೆತ್ತ ತಾಯಿ ತನ್ನ ಮಗನನ್ನು ಮುದ್ದಾಡಲು ಸಾಧ್ಯವಾಗದೇ, ಸನ್ಯಾಸತ್ವನ್ನು ಒಪ್ಪಿಕೊಳ್ಳಲು ಸಾಧ್ಯವಾಗದೇ ನೋವಿನಿಂದ ಕಣ್ಣೀರಿಟ್ಟ ಘಟನೆ ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದಿದೆ.

ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಸಂಬಂಧವನ್ನು ತೋರಿಸುತ್ತದೆ. ತನ್ನ ಮಗ ಸನ್ಯಾಸಿಯಾಗಿ ಸಂಗೀತ ವಾದ್ಯವಾದ ತಂಬೂರಿಯನ್ನು ನುಡಿಸುತ್ತಾ ಜಾನಪದ ಹಾಡುಗಳನ್ನು ಹಾಡುತ್ತಾನೆ. ಇದನ್ನು ಊರಿನ ಮಕ್ಕಳು ಸಂಬಂಧಿಕರು ಕೇಳಿಸಿಕೊಳ್ಳುತ್ತಿದ್ದರೆ ಆತನ ತಾಯಿ ಮಗನನ್ನು ನೆನೆದು ಕಣ್ಣೀರು ಹಾಕಿದ್ದಾಳೆ. ಈ ವಿಡಿಯೋ ಭಾರೀ ವೈರಲ್​ ಆಗಿದೆ.

ರತಿಪಾಲ್ ಸಿಂಗ್ ತನ್ನ ಕುಟುಂಬದ ಜೊತೆ ದೆಹಲಿಯಲ್ಲಿ ವಾಸವಿದ್ದಾರೆ. ಕೆಲಸ, ವ್ಯವಾಹರದ ಮೂಲಕ ಪತ್ನಿ, ಮಗ ಸೇರಿದ ಕುಟುಂಬ ಖುಷಿಯಾಗಿ ಸಾಗುತ್ತಿತ್ತು. 2002ರಲ್ಲಿ ರತಿಪಾಲ್ ಸಿಂಗ್ ಹಾಗೂ ಭಾನುಮತಿ ಪುತ್ರ ಪಿಂಕು ಸಿಂಗ್ ಪೋಷಕರ ವಿರುದ್ದ ಆಕ್ರೋಶಗೊಂಡಿದ್ದ. ಮಾರ್ಬಲ್‌ನಲ್ಲಿ ಆಟವಾಡುತ್ತಿದ್ದ ಮಗನಿಗೆ ರತಿಪಾಲ್ ಸಿಂಗ್ ಗದರಿದ್ದಾರೆ. ಇತ್ತ ತಾಯಿ ಕೂಡ ಬೈದಿದ್ದಾರೆ. ಈ ಆಕ್ರೋಶಕ್ಕೆ 11ನೇ ವಯಸ್ಸಿನ ಪಿಂಕು ಸಿಂಗ್ ಮನೆ ಬಿಟ್ಟು ಹೋಗಿದ್ದ.

ದೆಹಲಿಯಲ್ಲಿರುವ ರತಿಪಾಲ್ ಹಾಗೂ ಭಾನುಮತಿಗೆ ತನ್ನ ಊರಾದ ಖರೌಲಿಯಿಂದ ಕರೆಯೊಂದು ಬಂದಿತ್ತು. ನಿಮ್ಮ ಮಗ ಮೂಲ ಮನೆಗೆ ಮರಳಿದ್ದಾನೆ. ತಕ್ಷಣವೇ ಬನ್ನಿ ಎಂಬ ಮಾಹಿತಿ ಆದಾಗಿತ್ತು. ಪೋಷಕರ ಸಂತಸಕ್ಕೆ ಪಾರವೇ ಇರಲಿಲ್ಲ. ದೆಹಲಿಯಿಂದ ಓಡೋಡಿ ಬಂದ ಪೋಷಕರಿಗೆ ಆಘಾತ ಕಾದಿತ್ತು.

ಕಾರಣ ಮಗ ಸನ್ಯಾಸಿಯಾಗಿದ್ದ. ಸಂತಸದಲ್ಲಿ ಆಗಮಿಸಿದ ಪೋಷಕರಿಗೆ ಮಗನನ್ನು ಅಪ್ಪಿಕೊಳ್ಳಲು, ಮುದ್ದಾಡಲು ಸಾಧ್ಯವಾಗಲಿಲ್ಲ.  ತಾಯಿ ಮುಂದೆ ಸನ್ಯಾಸಿ ಭಿಕ್ಷೆಯ ಜಾನಪದ ಹಾಡು ಹೇಳಿದ್ದಾನೆ. ಇತ್ತ ತಾಯಿ ಹಾಗೂ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಾಯಿಯಿಂದ ಭಿಕ್ಷೆ ಪಡೆದು ಮರಳಿದ್ದಾನೆ.

ಇದೇ ವೇಳೆ ತನ್ನ ಪುತ್ರ ಸದ್ಯಕ್ಕೆ ಆಶ್ರಯ ಪಡೆದಿರುವ ಧಾರ್ಮಿಕ ಕೇಂದ್ರ 11 ಲಕ್ಷ ರೂಪಾಯಿಗೆ ಬೇಡಿಕೆ ಇಡುತ್ತಿದೆ. 11 ಲಕ್ಷ ರೂಪಾಯಿ ನೀಡಿದರೆ ಮಗನನ್ನು ಸನ್ಯಾಸತ್ವದಿಂದ ಮಕ್ತಿಕೊಡಿಸುವುದಾಗಿ ಹೇಳಿದೆ ಎಂದಿದ್ದಾರೆ. ನನ್ನ ಬಳಿ ಅಷ್ಟು ಮೊತ್ತವಿಲ್ಲ, ನಾನು ಹೇಗೆ ಪಾವತಿ ಮಾಡಲಿ. ಪೊಲೀಸರು ಈ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ನಮಗೆ ಪುತ್ರನ ಮರಳಿಸಿ ಎಂದು ತಂದೆ ರಿತಿಲಾಲ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net